ಆ ತಪ್ಪುಗಳನ್ನೀಗ ಮಾಡಲ್ಲ, ಭಾರತಕ್ಕೆ ಟೆಸ್ಟ್​ನಲ್ಲಿ ತಕ್ಕ ಪೈಪೋಟಿ ನೀಡುತ್ತೇವೆ: ಕಿವೀಸ್ ಕೋಚ್​

author img

By

Published : Nov 23, 2021, 8:42 PM IST

New Zealand coach Gary Stead

ಈ ಹಿಂದಿನ ಭಾರತದ ಪ್ರವಾಸದಲ್ಲಿ 4 ವೇಗಿಗಳೊಂದಿಗೆ ಆಡಿ ನಾವು ವೈಫಲ್ಯ ಅನುಭವಿಸಿದ್ದೇವೆ. ಆದರೆ ಈಗ ಅಂತಹ ತಪ್ಪುಗಳನ್ನು ನಾವು ಮಾಡಲು ಹೋಗುವುದಿಲ್ಲ. ಅವಶ್ಯಕತೆ ಬಂದರೆ ಮೂವರು ಸ್ಪಿನ್ನರ್​ಗಳೊಂದಿಗೆ ಕಣಕ್ಕಿಳಿದು ಭಾರತ ತಂಡಕ್ಕೆ ಪೈಪೋಟಿ ನೀಡಲಿದ್ದೇವೆ ಎಂದು ಕಿವೀಸ್ ಕೋಚ್ ಗ್ಯಾರಿ ಸ್ಟೆಡ್​ ತಿಳಿಸಿದ್ದಾರೆ.

ಕಾನ್ಪುರ: ಭಾರತಕ್ಕೆ ಪ್ರವಾಸ ಕೈಗೊಂಡಿದ್ದ ವೇಳೆ ನಾವು ಮಾಡಿರುವ ತಪ್ಪುಗಳನ್ನು ಪ್ರಸ್ತುತ ಟೆಸ್ಟ್​ ಸರಣಿಯ ವೇಳೆ ಮಾಡಲು ಹೋಗುವುದಿಲ್ಲ ಎಂದು ನ್ಯೂಜಿಲ್ಯಾಂಡ್ ತಂಡದ ಮುಖ್ಯ ಕೋಚ್​ ಗ್ಯಾರಿ ಸ್ಟೆಡ್​ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

ಕಾನ್ಪುರದಲ್ಲಿ ಗುರುವಾರದಿಂದ ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವೆ ಮೊದಲ ಟೆಸ್ಟ್​ ಪಂದ್ಯ ಆರಂಭವಾಗಲಿದೆ. ಈ ಪಂದ್ಯದಲ್ಲಿ ಭಾರತ ತಂಡ ನಾಯಕ ವಿರಾಟ್​ ಕೊಹ್ಲಿ ಮತ್ತು ಆರಂಭಿಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಆಡಲಿದೆ.

ಈ ಹಿಂದೆ ನಮ್ಮ ತಂಡ ಭಾರತ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಏಕೆ ವಿಫಲವಾಗಿದೆ ಎಂದು ಪರಿಶೀಲನೆ ಮಾಡಿದ್ದೇವೆ. ಈಗ ಆ ತಪ್ಪುಗಳು ಮರುಕಳುಹಿಸದಂತೆ ನಾವು ಜಾಗ್ರತೆ ವಹಿಸುತ್ತೇವೆ. ನಾವು 4 ಸೀಮಿರ್​ಗಳು ಮತ್ತು ಒಬ್ಬ ಸ್ಪಿನ್ನರ್​ ಸಂಯೋಜನೆಯಲ್ಲಿ ಇಲ್ಲಿ ಆಡಿದರೆ ಯಾವುದೇ ಪ್ರಭಾವ ನೋಡುವುದಿಲ್ಲ. ಹಾಗಾಗಿ ಮೂರು ಸ್ಪಿನ್ನರ್​ಗಳನ್ನು ತೆಗೆದುಕೊಂಡರೆ ನಾವು ಇಲ್ಲಿ ಭಾರತವನ್ನು ಮಣಿಸಬಹುದಾದ ಅವಕಾಶಗಳಿವೆ.

ಮೊದಲ ಪಂದ್ಯದಲ್ಲೇ ಭಾರತವನ್ನು ಮಣಿಸಿದರೆ ನಮಗೆ ಮುಂದಿನ ಪಂದ್ಯಗಳಲ್ಲಿ ಅದೇ ಸೂತ್ರವನ್ನು ಪ್ರಯೋಗಿಸುತ್ತೇವೆ ಎಂದು ಹೇಳಲಾಗದು. ಪಿಚ್​ ಪರಿಸ್ಥಿತಿಗೆ ಅನುಗುಣವಾಗಿ ಆಗಿಂದಾಗ್ಗೆ ತಂಡದ ತಂತ್ರಗಾರಿಕೆಗಳನ್ನು ಬದಲಾಯಿಸಿಕೊಳ್ಳಬೇಕು. ನಾವು ಟೆಸ್ಟ್​ ಕ್ರಿಕೆಟ್​ನಲ್ಲಿ ಕೆಲವು ಸೂತ್ರಗಳನ್ನು ಪಾಲಿಸಿಕೊಂಡು, ನಮ್ಮ ಆಟವನ್ನು ಕೂಡ ಬದಲಾಯಿಸಿಕೊಳ್ಳುತ್ತೇವೆ ಎಂದು ಸ್ಟೆಡ್​ ವಿವರಿಸಿದರು.

ಸಾಕಷ್ಟು ಸಮಯದಿಂದ ವಿಶ್ರಾಂತಿಯಿಲ್ಲದೆ ಕ್ರಿಕೆಟ್ ಆಡುತ್ತಿರುವ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ರಿಷಭ್ ಪಂತ್​ಗೆ ಪ್ರಸ್ತುತ ಟೆಸ್ಟ್​ ಸರಣಿಯಲ್ಲಿ ವಿಶ್ರಾಂತಿ ನೀಡಲಾಗಿದೆ. ಇನ್ನು ಟಿ20 ಸರಣಿಯಿಂದ ಹೊರಗುಳಿದಿದ್ದ ವಿರಾಟ್​ ಕೊಹ್ಲಿ ಕೂಡ ಮೊದಲ ಟೆಸ್ಟ್​ನಲ್ಲಿ ಆಡುತ್ತಿಲ್ಲ. ಸ್ಟಾರ್​ ಆರಂಭಿಕ ರಾಹುಲ್ ಕೂಡ ಗಾಯದಿಂದ ಟೆಸ್ಟ್​ ಸರಣಿಯಿಂದ ಹೊರಬಿದ್ದಿದ್ದಾರೆ. ಗುರುವಾರದಿಂದ ಆರಂಭವಾಗಲಿರುವ ಮೊದಲ ಟೆಸ್ಟ್​ನಲ್ಲಿ ಯುವ ಆಟಗಾರರೊಂದಿಗೆ ಭಾರತ ಕಣಕ್ಕಿಳಿಯಲಿದೆ.

ಇದನ್ನೂ ಓದಿ: ಶತಕದ ಬಗ್ಗೆ ಚಿಂತೆಯಿಲ್ಲ, ತಂಡಕ್ಕೆ ಅಗತ್ಯವಾದ ರನ್​ಗಳಿಸುವುದರಲ್ಲೇ ನನಗೆ ತೃಪ್ತಿ: ಚೇತೇಶ್ವರ್​ ಪೂಜಾರ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.