ETV Bharat / sports

ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಮೂರು ಪಂದ್ಯಗಳ ಸರಣಿ ಆಗಿರಬೇಕಿತ್ತು: ವಾರ್ನರ್​

author img

By

Published : Jun 4, 2023, 5:16 PM IST

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಫೈನಲ್​ ಪಂದ್ಯ ಇಂಗ್ಲೆಂಡ್​ನ ಓವೆಲ್​ನಲ್ಲಿ ಇದೇ ತಿಂಗಳ 7 ರಿಂದ 11 ವರೆಗೆ ನಡೆಯಲಿದೆ.

ವಾರ್ನರ್​
David Warner

ಬೆಕೆನ್‌ಹ್ಯಾಮ್ (ಇಂಗ್ಲೆಂಡ್): ಟೆಸ್ಟ್​ ಮಾನ್ಯತೆ ಪಡೆದಿರುವ ರಾಷ್ಟ್ರಗಳು ಆಡುವ ಪಂದ್ಯಗಳನ್ನು ಲೆಕ್ಕಕ್ಕೆ ತೆಗೆದುಗೊಂಡು ಅದಕ್ಕೆ ಐಸಿಸಿ ಅಂಕಗಳನ್ನು ನೀಡಿ ಅದರಲ್ಲಿ ಟಾಪ್ ರ್‍ಯಾಂಕಿಂಗ್​ನಲ್ಲಿ ಬರುವ ಎರಡು ತಂಡಗಳು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಸ್ಪರ್ಧಿಸಿ, ಗೆದ್ದವರು ಚಾಂಪಿಯನ್ ಪಟ್ಟ ಅಲಂಕರಿಸಲಿದ್ದಾರೆ. 2019 ರಿಂದ 21ರ ವರೆಗೆ ಮೊದಲ ಟೆಸ್ಟ್​ ಚಾಂಪಿಯನ್​ ಶಿಪ್​ ನಡೆಯಿತು. ಇದರಲ್ಲಿ ನ್ಯೂಜಿಲೆಂಡ್​ ಚಾಂಪಿಯನ್​ ಆಗಿ ಹೊರಹೊಮ್ಮಿತು.

2021 ರಿಂದ 23 ರ ನಡುವಿನ ಟೆಸ್ಟ್ ಚಾಂಪಿಯನ್​ ಶಿಪ್​ ರೇಸ್​ನಲ್ಲಿ ಹಲವು ರಾಷ್ಟ್ರಗಳು ಎರಡು ವರ್ಷಗಳಿಂದ ಹೋರಾಟ ನಡೆಸಿದವು. ಆದರೆ ಕೊನೆಗೆ ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್​ಗೆ ಪ್ರವೇಶ ಪಡೆದುಕೊಂಡಿದೆ. ಭಾರತ ತಂಡ ಕಳೆದ ಬಾರಿಯ ಫೈನಲ್​ನಲ್ಲಿ ರನ್ನರ್​ ಅಪ್​ ಆಗಿತ್ತು. ಈ ಬಾರಿ ಮತ್ತೆ ಫೈನಲ್ ಪ್ರವೇಶಿಸಿದೆ. ಜೂನ್​ 7 ರಿಂದ 11ರ ವರೆಗೆ ಅಂತಿಮ ಪಂದ್ಯ ಇಂಗ್ಲೆಂಡ್​ನ ಓವೆಲ್ ಮೈದಾನದಲ್ಲಿ ನಡೆಯಲಿದ್ದು, ಉಭಯ ತಂಡಗಳು ಭರ್ಜರಿ ತಯಾರಿ ನಡೆಸಿಕೊಳ್ಳುತ್ತಿವೆ.

ಆದರೆ ಎರಡು ವರ್ಷಗಳ ಕಾಲ ಲೀಗ್​ ಪಂದ್ಯಗಳ ರೀತಿಯಲ್ಲಿ ಸರಣಿಗಳನ್ನು ಆಡಿಕೊಂಡು ಬಂದ ದೇಶಗಳು ಕೇವಲ ಒಂದು ಪಂದ್ಯದ ಸೋಲಿನಿಂದ ಚಾಂಪಿಯನ್​ ಪಟ್ಟವನ್ನು ಪಡೆದುಕೊಳ್ಳುವುದನ್ನು ಕಳೆದುಕೊಂಡಂತಾಗುತ್ತದೆ. ಇತರ ವಿಶ್ವ ಕಪ್​ಗಳು ಗುಂಪು ಹಂತದ ಪಂದ್ಯಗಳ ನಂತರ ನಡೆಯುವುದರಿಂದ ಒಂದು ಪಂದ್ಯದಲ್ಲಿ ಫೈನಲ್​ ನಿರ್ಧಾರ ಆದಂತೆ ಆಗುವುದಿಲ್ಲ. ಆದರೆ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಕೇವಲ ಒಂದೇ ಪಂದ್ಯದಲ್ಲಿ ಮುಕ್ತಾಯವಾಗುತ್ತದೆ. ಇದನ್ನು 3 ಪಂದ್ಯಗಳ ಸರಣಿ ಮೂಲಕ ನಡೆಸಬೇಕು ಎಂದು ಹಲವರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಅದಕ್ಕೆ ಈಗ ವಾರ್ನರ್​ ಕೂಡಾ ಧ್ವನಿಗೂಡಿಸಿದ್ದಾರೆ.

"ಇದು ಅದ್ಭುತವಾಗಿದೆ ಎಂದು ನಾನು ಭಾವಿಸುತ್ತೇನೆ. ನಾನು ನಿರ್ಣಾಯಕ ಎಂದು ಹೇಳುವುದಿಲ್ಲ. ಆದರೆ ಫೈನಲ್​ ಟೆಸ್ಟ್ ಕ್ರಿಕೆಟ್‌ನೊಂದಿಗೆ ಕನಿಷ್ಠ ಮೂರು ಪಂದ್ಯಗಳ ಸರಣಿಯಾಗಬೇಕು ಎಂದು ನಾನು ಭಾವಿಸುತ್ತೇನೆ. ನೀವು ಎರಡು ವರ್ಷಗಳ ಉತ್ತಮ ಕ್ರಿಕೆಟ್ ಅನ್ನು ಆಡುತ್ತೀರಿ, ನಂತರ ನಾವು ಫೈನಲ್​ ಎದುರಿಸುವ ಜಾಗ ತಟಸ್ಥ ಸ್ಥಳವಾಗಿರುತ್ತದೆ. ನಾವೆಲ್ಲರೂ ಇಲ್ಲಿ ಮೊದಲು ಆಡಿದ್ದೇವೆ. ಆದರೆ ಈ ಪಂದ್ಯದಲ್ಲಿ ಎದುರಾಳಿ ಇಲ್ಲಿನ ತಂಡ ಆಗಿರುವುದಿಲ್ಲ" ಎಂದು ಡೇವಿಡ್​ ವಾರ್ನರ್ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.

ಎರಡೂ ತಂಡಗಳು ಉತ್ತಮವಾಗಿದೆ. ಇಂಗ್ಲೆಂಡ್​ ಪಿಚ್​ನಲ್ಲಿ ಭಾರತೀಯ ಬೌಲರ್​ಗಳನ್ನು ಎದುರಿಸಲು ಹೆಚ್ಚು ಉತ್ಸುಕನಾಗಿದ್ದೇನೆ. ಬಲಿಷ್ಠ ಉಭಯ ತಂಡಗಳ ಪೈಪೋಟಿ ಯಾವಾಗಲೂ ಹೆಚ್ಚಿನ ಮನರಂಜನೆ ಮತ್ತು ಒಳ್ಳೆಯ ಆಟವನ್ನು ಪ್ರೇಕ್ಷಕರಿಗೆ ನೀಡುತ್ತದೆ ಎಂದು ವಾರ್ನರ್​ ಹೇಳಿದ್ದಾರೆ.

ಉಭಯ ತಂಡಗಳು ಓವೆಲ್​ ತಲುಪಿದ್ದು, ಅಭ್ಯಾಸವನ್ನು ಆರಂಭಿಸಿವೆ. ಇನ್ನು ಮೂರೇ ದಿನದಲ್ಲಿ ಪಂದ್ಯಗಳು ಆರಂಭವಾಗಲಿದೆ.

ಇದನ್ನೂ ಓದಿ: WTC Final 2023: ಟೆಸ್ಟ್​ನಲ್ಲಿ ದಾಖಲೆಗಳನ್ನು ಹೊಂದಿರುವ ಈ ಐವರು ಆಟಗಾರರ ಮೇಲೆ ಹೆಚ್ಚಿನ ನಿರೀಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.