ETV Bharat / sports

ವಿಶ್ವಕಪ್ ಕ್ರಿಕೆಟ್​​: ಗಾಯಗೊಂಡು ಇಂಗ್ಲೆಂಡ್​ ತಂಡದಿಂದ ಹೊರಬಿದ್ದ ಟೋಪ್ಲಿ, ಕಾರ್ಸೆಗೆ ಸ್ಥಾನ

author img

By ETV Bharat Karnataka Team

Published : Oct 23, 2023, 5:22 PM IST

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ-ಇಂಗ್ಲೆಂಡ್‌ ನಡುವಿನ ಪಂದ್ಯದ ವೇಳೆ ರೀಸ್ ಟೋಪ್ಲಿ ಎಡಗೈ ತೋರು ಬೆರಳಿಗೆ ಗಾಯವಾಗಿತ್ತು.

Brydon Carse
Brydon Carse

ಹೈದರಾಬಾದ್: ವಿಶ್ವಕಪ್​ ಕ್ರಿಕೆಟ್‌ನಲ್ಲಿ ಕಳಪೆ ಪ್ರದರ್ಶನದಿಂದ ಕಂಗೆಟ್ಟಿರುವ ಇಂಗ್ಲೆಂಡ್​ ತಂಡಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ತಂಡದ ಸ್ಟಾರ್​ ಅನುಭವಿ ವೇಗಿ ರೀಸ್ ಟೋಪ್ಲಿ ಗಾಯಗೊಂಡು ಐಸಿಸಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಆಂಗ್ಲರ 15 ಸದಸ್ಯರ ಬಳಗಕ್ಕೆ ಅನನುಭವಿ ವೇಗಿ ಬ್ರೈಡನ್ ಕಾರ್ಸೆ ಅವರನ್ನು ಸೇರಿಸಿಕೊಳ್ಳಲಾಗಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸೋಮವಾರ ಈ ಕುರಿತು ಮಾಹಿತಿ ನೀಡಿದೆ.

  • 🚨 𝗥𝗲𝗲𝗰𝗲 𝗧𝗼𝗽𝗹𝗲𝘆 𝗔𝗽𝗽𝗿𝗲𝗰𝗶𝗮𝘁𝗶𝗼𝗻 𝗣𝗼𝘀𝘁

    • Our highest wicket-taker of the World Cup
    • Eight wickets in three games at 22.87
    • Returned to the field and bowled with a broken finger
    • Still took two wickets despite his injury

    Thank you, Toppers ❤️… pic.twitter.com/1WyJHGlc5Q

    — England Cricket (@englandcricket) October 23, 2023 " class="align-text-top noRightClick twitterSection" data=" ">

ಶನಿವಾರ ಮುಂಬೈನ ವಾಂಖೆಡೆಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ ನಡುವಿನ ಪಂದ್ಯದ ವೇಳೆ ರೀಸ್ ಟೋಪ್ಲಿ ಎಡಗೈ ತೋರು ಬೆರಳಿನ ಗಾಯಕ್ಕೆ ತುತ್ತಾಗಿದ್ದರು. ಇದರಿಂದಾಗಿ ಅವರು ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ಗೂ ಬಂದಿರಲಿಲ್ಲ. ತೋರು ಬೆರಳಿನ ಮೂಳೆಗೆ ಗಾಯವಾಗಿರುವುದರಿಂದ ಅವರು ವಿಶ್ವಕಪ್​ನಿಂದ ಹೊರಗುಳಿದಿದ್ದಾರೆ. ಇಂಗ್ಲೆಂಡ್​ ತನ್ನ ತಂಡದಲ್ಲಿ ಜೋಫ್ರಾ ಆರ್ಚರ್‌ ಅವರನ್ನು ವಿಶ್ವಕಪ್​ನ ಪ್ರವಾಸಕ್ಕೆ ಮೀಸಲು ಆಟಗಾರ ಎಂದು ಘೋಷಿಸಿತ್ತು. ಆದರೆ ಆರ್ಚರ್‌ ಸಂಪೂರ್ಣ ಫಿಟ್​ ಆಗಿರದ ಕಾರಣ ತಂಡಕ್ಕೆ ಸೇರಿಸಿಕೊಂಡಿಲ್ಲ. ಬ್ರೈಡನ್ ಕಾರ್ಸ್‌ಗೆ ತಂಡದಲ್ಲಿ ಮಣೆ ಹಾಕಲಾಗಿದೆ.

ಬ್ರೈಡನ್ ಕಾರ್ಸ್ ಇಂಗ್ಲೆಂಡ್​ ತಂಡಕ್ಕಾಗಿ 12 ಏಕದಿನ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಜುಲೈನಲ್ಲಿ ಪಾಕಿಸ್ತಾನದ ತಂಡ ಇಂಗ್ಲೆಂಡ್​ಗೆ ಪ್ರವಾಸ ಮಾಡಿತ್ತು. ಈ ವೇಳೆ ಬ್ರೈಡನ್ ಪಾದಾರ್ಪಣೆ ಮಾಡಿದ್ದರು. ಪಾಕ್​ ವಿರುದ್ಧ ಐದು ವಿಕೆಟ್ ಉರುಳಿಸಿದ್ದು ಮತ್ತು ನೆದರ್ಲೆಂಡ್​, ನ್ಯೂಜಿಲೆಂಡ್ ವಿರುದ್ಧ ಗಮನಾರ್ಹ ಪ್ರದರ್ಶನ ನೀಡಿದ್ದೇ ವಿಶ್ವಕಪ್​ಗೆ ಅವರ ಆಯ್ಕೆಗೆ ಕಾರಣ. 12 ಏಕದಿನದಲ್ಲಿ 11 ಇನ್ನಿಂಗ್ಸ್ ಆಡಿರುವ ಬ್ರೈಡನ್ 5.75ರ ಎಕಾನಮಿ ದರದಲ್ಲಿ 14 ವಿಕೆಟ್​ ಪಡೆದಿದ್ದಾರೆ.

ಇಂಗ್ಲೆಂಡ್ ತನ್ನ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋತು ಅಂಕಪಟ್ಟಿಯುಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ. ಐದನೇ ಪಂದ್ಯವನ್ನು ಆಂಗ್ಲರು ಅ.26 ಗುರುವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಆಡಲಿದ್ದಾರೆ. ಈ ಪಂದ್ಯದ ವೇಳೆಗೆ ಬ್ರೈಡನ್ ಕಾರ್ಸೆ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ಪ್ಲೇ ಆಫ್​ ಸ್ಥಾನಕ್ಕೆ ಪ್ರವೇಶ ಪಡೆಯಲು ಇಂಗ್ಲೆಂಡ್​ಗೆ ಈ ಪಂದ್ಯವನ್ನು ಗೆಲ್ಲುವುದು ಅನಿವಾರ್ಯ. ಅ. 29 ರಂದು ಭಾನುವಾರ ಭಾರತವನ್ನು ಲಖನೌ ಮೈದಾನದಲ್ಲಿ ಇಂಗ್ಲೆಂಡ್​ ಎದುರಿಸಲಿದೆ. ಇಂಗ್ಲೆಂಡ್​ ನ. 4 ಆಸ್ಟ್ರೇಲಿಯಾ, ನ.8 ನೆದರ್ಲೆಂಡ್​ ಮತ್ತು ನ. 11 ಪಾಕಿಸ್ತಾನವನ್ನು ಎದುರಿಸಲಿದೆ. ಇದರಲ್ಲಿ ಭಾರತ, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ಪ್ರಬಲ ಮುಖಾಮುಖಿ ಆಗಿರಲಿದೆ.

ಇದನ್ನೂ ಓದಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ, ಸ್ಪಿನ್ ದಂತಕಥೆ ಬಿಷನ್ ಸಿಂಗ್ ಬೇಡಿ ನಿಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.