ETV Bharat / sports

ಕಿವೀಸ್​ ಪಡೆಗೆ ದೊಡ್ಡ ಆಘಾತ: ಮತ್ತೆ ಗಾಯಕ್ಕೆ ತುತ್ತಾದ ವಿಲಿಯಮ್ಸನ್​​ ಬದಲಿಯಾಗಿ ಟಾಮ್ ಬ್ಲುಂಡೆಲ್​​ ಸೇರ್ಪಡೆ

author img

By ETV Bharat Karnataka Team

Published : Oct 14, 2023, 6:33 PM IST

ಕಿವೀಸ್​ ನಾಯಕ ಕೇನ್​ ವಿಲಿಯಮ್ಸನ್​ ಬಾಂಗ್ಲಾದೇಶದ ವಿರುದ್ಧ ಗಾಯಕ್ಕೆ ತುತ್ತಾಗಿದ್ದು, ಮುಂದಿನ ಪಂದ್ಯಗಳಿಗೆ ಲಭ್ಯವಿರುದಿಲ್ಲ.

Etv Bharat
Etv Bharat

ಚೆನ್ನೈ (ತಮಿಳುನಾಡು): ಕಿವೀಸ್​ ತಂಡ ನಿನ್ನೆ ಬಾಂಗ್ಲಾದೇಶದ ವಿರುದ್ಧ ವಿಶ್ವಕಪ್​ನ ಲೀಗ್​ ಹಂತದ ಮೂರನೇ ಗೆಲುವನ್ನು ದಾಖಲಿಸಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತಾದರೂ ದೊಡ್ಡ ನಷ್ಟಕ್ಕೆ ಒಳಗಾಗಿದೆ. ಇಂಡಿಯನ್​ ಪ್ರೀಮಿಯರ್​ ಲೀಗ್​ ವೇಳೆ ಗಾಯಕ್ಕೆ ತುತ್ತಾಗಿ ವಿಶ್ವಕಪ್​ ವೇಳೆಗೆ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದ ನಾಯಕ ಕೇನ್​ ವಿಲಿಯಮ್ಸನ್​ ಮತ್ತೆ ಗಾಯಕ್ಕೆ ತುತ್ತಾಗಿದ್ದಾರೆ. ವಿಶ್ವಕಪ್​ನ ಮುಂದಿನ ಪಂದ್ಯಗಳಿಗೆ ಟಾಮ್ ಬ್ಲುಂಡೆಲ್ ಅವರಿಗೆ ಕಿವೀಸ್​ ಟೀಮ್​ ಕರೆಕೊಟ್ಟಿದೆ.

ಅಭ್ಯಾಸ ಪಂದ್ಯ ವೇಳೆ ಗಾಯಕ್ಕೆ ತುತ್ತಾದ ಕೇನ್​ ವಿಶ್ವಕಪ್​ನ ಮೊದಲೆರಡು ಪಂದ್ಯಗಳಿಗೆ ಮೈದಾನಕ್ಕಿಳಿದಿರಲಿಲ್ಲ. ನಿನ್ನೆ ಚೆನ್ನೈನ ಚೆಪಾಕ್​ ಮೈದಾನದಲ್ಲಿ ಬಾಂಗ್ಲಾ ವಿರುದ್ಧ ನಡೆದ ಪಂದ್ಯಕ್ಕೆ ವಿಲಿಯಮ್ಸನ್ ಮರಳಿದ್ದರು. ಆದರೆ ನಿನ್ನೆಯ ಪಂದ್ಯದಲ್ಲಿ ಮತ್ತೆ ಗಾಯಕ್ಕೆ ತುತ್ತಾದರು.

78 ರನ್​ ಗಳಿಸಿ ಆಡುತ್ತಿದ್ದ ವೇಳೆ, ನಾಯಕ ಕೇನ್ ವಿಲಿಯಮ್ಸನ್ ಅವರ ಎಡಗೈ ಹೆಬ್ಬೆರಳಿಗೆ ಜೋರಾಗಿ ಬಾಲ್​ ತಗುಲಿದ್ದರಿಂದ ಮೂಳೆ ಮುರಿತಕ್ಕೆ ಒಳಗಾಗಿತ್ತು. ನೋವು ತಾಳಲಾರದೆ, ವಿಲಿಯಮ್ಸನ್​ ಗಾಯಗೊಂಡು ನಿವೃತ್ತಿ ಪಡೆದಿದ್ದರು. ನ್ಯೂಜಿಲೆಂಡ್ ತಂಡ ಶನಿವಾರ ಎಕ್ಸ್-ರೇ ನಂತರ ಮೂಳೆ ಮುರಿತದ ಬಗ್ಗೆ ಖಚಿತಪಡಿಸಿದೆ.

ನ್ಯೂಜಿಲೆಂಡ್​ ತಂಡದ ತಮ್ಮ ಎಕ್ಸ್​ ಆ್ಯಪ್​ ಖಾತೆಯಲ್ಲಿ ವಿಲಿಯಮ್ಸನ್​ ಗಾಯದ ಬಗ್ಗೆ ಅಪ್ಡೇಟ್​ ನೀಡಿದೆ. "ಕೇನ್ ವಿಲಿಯಮ್ಸನ್ ಅವರ ಎಡಗೈ ಹೆಬ್ಬೆರಳಿಗೆ ಮೂಳೆ ಮುರಿತ ಎಕ್ಸ್-ರೇ ಯಿಂದ ದೃಢವಾಗಿದೆ. ಅವರು ಮುಂದಿನ ತಿಂಗಳ ಆಟಗಳಿಗೆ ಲಭ್ಯವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ತಂಡದೊಂದೆಗೆ ಉಳಿಯುತ್ತಾರೆ. ಟಾಮ್ ಬ್ಲುಂಡೆಲ್ ಅವರು ವಿಲಿಯಮ್ಸನ್​ ಅವರ ಬದಲಾಗಿ ತಂಡದಲ್ಲಿರುತ್ತಾರೆ" ಎಂದು ತಿಳಿಸಿದೆ.

ಮೊದಲೆರಡು ಪಂದ್ಯದಲ್ಲಿ ಪ್ರಮುಖ ಆಟಗಾರರು ಇಲ್ಲದೇ ನ್ಯೂಜಿಲೆಂಡ್​ ಹಾಲಿ ಚಾಂಪಿಯನ್​ ತಂಡವಾದ ಇಂಗ್ಲೆಂಡ್​ ಮತ್ತು ಕ್ರಿಕೆಟ್​ ಶಿಶು ನೆದರ್​ಲ್ಯಾಂಡ್​ ವಿರುದ್ಧ ಭರ್ಜರಿ ಜಯ ದಾಖಲಿಸಿತ್ತು. ಆದರೆ ನಾಯಕ ವಿಲಿಯಮ್ಸನ್​ ತಂಡದಲ್ಲಿ ಇಲ್ಲದಿರುವುದು ದೊಡ್ಡ ಕೊರತೆಯಾಗಿ ಕಾಣದಿದ್ದರೂ, ನಾಯಕ ತಂಡದಲ್ಲಿ ಆಡದಿರುವುದು ವೀಕ್​ ಆಗಿ ಕಾಣಲಿದೆ.

"ಟಾಮ್ ಅವರು ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಪ್ರವಾಸಗಳಲ್ಲಿ ಏಕದಿನ ತಂಡದಲ್ಲಿದ್ದರು ಮತ್ತು ಉತ್ತಮ ಪ್ರದರ್ಶನ ನೀಡಿದ್ದರು. ಬ್ಯಾಟಿಂಗ್​ನಲ್ಲಿ ಟಾಮ್ ಯಾವುದೇ ಕ್ರಮಾಂಕದಲ್ಲಿ ಇಳಿದು ಆಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅಲ್ಲದೇ ವಿಕೆಟ್​ ಕೀಪಿಂಗ್​ ಸಹ ಮಾಡುತ್ತಾರೆ" ಎಂದು ನ್ಯೂಜಿಲೆಂಡ್ ಕೋಚ್ ಗ್ಯಾರಿ ಸ್ಟೆಡ್ ತಿಳಿಸಿದ್ದಾರೆ.

ಐಪಿಎಲ್​ ವೇಳೆ ಗಾಯಗೊಂಡ ಕೇನ್​: ಐಪಿಎಲ್​ನ ಉದ್ಘಾಟನಾ ಪಂದ್ಯದಲ್ಲಿ ಕೇನ್​ ವಿಲಿಯಮ್ಸನ್​ ಮೊದಲು ಗಾಯಕ್ಕೆ ತುತ್ತಾದರು. ಅದಿಕ ಶ್ರಮ ವಹಿಸಿ ವಿಶ್ವಕಪ್​ ವೇಳೆಗೆ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದರು. ಆದರೆ ಅಭ್ಯಾಸ ಪಂದ್ಯದಲ್ಲಿ ವಿಲಿಯಮ್ಸ್​ ಮತ್ತೆ ಗಾಯಕ್ಕೆ ತುತ್ತಾಗಿದ್ದರು. ಈಗ ಮತ್ತೆ ನಾಯಕನಿಲ್ಲದೇ ಕಿವೀಸ್​ ಮೈದಾನಕ್ಕಿಳಿಯಬೇಕಿದೆ.

ಇದನ್ನೂ ಓದಿ: Cricket World Cup: 8ನೇ ಗೆಲುವಿನ ಮೇಲೆ ಕಣ್ಣಿಟ್ಟಿರುವ ಭಾರತ.. ಉಭಯ ತಂಡಗಳ ಆಟಗಾರರ ಮಧ್ಯೆ ಹೀಗಿದೆ ಕಾದಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.