ETV Bharat / sports

WPL Final 2023.. ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್​ ಟ್ರೋಫಿ ಗೆದ್ದ ಮುಂಬೈ

author img

By

Published : Mar 26, 2023, 11:01 PM IST

Updated : Mar 26, 2023, 11:11 PM IST

ಡೆಲ್ಲಿ ತಂಡದ ವಿರುದ್ಧ ಗೆದ್ದು ಮುಂಬೈ ತಂಡವು ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್​ ಟ್ರೋಫಿಗೆ ಮುತ್ತಿಕ್ಕಿದೆ.

ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್​ ಟ್ರೋಫಿ ಗೆದ್ದ ಮುಂಬೈ
ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್​ ಟ್ರೋಫಿ ಗೆದ್ದ ಮುಂಬೈ

ಮುಂಬೈ(ಮಹಾರಾಷ್ಟ್ರ): ಮಹಿಳಾ ಪ್ರೀಮಿಯರ್ ಲೀಗ್​ನ ಚೊಚ್ಚಲ​ ಟ್ರೋಫಿಯನ್ನು ಮುಂಬೈ ವನಿತೆಯರು ಗೆದ್ದು ಬೀಗಿದ್ದಾರೆ. ಫೈನಲ್​ ಪಂದ್ಯದಲ್ಲಿ ಡೆಲ್ಲಿ ತಂಡ ನೀಡಿದ್ದ 132 ರನ್​ಗಳ ಗುರಿಯನ್ನು ಹರ್ಮನ್​ ​​ಪ್ರೀತ್​ ಕೌರ್​ ಪಡೆ ಕೇವಲ 3 ವಿಕೆಟ್​ಗಳನ್ನು ಕಳೆದುಕೊಂಡು ಪೂರೈಸಿತು. ಈ ಮೂಲಕ 7 ವಿಕೆಟ್​ಗಳಿಂದ ಮುಂಬೈ ಗೆಲುವು ಸಾಧಿಸಿತು.

ಇಂದು ಇಲ್ಲಿನ ಬ್ರಾಬೋರ್ನ್ ಮೈದಾನದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​​ ಆಯ್ಕೆ ಮಾಡಿಕೊಂಡಿತ್ತು. ಆದರೆ, ಬೃಹತ್​ ರನ್​ಗಳನ್ನು ಪೇರಿಸುವಲ್ಲಿ ಡೆಲ್ಲಿ ತಂಡಕ್ಕೆ ಸಾಧ್ಯವಾಗಲಿಲ್ಲ. ಡೆಲ್ಲಿ ನೀಡಿದ್ದ 132 ರನ್​ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ತಂಡ ಸಹ ನಿರೀಕ್ಷಿತ ಉತ್ತಮ ಆರಂಭ ಪಡೆಯಲಿಲ್ಲ.

ಆರಂಭಿಕವಾಗಿ ಬಂದ ಹೇಲಿ ಮ್ಯಾಥ್ಯೂಸ್ 13 ಮತ್ತು ಯಾಸ್ತಿಕಾ ಭಾಟಿಯಾ 4 ರನ್​ ಮಾತ್ರ ಬಾರಿಸಿದರು. ನಂತರ ಬಂದ ನಾಟ್ ಸ್ಕೈವರ್ ಬ್ರಂಟ್ ಆಕರ್ಷಕ ಅಜೇಯ ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 55 ಎಸತೆಗಳನ್ನು ಎದುರಿಸಿದ ಬ್ರಂಟ್​ ಏಳು ಬೌಂಡರಿಗಳ ಸಮೇತ 60 ರನ್​ ಬಾರಿಸಿದರು. ಮತ್ತೊಂದೆಡೆ, ಹರ್ಮನ್​ಪ್ರೀತ್​ ಕೌರ್​ ಕೂಡ ಉತ್ತಮ ಬ್ಯಾಟ್​ ಬಿಸಿ ತಂಡದಲ್ಲಿ ಗೆಲುವಿಗೆ ಕಾರಣವಾದರು. 39 ಬಾಲ್​ಗಳಲ್ಲಿ 5 ಬೌಂಡರಿಗಳೊಂದಿಗೆ 37 ರನ್​ ಬಾರಿಸಿದರು. ಇದರ ನಡುವೆ ಪಂದ್ಯ ರೋಚಕ ಘಟ್ಟಕ್ಕೆ ತಲುಪಿತ್ತು. ಮೆಲಿ ಕೇರ್ 2 ಬೌಂಡರಿಗಳ ಸಮೇತ 14 ರನ್​ ಬಾರಿಸಿ ಗೆಲುವಿನ ತಂಡದ ಕೊಡುಗೆ ನೀಡಿದರು. ಕೊನೆಗೆ 19.3 ಓವರ್​ಗಳಲ್ಲಿ 134 ರನ್​ಗಳನ್ನು ಮುಂಬೈ ಬಾರಿಸಿತು.

ಡೆಲ್ಲಿ ಇನ್ಸಿಂಗ್​: ಡೆಲ್ಲಿ ಉತ್ತಮ ಆರಂಭವನ್ನು ಪಡೆಯಲು ಮೆಗ್​ ಲ್ಯಾನಿಂಗ್​ ಪಡೆಗೆ ಸಾಧ್ಯವಾಗಲಿಲ್ಲ. ಆರಂಭಿಕರಾಗಿ ಕ್ರೀಸ್​ಗೆ ಬಂದ ನಾಯಕಿ ಲ್ಯಾನಿಂಗ್​ ಹಾಗೂ ಶಫಾಲಿ ವರ್ಮಾ ಜೋಡಿ ತಂಡದ ಮೊತ್ತ 12 ರನ್​ಗಳು ಆಗುವಷ್ಟರಲ್ಲಿ ಬೇರ್ಪಟ್ಟಿತ್ತು. ಪವರ್​ ಫ್ಲೇನಲ್ಲೇ 4 ಎಸತೆಗಳಲ್ಲಿ ತಲಾ ಒಂದು ಸಿಕ್ಸರ್​, ಬೌಂಡರಿ ಸಮೇತ 11 ರನ್​ ಬಾರಿಸಿ ಶಫಾಲಿ ವರ್ಮಾ ವಿಕೆಟ್​ ಒಪ್ಪಿಸಿದರು. ಇಸ್ಸಿ ವಾಂಗ್ ​ಎರಡನೇ ಓವರ್​ನಲ್ಲಿ ಮೆಲಿ ಕೆರ್ ಕೈಗೆ ಶಫಾಲಿ ಕ್ಯಾಚ್​ ಕೊಟ್ಟು ನಿರ್ಗಮಿಸಿದರು.

ಬಳಿಕ ಬಂದ ಆಲಿಸ್​ ಕ್ಯಾಪ್ಸೆ ಕೂಡ ಅದೇ ಓವರ್​ನಲ್ಲಿ ಶೂನ್ಯಕ್ಕೆ ಔಟ್​ ಆದರು. ಈ ಮೂಲಕ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಪೆವಿಲಿಯನ್​ ಸೇರಿದರು. ನಂತರ ನಾಯಕಿ ಮೆಗ್​ ಲ್ಯಾನಿಂಗ್​ಗೆ ಜೊತೆಯಾದ ಜೆಮಿಯಾ ರಾಡ್ರಿಗಸ್​ ಎರಡು ಆರ್ಕಷಕ ಬೌಂಡರಿ ಹೊಡೆಯುವ ಮೂಲಕ ಒಳ್ಳೆಯ ರನ್​ ಕಲೆಹಾಕುವ ಮುನ್ಸೂಚನೆ ಕೊಟ್ಟರು. ಆದರೆ, ಮತ್ತೆ 4ನೇ ಓವರ್​ ಬೌಲಿಂಗ್​ ಮಾಡಲು ಬಂದ ಇಸ್ಸಿ ವಾಂಗ್ ಅವರು ರಾಡ್ರಿಗಸ್​ ವಿಕೆಟ್​ ಕಿತ್ತಿದರು. ಇನ್ನು, ಆಲ್​ರೌಂಡರ್​ ಮರಿಜಾನ್ನೆ ಕಪ್​ ಮತ್ತು ನಾಯಕಿ ಲ್ಯಾನಿಂಗ್​ ನಿಧಾನ ಗತಿಯಲ್ಲಿ ಬ್ಯಾಟ್​ ಬೀಸಿ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು.

ಇದರ ನಡುವೆ ಬೌಲರ್​ ಮೆಲಿ ಕೆರ್​ ಅವರು 18 ರನ್​ ಗಳಿಸಿದ್ದ ಮರಿಜಾನ್ನೆ ಕಪ್​ ವಿಕೆಟ್​ ಪಡೆದರು. ಇದರಿಂದ ತಾಳ್ಮೆಯ ಪ್ರರ್ದಶಿಸಿದ ನಾಯಕಿ ಲ್ಯಾನಿಂಗ್​ 35 ರನ್​ಗಳನ್ನು ಕಲೆ ಹಾಕಿದ್ದಾಗ ರನ್​ ಔಟ್​ ಬಲೆಗೆ ಬಿದ್ದರು. ಇದರ ಬೆನ್ನಲ್ಲೇ ಮತ್ತೊಬ್ಬ ಬ್ಯಾಟರ್​ ಆರುಧಂತಿ ರೆಡ್ಡಿ ಕೂಡ ಮೆಲಿ ಕೆರ್​ ಬಾಲಿಂಗ್​ನಲ್ಲಿ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. ಬಳಿಕ ಮಿನ್ನು ಮಣಿ (1) ರನ್​, ತನಿಯಾ ಭಾಟಿಯಾ (0) ಬೇಗನ ಪೆವಿಲಿಯನ್​ ಸೇರಿದರು. ಕೊನೆಯಲ್ಲಿ ಶಿಖಾ ಪಾಂಡೆ ಮತ್ತು ರಾಧಾ ಯಾದವ್​ 27 ರನ್​ಗಳ ಕೊಡುಗೆ ನೀಡಿದರು. ಅಂತಿಮ ವಿಕೆಟ್​ಗೆ 50 ರನ್​ಗಳ ಜೊತೆಯಾಟ ನೀಡಿ ಅಜೇಯರಾಗಿದರು. ಅಲ್ಲದೆ, ಈ ಜೋಡಿ ತಂಡ ಮೊತ್ತವನ್ನು 100ರ ಗಡಿ ದಾಟಿಸಿತು. ಇದಲ್ಲದೇ, ನಿಗದಿತ 20 ಓವರ್​ಗಳಲ್ಲಿ ಡೆಲ್ಲಿ 9 ವಿಕೆಟ್​ ಕಳೆದುಕೊಂಡು 139 ರನ್​ ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಲು ನೆರವಾದರು.

Last Updated :Mar 26, 2023, 11:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.