ETV Bharat / sports

ಜನವರಿಯಲ್ಲಿ ನಡೆಯಬೇಕಿದ್ದ ಪಾಕ್​-ವೆಸ್ಟ್​ ಇಂಡೀಸ್​ ಟಿ20 ಸರಣಿ 2024ಕ್ಕೆ ಮುಂದೂಡಿಕೆ: ಪಿಸಿಬಿ

author img

By

Published : Oct 20, 2022, 10:58 AM IST

ಜನವರಿ 2023ರಲ್ಲಿ ನಡೆಯಬೇಕಿದ್ದ ಆತಿಥೇಯ ಪಾಕಿಸ್ತಾನ ಮತ್ತು ಪ್ರವಾಸಿ ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯನ್ನು 2024ರ ಮೊದಲ ತ್ರೈಮಾಸಿಕಕ್ಕೆ ಮುಂದೂಡಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಬುಧವಾರ ಪ್ರಕಟಿಸಿದೆ.

West Indies tour of Pakistan  T20I series postponed to 2024  Pakistan vs west Indies t20 series  Pakistan vs west Indies t20 series 2024  ಪಾಕ್​ ವೆಸ್ಟ್​ ಇಂಡೀಸ್​ ಟಿ20 ಸರಣಿ 2024ಕ್ಕೆ ಮುಂದೂಡಿಕೆ  ಪಾಕಿಸ್ತಾನ ಕ್ರಿಕೆಟ್ ಮಂಡಳಿ  ಬಿಡುವಿಲ್ಲದ ದೇಶೀಯ ವೇಳಾಪಟ್ಟಿ  T20 ವಿಶ್ವಕಪ್ ಜೂನ್ 2024
ಜನವರಿಯಲ್ಲಿ ನಡೆಯಬೇಕಿದ್ದ ಪಾಕ್​-ವೆಸ್ಟ್​ ಇಂಡೀಸ್​ ಟಿ20 ಸರಣಿ 2024ಕ್ಕೆ ಮುಂದೂಡಿಕೆ

ಲಾಹೋರ್​, ಪಾಕಿಸ್ತಾನ​: ಬಿಡುವಿಲ್ಲದ ದೇಶೀಯ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಜನವರಿ 2023ರ ಬದಲಿಗೆ 2024 ರಲ್ಲಿ ವೆಸ್ಟ್ ಇಂಡೀಸ್ T20 ಸರಣಿಯನ್ನು ಆಯೋಜಿಸಲಾಗುತ್ತಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಹೇಳಿದೆ. ಕ್ರಿಕೆಟ್ ವೆಸ್ಟ್ ಇಂಡೀಸ್‌ನೊಂದಿಗೆ ಮಾತನಾಡಿದ್ದೇವೆ. ಮೂರು ಪಂದ್ಯಗಳ ಟಿ20 ಸರಣಿಯನ್ನು ಮುಂದೂಡಲು ಎರಡೂ ಮಂಡಳಿಗಳು ಒಪ್ಪಿಕೊಂಡಿವೆ ಎಂದು ಪಿಸಿಬಿ ಹೇಳಿದೆ. ಈ ಮೊದಲು 2023ರ ಜನವರಿಯಲ್ಲಿ ನಡೆಯಬೇಕಿತ್ತು ಆದರೆ ಈಗ 2024ರ ಮೊದಲ ಮೂರು ತಿಂಗಳಲ್ಲಿ ನಡೆಯಲಿದೆ.

ICC ಪುರುಷರ T20 ವಿಶ್ವಕಪ್ ಜೂನ್ 2024 ರಲ್ಲಿ ವೆಸ್ಟ್ ಇಂಡೀಸ್ ಮತ್ತು USA ನಲ್ಲಿ ನಡೆಯಲಿದೆ. ಜನವರಿ 2023 ರಲ್ಲಿ ಮೂರು ಪಂದ್ಯಗಳ T20I ಸರಣಿಯು ಇತ್ತೀಚೆಗೆ ಘೋಷಿಸಲಾಗಿತ್ತು. ಆದ್ರೆ ಇದು 2023-2027 ICC ಫ್ಯೂಚರ್ ಟೂರ್ಸ್ ಕಾರ್ಯಕ್ರಮದ ಭಾಗವಾಗಿಲ್ಲ. ವೆಸ್ಟ್ ಇಂಡೀಸ್ ತಮ್ಮ ICC ಪುರುಷರ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ ಪಂದ್ಯಗಳನ್ನು ಪಾಕಿಸ್ತಾನದ ವಿರುದ್ಧ ಮೇ 2022 ರಲ್ಲಿ ಮುಲ್ತಾನ್‌ನಲ್ಲಿ ಆಡಿತ್ತು.

ಐಸಿಸಿ ಪುರುಷರ ಟಿ 20 ವಿಶ್ವಕಪ್ 2024 ರಲ್ಲಿ ನಡೆಯಲಿರುವುದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದನ್ನು ಜೂನ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಆತಿಥ್ಯ ವಹಿಸಲಿದೆ. ಇದಕ್ಕೂ ಮೊದಲು ಕಡಿಮೆ ಮಾದರಿಯ ಸರಣಿಯನ್ನು ಆಡುವುದು ಎರಡೂ ತಂಡಗಳಿಗೆ ಪಂದ್ಯಾವಳಿಯ ತಯಾರಿಯಲ್ಲಿ ಸಹಾಯ ಮಾಡುತ್ತದೆ ಎಂದು ವಕ್ತಾರರು ತಿಳಿಸಿದ್ದಾರೆ.

ವಿಶೇಷವೆಂದರೆ, ವೆಸ್ಟ್ ಇಂಡೀಸ್ ತಂಡವು ಈ ವರ್ಷದ ಮೇ ತಿಂಗಳಲ್ಲಿ ಏಕದಿನ ಮತ್ತು ಟಿ20 ಸರಣಿಗಾಗಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿತ್ತು. 50 ಓವರ್‌ಗಳ ಪಂದ್ಯಗಳನ್ನು ಪೂರ್ಣಗೊಳಿಸಿದ ನಂತರ ಹಲವಾರು ಕೋವಿಡ್ ಪ್ರಕರಣಗಳನ್ನು ಮುನ್ನೆಲೆಗೆ ಬಂದಿದ್ದವು. ಇದು ಅಂತಿಮವಾಗಿ ಎರಡೂ ಮಂಡಳಿಗಳು T20 ಸರಣಿಯನ್ನು ಮುಂದೂಡಲು ಮತ್ತು 2023 ರ ಆರಂಭದಲ್ಲಿ ನಡೆಸಲು ಒಪ್ಪಿಗೆ ನೀಡಿದ್ದವು.

ಓದಿ: ಸಾಧನೆಯ ಬೌಂಡರಿ..! ಕೊಹ್ಲಿ, ರೋಹಿತ್​, ಬಾಬರ್​ ಹಿಂದಿಕ್ಕಿದ ಐರ್ಲೆಂಡ್‌ ಆಟಗಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.