ETV Bharat / sports

ಉಡುಪಿ ಸೇರಿದಂತೆ ನಮ್ಮಲ್ಲೂ ಅದ್ಭುತ ಬೀಚ್‌ಗಳಿವೆ: ಮಾಲ್ಡೀವ್ಸ್‌ಗೆ ಕ್ರಿಕೆಟಿಗರ ಟಾಂಗ್‌

author img

By ETV Bharat Karnataka Team

Published : Jan 8, 2024, 2:16 PM IST

ಭಾರತದ ಮಾಜಿ ಕ್ರಿಕೆಟಿಗರಾದ ಸೆಹ್ವಾಗ್, ರೈನಾ ಮತ್ತು ಇರ್ಫಾನ್ ಪಠಾಣ್ ಅವರು ಲಕ್ಷದ್ವೀಪದ ಪರಿಸರದ ಬಗ್ಗೆ ಮಾಲ್ಡೀವ್ಸ್ ಸಚಿವರು ಮಾಡಿದ ಟೀಕೆಗಳನ್ನು ಖಂಡಿಸಿದ್ದಾರೆ.

ಅದ್ಭುತ ಬೀಚ್‌  ಮಾಲ್ಡೀವ್ಸ್​ ವಿಷಯ  ಟಾಂಗ್​ ಕೊಟ್ಟ ಕ್ರಿಕೆಟಿಗರು  wonderful beaches  cricketers responded  Maldives issue
ಉಡುಪಿ ಸೇರಿದಂತೆ ನಮ್ಮಲ್ಲೂ ಅದ್ಭುತ ಬೀಚ್‌ಗಳಿವೆ: ಮಾಲ್ಡೀವ್ಸ್​ ವಿಷಯಕ್ಕೆ ಟಾಂಗ್​ ಕೊಟ್ಟ ಕ್ರಿಕೆಟಿಗರು

ನವದೆಹಲಿ: ಭಾರತದ ವಿರುದ್ಧ ಮಾಲ್ಡೀವ್ಸ್ ಸಚಿವರು ಮಾಡಿರುವ ಆಕ್ಷೇಪಾರ್ಹ ಹೇಳಿಕೆಗೆ ಮಾಜಿ ಕ್ರಿಕೆಟಿಗರು ಸಖತ್ ಕೌಂಟರ್ ನೀಡಿದ್ದಾರೆ. ಇಂತಹ ಕೆಳಮಟ್ಟದ ಕಾಮೆಂಟ್‌ಗಳನ್ನು ಮಾಡುವುದು ಸೂಕ್ತವಲ್ಲ ಎಂದು 'ಎಕ್ಸ್' ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ.

  • Whether it be the beautiful beaches of Udupi , Paradise Beach in Pondi, Neil and Havelock in Andaman, and many other beautiful beaches throughout our country, there are so many unexplored places in Bharat which have so much potential with some infrastructure support. Bharat is… pic.twitter.com/w8EheuIEUD

    — Virender Sehwag (@virendersehwag) January 7, 2024 " class="align-text-top noRightClick twitterSection" data=" ">

ನಮ್ಮಲ್ಲಿಯೂ ಅದ್ಭುತ ಬೀಚ್​ಗಳಿವೆ: "ಉಡುಪಿಯ ಸುಂದರ ಕಡಲತೀರಗಳು, ಪಾಂಡಿಯ ಪ್ಯಾರಡೈಸ್ ಬೀಚ್, ಅಂಡಮಾನ್‌ನ ನೀಲ್ ಮತ್ತು ಹ್ಯಾವ್‌ಲಾಕ್ ಅದ್ಭುತವಾಗಿವೆ. ನಮ್ಮ ದೇಶವು ಸುಂದರವಾದ ಕಡಲತೀರಗಳು ಮತ್ತು ಅನೇಕ ಅನ್ವೇಷಿಸದ ಸ್ಥಳಗಳನ್ನು ಹೊಂದಿದೆ. ವಿಶೇಷವಾಗಿ ಕೆಲವು ಮೂಲಸೌಕರ್ಯಗಳನ್ನು ಒದಗಿಸಿದರೆ ಇವು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಅಪಾಯಗಳಿಂದ ಹೊರಬರುವ ಅವಕಾಶಗಳನ್ನು ಸೃಷ್ಟಿಸುವ ಅವಶ್ಯಕತೆಯಿದೆ. ನಮ್ಮ ದೇಶ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಲ್ಡೀವ್ಸ್ ಸಚಿವರು ಮಾಡಿರುವ ಟೀಕೆಗಳಿಗೆ ತಿರುಗೇಟು ನೀಡಲು ಇಂತಹ ಪ್ರವಾಸಿ ಪ್ರದೇಶಗಳಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬೇಕು. ಆ ಕಾರಣದಿಂದಾಗಿ, ಆರ್ಥಿಕತೆಯನ್ನು ಬಲಪಡಿಸುವ ಕೆಲಸ ಆಗುತ್ತದೆ ಎಂದು ತೋರುತ್ತದೆ. ನಿಮಗೆ ಇಷ್ಟವಾದ.. ಸುಂದರವಾದ ಸ್ಥಳಗಳಿದ್ದರೆ ಹೇಳಿ'' ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ.

  • Having traveled the world since I was 15, every new country I visit reinforces my belief in the exceptional service offered by Indian hotels and tourism. While respecting each country's culture, it's disheartening to hear negative remarks about my homeland's extraordinary…

    — Irfan Pathan (@IrfanPathan) January 7, 2024 " class="align-text-top noRightClick twitterSection" data=" ">

ನನ್ನ ಮಾತೃಭೂಮಿಯ ಆತಿಥ್ಯ ಯಾವಾಗಲೂ ಒಳ್ಳೆಯದು: "ನಾನು 15 ವರ್ಷ ವಯಸ್ಸಿನವನಾಗಿದ್ದಾಗಿನಿಂದ ಪ್ರಪಂಚದಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಪ್ರತಿ ದೇಶದಲ್ಲಿ ಭಾರತೀಯ ಹೋಟೆಲ್ ಮತ್ತು ಪ್ರವಾಸೋದ್ಯಮ ಇಲಾಖೆಯು ಒದಗಿಸುವ ಸೇವೆಗಳು ಅತ್ಯುತ್ತಮವಾಗಿವೆ. ಅವರು ಆಯಾ ದೇಶಗಳ ಸಂಸ್ಕೃತಿಯನ್ನು ಗೌರವಿಸುತ್ತಾರೆ. ಈಗ ಕೆಲವರು ಭಾರತದ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡುತ್ತಿರುವುದು ಬೇಸರ ತಂದಿದೆ. ನನ್ನ ಮಾತೃಭೂಮಿಯ ಆತಿಥ್ಯ ಯಾವಾಗಲೂ ಒಳ್ಳೆಯದು" ಎಂದು ಇರ್ಫಾನ್ ಪಠಾಣ್ ತಮ್ಮ ಎಕ್ಸ್​ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

  • I saw remarks from prominent public figures in the Maldives, expressing hateful and racist comments directed towards Indians. It's disheartening to witness such negativity, especially considering that India contributes significantly to their economy, crisis management and so many… https://t.co/Imulj3g5I7

    — Suresh Raina🇮🇳 (@ImRaina) January 7, 2024 " class="align-text-top noRightClick twitterSection" data=" ">

ಸ್ವಾಭಿಮಾನಕ್ಕೆ ಆದ್ಯತೆ ನೀಡುವುದು ಬಹಳ ಮುಖ್ಯ: "ಮಾಲ್ಡೀವ್ಸ್‌ನ ಸಾರ್ವಜನಿಕ ಪ್ರತಿನಿಧಿಗಳು ಮಾಡಿದ ಕಾಮೆಂಟ್‌ಗಳು ಭಾರತೀಯರಿಗೆ ನೋವುಂಟು ಮಾಡುತ್ತಿರುವುದು ದುಃಖಕರವಾಗಿದೆ. ನಾನೂ ಕೂಡ ಹಲವು ಬಾರಿ ಅಲ್ಲಿಗೆ ಭೇಟಿ ನೀಡಿದ್ದೇನೆ. ಅಲ್ಲಿನ ಸೌಂದರ್ಯ ಬೆರಗು ಮೂಡಿಸುತ್ತದೆ. ಈಗ ನಮ್ಮ ಸ್ವಾಭಿಮಾನಕ್ಕೆ ಆದ್ಯತೆ ನೀಡುವುದು ಬಹಳ ಮುಖ್ಯ. ಇಂತಹ ಸಂಗತಿಗಳ ನೆಪದಲ್ಲಿ ನಮ್ಮ ಪ್ರವಾಸೋದ್ಯಮ ಕ್ಷೇತ್ರಕ್ಕೆ ಬೆಂಬಲವನ್ನು ತೋರಿಸುವ ಅವಶ್ಯಕತೆಯಿದೆ. ನಮ್ಮ ದೇಶದಾದ್ಯಂತದ ಪ್ರವಾಸೋದ್ಯಮ ಸ್ಥಳಗಳನ್ನು ಆಕರ್ಷಿಸಲು ಇದು ಸರಿಯಾದ ಸಮಯ'' ಎಂದು ಸುರೇಶ್ ರೈನಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಾಂಡ್ಯಾ ಹೇಳಿದ್ದು ಹೀಗೆ: ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಈ ಕುರಿತು ಪೋಸ್ಟ್​ ಮಾಡಿರುವ ಕ್ರಿಕೆಟಿಗ ಹಾರ್ದಿಕ್​ ಪಾಂಡ್ಯ​, ಭಾರತೀಯರ ಬಗ್ಗೆ ಮಾಲ್ಡೀವ್ಸ್​ ಸಚಿವರ ಹೇಳಿಕೆ ಖಂಡನೀಯ ಮತ್ತು ತುಂಬಾ ದುಃಖಕರವಾಗಿದೆ. ಕಣ್ಮನ ಸೆಳೆಯುವ ಸಮುದ್ರ, ಸುಂದರವಾದ ಕಡಲತೀರಗಳನ್ನು ಹೊಂದಿರುವ ಲಕ್ಷದ್ವೀಪವು ಪ್ರವಾಸಕ್ಕೆ ಪರಿಪೂರ್ಣವಾದ ಸ್ಥಳ. ನನ್ನ ಮುಂದಿನ ರಜಾದಿನಗಳಲ್ಲಿ ಲಕ್ಷದ್ವೀಪಕ್ಕೆ ಭೇಟಿ ನೀಡಲಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನನ್ನ ಮುಂದಿನ ಪ್ರವಾಸ ಲಕ್ಷದ್ವೀಪಕ್ಕೆ ಎಂದ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ

ಈ ಇಡೀ ವಿಷಯವು ಪ್ರಧಾನಿ ನರೇಂದ್ರ ಮೋದಿಯವರ ಲಕ್ಷದ್ವೀಪ ಭೇಟಿಯ ನಂತರ ಶುರುವಾಯಿತು. ಲಕ್ಷದ್ವೀಪಕ್ಕೆ ಭೇಟಿ ನೀಡಿದ ನಂತರ ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅದರ ಚಿತ್ರಗಳನ್ನು ಹಂಚಿಕೊಂಡಿದ್ದರು. ಇದರೊಂದಿಗೆ, ಈ ದ್ವೀಪಕ್ಕೆ ಭೇಟಿ ನೀಡಲು ಯೋಜಿಸುವಂತೆ ಅವರು ಭಾರತೀಯರಿಗೆ ಮನವಿ ಮಾಡಿದ್ದರು. ಇದರ ನಂತರ, ಮಾಲ್ಡೀವ್ಸ್‌ನ ಯುವ ಸಬಲೀಕರಣದ ಉಪ ಸಚಿವೆ ಮರಿಯಮ್ ಶಿಯುನಾ ಅವರು ಪ್ರಧಾನಿ ಮೋದಿಯವರ ಪೋಸ್ಟ್‌ಗೆ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದರು. ಆದರೆ, ಈ ಪೋಸ್ಟ್‌ ಟೀಕೆಗೆ ಗುರಿಯಾದ ನಂತರ, ಅವರು ಅದನ್ನು ಡಿಲೀಟ್​ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.