ETV Bharat / sports

ಪಾಕ್​ ವಿರುದ್ಧದ ಟೆಸ್ಟ್​ಗೆ ಆಸೀಸ್ ತಂಡ ಪ್ರಕಟ: ವಾರ್ನರ್​ಗೆ ಇದು​​ ವಿದಾಯದ ಸರಣಿ ಆಗಲಿದೆಯಾ?

author img

By ETV Bharat Karnataka Team

Published : Dec 3, 2023, 8:06 PM IST

Farewell Sereis: ಪಾಕಿಸ್ತಾನದ ವಿರುದ್ಧ ತವರಿನಲ್ಲಿ ಆಸೀಸ್​​ ಆಡಲಿರುವ ಮೂರು ಟೆಸ್ಟ್​ಗಳ ಪೈಕಿ ಮೊದಲ ಪಂದ್ಯಕ್ಕೆ ಕ್ರಿಕೆಟ್​ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಿದೆ.

Warner
Warner

ಸಿಡ್ನಿ (ಆಸ್ಟ್ರೇಲಿಯಾ): ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ಮೂರು ಟೆಸ್ಟ್‌ ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಸರಣಿಯ ಮೊದಲ ಪಂದ್ಯಕ್ಕೆ ಭಾನುವಾರ ಕ್ರಿಕೆಟ್​ ಆಸ್ಟ್ರೇಲಿಯಾ 14 ಜನ ಸದಸ್ಯರನ್ನು ಒಳಗೊಂಡ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ 37ರ ಹರೆಯದ ಆರಂಭಿಕ ಆಟಗಾರ ಡೇವಿಡ್​ ವಾರ್ನರ್​ ಅವರನ್ನು ಹೆಸರಿಸಲಾಗಿದೆ. ಪಾಕ್​ ವಿರುದ್ಧದ ತವರಿನ ಈ ಟೆಸ್ಟ್​ ಸರಣಿಯಲ್ಲಿ ವಾರ್ನರ್​ ವಿದಾಯ ಹೇಳುವ ಸಾಧ್ಯತೆ ಇದೆ.

ಡಿಸೆಂಬರ್​ 6 ರಿಂದ 9ರ ವರೆಗೆ ನಾಲ್ಕು ದಿನಗಳ ಅಭ್ಯಾಸ ಪಂದ್ಯ ನಡೆಯಲಿದೆ. ಡಿಸೆಂಬರ್​ 14 ರಿಂದ 18ರ ವರೆಗೆ ಮೊದಲ ಟೆಸ್ಟ್​ ಪಂದ್ಯ ಪರ್ತ್​ ಮೈದಾನದಲ್ಲಿ ನಡೆಯಲಿದೆ. ಬಾಕ್ಸಿಂಗ್ ಡೇ ಯಂದು (ಡಿ.26-30) ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಎರಡನೇ ಟೆಸ್ಟ್‌ ಹಾಗೂ ಜನವರಿ 3 ರಿಂದ 7 ರವರೆಗೆ ಸಿಡ್ನಿಯಲ್ಲಿ ಮೂರನೇ ಪಂದ್ಯ ನಡೆಯಲಿದೆ. ಸಿಡ್ನಿಯಲ್ಲಿ ನಡೆಯುವ ಮೂರನೇ ಟೆಸ್ಟ್​ನಲ್ಲಿ ವಾರ್ನರ್​ ವಿದಾಯ ಹೇಳುವ ಸಾಧ್ಯತೆ ಇದೆ.

ವಾರ್ನರ್​ ಅವರ ಇತ್ತೀಚಿನ ಟೆಸ್ಟ್​ ಫಾರ್ಮ್​​ ಉತ್ತಮವಾಗಿಲ್ಲ. ಅವರು 2019ರಲ್ಲಿ ಪಾಕ್​ ವಿರುದ್ಧ ಅಡಿಲೇಡ್​ನಲ್ಲಿ ತ್ರಿಶತಕ ದಾಖಲಿಸಿದ್ದರು. ನಂತರ ಅವರು ಕೆಂಪು ಚೆಂಡಿನಲ್ಲಿ ರನ್​ ಗಳಿಸಲು ಪರದಾಡಿದ್ದಾರೆ. ಹೀಗಾಗಿ ವಾರ್ನರ್​ ಸ್ವತಃ ಟೆಸ್ಟ್​ ಕ್ರಿಕೆಟ್​ನಿಂದ ನಿವೃತ್ತಿಯನ್ನು ಪಡೆಯುವುದಾಗಿ ಹೇಳಿದ್ದರು. ವೈಟ್​ ಬಾಲ್​ ಕ್ರಿಕೆಟ್​ನಲ್ಲಿ ಮುಂದುವರೆಯುವುದಾಗಿ ಹಾಗೇ ಸಿಡ್ನಿಯಲ್ಲಿ ಕೊನೆಯ ಟೆಸ್ಟ್​ ಆಡುವುದಾಗಿ ಇಂಗಿತ ವ್ಯಕ್ತಪಡಿಸಿದ್ದರು. ಅವರ ಹೇಳಿಕೆಯಂತೆ ಇದು ಅಂತಿಮ ಟೆಸ್ಟ್​ ಸರಣಿ ಆಗಬಹುದು ಎಂದು ಹೇಳಲಾಗುತ್ತದೆ.

ಲ್ಯಾನ್ಸ್ ಮಾರಿಸ್​ಗೆ ಸ್ಥಾನ: ಮೊದಲ ಟೆಸ್ಟ್‌ಗೆ ಪ್ರಕಟವಾದ ಆಸ್ಟ್ರೇಲಿಯಾದ ತಂಡದಲ್ಲಿ ಅನ್‌ಕ್ಯಾಪ್ಡ್ ವೇಗಿ ಲ್ಯಾನ್ಸ್ ಮಾರಿಸ್ ಸ್ಥಾನ ಪಡೆದುಕೊಂಡಿದ್ದಾರೆ. ಲ್ಯಾನ್ಸ್ ಮಾರಿಸ್ ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲಿಂಗ್​ ಮಾಡಿ 'ದಿ ವೈಲ್ಡ್ ಥಿಂಗ್' ಎಂದು ಹೆಸರು ಪಡೆದುಕೊಂಡಿದ್ದಾರೆ. ಲ್ಯಾನ್ಸ್ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಕೇವಲ 22 ಪಂದ್ಯಗಳಲ್ಲಿ 25.44 ಸರಾಸರಿಯಲ್ಲಿ 74 ವಿಕೆಟ್‌ಗಳನ್ನು ಪಡೆದಿದ್ದಾರೆ.

ವಿಶ್ವ ದರ್ಜೆಯ ವೇಗದ ದಾಳಿಯಲ್ಲಿ ನಾಯಕ ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್ ಮತ್ತು ಸ್ಕಾಟ್ ಬೋಲ್ಯಾಂಡ್‌ರಂತಹ ಆಟಗಾರರನ್ನು ಮೋರಿಸ್ ಸೇರುತ್ತಾರೆ. ಕ್ಯಾಮರೂನ್ ಗ್ರೀನ್ ಮತ್ತು ಮಿಚೆಲ್ ಮಾರ್ಷ್, ಇಬ್ಬರೂ ಪೇಸ್-ಬೌಲಿಂಗ್ ಆಲ್-ರೌಂಡರ್‌ಗಳನ್ನು ಆಯ್ಕೆ ಮಾಡಲಾಗಿದೆ. ಆಫ್-ಸ್ಪಿನ್ನರ್ ನಾಥನ್ ಲಿಯಾನ್ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ. ಇದರಿಂದ ಟಾಡ್ ಮರ್ಫಿ ಅವಕಾಶ ವಂಚಿತರಾಗಿದ್ದಾರೆ. ಉಸ್ಮಾನ್ ಖವಾಜಾ, ಟ್ರಾವಿಸ್ ಹೆಡ್, ಮಾರ್ನಸ್ ಲ್ಯಾಬುಸ್ಚಾಗ್ನೆ ಮತ್ತು ಸ್ಟೀವ್ ಸ್ಮಿತ್ ಬ್ಯಾಟಿಂಗ್ ಬಲವಾದರೆ, ಡೇವಿಡ್ ವಾರ್ನರ್ ಬ್ಯಾಕ್ಅಪ್ ಬ್ಯಾಟರ್​ ಆಗಿದ್ದಾರೆ.

ಪುರುಷರ ಆಯ್ಕೆ ಸಮಿತಿಯ ಅಧ್ಯಕ್ಷ ಜಾರ್ಜ್ ಬೈಲಿ ಈ ವರ್ಷದ ಆರಂಭದಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅನ್ನು ಎತ್ತಿ ಹಿಡಿದ ಸ್ಟಾರ್​ಗಳು ಮರಳಲು ಅರ್ಹರಾಗಿದ್ದಾರೆ. ಆದರೆ 2023-2025ರ ಹೊಸ ಟೆಸ್ಟ್​ ಚಾಂಪಿಯನ್​ ಶಿಪ್​ಗಾಗಿ ಹೊಸಬರಿಗೂ ಅವಕಾಶ ನೀಡಿರುವುದಾಗಿ ಹೇಳಿದರು.

ಆಸ್ಟ್ರೇಲಿಯಾ ತಂಡ: (ಮೊದಲ ಟೆಸ್ಟ್​ಗೆ ಮಾತ್ರ) ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್‌ಚಾಗ್ನೆ, ನಾಥನ್ ಲಿಯಾನ್, ಮಿಚ್ ಮಾರ್ಷ್, ಲ್ಯಾನ್ಸ್ ಮೋರಿಸ್, ಸ್ಟೀವ್ ಸ್ಮಿತ್, ಮಿಚ್ ಸ್ಟಾರ್ಕ್, ಡೇವಿಡ್ ವಾರ್ನರ್

ಪಾಕಿಸ್ತಾನ ತಂಡ: ಶಾನ್ ಮಸೂದ್ (ನಾಯಕ), ಅಮೀರ್ ಜಮಾಲ್, ಅಬ್ದುಲ್ಲಾ ಶಫೀಕ್, ಅಬ್ರಾರ್ ಅಹ್ಮದ್, ಬಾಬರ್ ಅಜಮ್, ಫಹೀಮ್ ಅಶ್ರಫ್, ಹಸನ್ ಅಲಿ, ಇಮಾಮ್-ಉಲ್-ಹಕ್, ಖುರ್ರಂ ಶಹಜಾದ್, ಮೀರ್ ಹಮ್ಜಾ, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಮ್ ಜೂನಿಯರ್, ನೋಮನ್ ಅಲಿ, ಸೈಮ್ ಅಯೂಬ್, ಸಲ್ಮಾನ್ ಅಲಿ ಅಘಾ, ಸರ್ಫರಾಜ್ ಅಹ್ಮದ್​, ಸೌದ್ ಶಕೀಲ್ ಮತ್ತು ಶಾಹೀನ್ ಶಾ ಆಫ್ರಿದಿ.

ಇದನ್ನೂ ಓದಿ: ವಿಶ್ವಕಪ್ ತಂಡದ ಸ್ಥಾನಕ್ಕೆ ರಿಂಕು ಸ್ಪರ್ಧಿ, ಆದರೆ ಅವರಿಗೆ ಸ್ಥಾನ ಇದೆಯಾ: ಆಶಿಶ್ ನೆಹ್ರಾ ಪ್ರಶ್ನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.