ETV Bharat / sports

ನಿವೃತ್ತಿಗೂ ಮುನ್ನ ಭಾರತದಲ್ಲಿ ಟೆಸ್ಟ್​ ಸರಣಿ ಗೆದ್ದರೆ, ದೊಡ್ಡ ಸಾಧನೆ ಎಂದು ಭಾವಿಸುವೆ: ಡೇವಿಡ್​ ವಾರ್ನರ್​

author img

By

Published : Dec 29, 2021, 3:15 PM IST

ನಾವು ಇನ್ನೂ ಭಾರತದಲ್ಲಿ ಭಾರತವನ್ನು ಮಣಿಸಲಾಗಿಲ್ಲ. ಅದನ್ನು ಮಾಡಿದರೆ ತುಂಬಾ ಚೆನ್ನಾಗಿರುತ್ತದೆ. ಮತ್ತು ಇಂಗ್ಲೆಂಡ್​ನಲ್ಲಿ ಆ್ಯಶಸ್​ ಗೆಲ್ಲುವುದು. ನಾವು 2019ರಲ್ಲಿ ಡ್ರಾ ಸಾಧಿಸಿಕೊಂಡಿದ್ದೆವು. ಆದರೆ, ನನಗೆ ಅಲ್ಲಿಗೆ ತೆರಳುವ ಅದೃಷ್ಟ ಮತ್ತು ಅವಕಾಶ ದೊರೆತರೆ , ಅಲ್ಲಿ ಮತ್ತೆ ತೆರಳಲು ಯೋಚಿಸುತ್ತೇನೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಾರ್ನರ್ ಹೇಳಿದ್ದಾರೆ.

Warner eyes 2023 Ashes, India win before quitting Test cricket
ಡೇವಿಡ್​ ವಾರ್ನರ್​

ಮೆಲ್ಬೋರ್ನ್​: ನಾನು ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿಯಾಗುವ ಮುನ್ನ 2023ರ ಆ್ಯಶಸ್​ ಟೆಸ್ಟ್​ ಸರಣಿ ಮತ್ತು ಭಾರತದಲ್ಲಿ ಭಾರತ ತಂಡದ ವಿರುದ್ಧ ಟೆಸ್ಟ್​ ಸರಣಿಯನ್ನು ಗೆಲ್ಲುವುದಕ್ಕೆ ಬಯಸುತ್ತೇನೆ ಎಂದು ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್​ ಡೇವಿಡ್​ ವಾರ್ನರ್​ ತಿಳಿಸಿದ್ದಾರೆ.

ಇಂಗ್ಲೆಂಡ್​ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್​ ಗೆಲ್ಲುವ ಮೂಲಕ ಆಸ್ಟ್ರೇಲಿಯಾ ಮಂಗಳವಾರ ಇನ್ನು 2 ಪಂದ್ಯಗಳುಳಿದಿರುವಂತೆ ಆ್ಯಶಸ್​ ಟೆಸ್ಟ್​ ಸರಣಿಯನ್ನು ವಶಪಡಿಸಿಕೊಂಡಿದೆ. ಈ ವರ್ಷ ಅಕ್ಟೋಬರ್​ನಲ್ಲಿ 35ನೇ ವಸಂತಕ್ಕೆ ಕಾಲಿಟ್ಟಿರುವ ವಾರ್ನರ್​ ಯುಎಇನಲ್ಲಿ ನಡೆದ ಟಿ-20 ವಿಶ್ವಕಪ್​ನಲ್ಲಿ ಟೂರ್ನಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಆದರೆ, ಇವರ ಪ್ರಕಾರ ತಾವು ಸಾಧಿಸಬೇಕಾಗಿದ್ದು ಇನ್ನೂ ಇದೆ ಎಂದಿದ್ದಾರೆ.

ನಾವು ಇನ್ನೂ ಭಾರತದಲ್ಲಿ ಭಾರತವನ್ನು ಮಣಿಸಲಾಗಿಲ್ಲ. ಅದನ್ನು ಮಾಡಿದರೆ ತುಂಬಾ ಚೆನ್ನಾಗಿರುತ್ತದೆ. ಮತ್ತು ಇಂಗ್ಲೆಂಡ್​ನಲ್ಲಿ ಆ್ಯಶಸ್​ ಗೆಲ್ಲುವುದು. ನಾವು 2019ರಲ್ಲಿ ಡ್ರಾ ಸಾಧಿಸಿಕೊಂಡಿದ್ದೆವು. ಆದರೆ, ನನಗೆ ಅಲ್ಲಿಗೆ ತೆರಳುವು ಅದೃಷ್ಟ ಮತ್ತು ಅವಕಾಶ ದೊರೆತರೆ , ಅಲ್ಲಿ ಮತ್ತೆ ತೆರಳಲು ಯೋಚಿಸುತ್ತೇನೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಾರ್ನರ್ ಹೇಳಿದ್ದಾರೆ.

ವಾರ್ನರ್​ ಇಂಗ್ಲೆಂಡ್​ನಲ್ಲಿ 13 ಮತ್ತು ಭಾರತದಲ್ಲಿ 8 ಟೆಸ್ಟ್​ ಪಂದ್ಯಗಳನ್ನಾಡಿದ್ದಾರೆ. ಆದರೆ, ಎರಡೂ ರಾಷ್ಟ್ರಗಳಲ್ಲಿ ಉತ್ತಮ ಪ್ರದರ್ಶನ ತೋರಲು ವಿಫಲರಾಗಿದ್ದಾರೆ. ಇಂಗ್ಲೆಂಡ್​ನಲ್ಲಿ 26 ಮತ್ತು ಭಾರತದಲ್ಲಿ 24ರ ಸರಾಸರಿಯಲ್ಲಿ ರನ್​ಗಳಿಸಿದ್ದಾರೆ. ಆದರೆ, ಮುಂದಿನ ಪ್ರವಾಸದ ವೇಳೆ 37ನೇ ವಯಸ್ಸಿಗೆ ಕಾಲಿಡಲಿರುವ ವಾರ್ನರ್​, ವಯಸ್ಸು ಕೇವಲ ಸಂಖ್ಯೆಗಳಷ್ಟೇ ಎಂದಿದ್ದಾರೆ.

ನಮ್ಮಂತ ಹಿರಿಯರಿಗೆ ಜೇಮ್ಸ್​ ಆ್ಯಂಡರ್ಸನ್​ ಮಾದರಿಯಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ, ನಾವೆಲ್ಲರೂ ಅವರನ್ನು ನೋಡಿ ಪ್ರೇರಣೆ ತೆಗೆದುಕೊಳ್ಳಬೇಕು, ಆದರೆ, ನನ್ನ ಪ್ರಕಾರ ತಂಡಕ್ಕಾಗಿ ಉತ್ತಮ ಪ್ರದರ್ಶನ ತೋರುವುದು ಮತ್ತು ರನ್​ಗಳಿಸುವುದರ ಮೇಲೆ ಎಲ್ಲ ನಿಂತಿರುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಇನ್ನಿಂಗ್ಸ್​ ಸೋಲಿನೊಂದಿಗೆ 18 ವರ್ಷಗಳ ಹಿಂದಿನ ಬೇಡದ ದಾಖಲೆಗೆ ಪಾತ್ರವಾದ ಇಂಗ್ಲೆಂಡ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.