ETV Bharat / sports

2001ರ ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಅವಿಸ್ಮರಣಿಯ ಟೆಸ್ಟ್​ ಜೊತೆಯಾಟ

author img

By

Published : Mar 14, 2023, 7:37 PM IST

2001ರ ಬಾರ್ಡರ್​ ಗವಾಸ್ಕರ್​ ಟ್ರೋಫಿಯ ದ್ರಾವಿಡ್ ​ - ಲಕ್ಷ್ಮಣ್​ ದಾಖಲೆಯ ಜೊತೆಯಾಟ - ಸೋಲಿನ ಪಂದ್ಯ ಗೆಲ್ಲಿಸಿ ಕೊಟ್ಟ ಜೋಡಿ - ಒಂದು ದಿನ ಇಡೀ ಆಸಿಸ್​ ಬೌಲರ್​ಗಳನ್ನು ದಂಡಿಸಿದ ದ್ರಾವಿಡ್​ - ಲಕ್ಷ್ಮಣ್

VVSLaxman  and Rahul Dravid remembering  test match
2001ರ ಬಾರ್ಡರ್​ ಗವಾಸ್ಕರ್​ ಟ್ರೋಫಿಯ ದ್ರಾವಿಡ್​-ಲಕ್ಷ್ಮಣ್​ ದಾಖಲೆಯ ಜೊತೆಯಾಟ

ನವದೆಹಲಿ: ಇಂದು ಭಾರತದ ಟೆಸ್ಟ್​ ಕ್ರಿಕೆಟ್​ಗೆ ಅವಿಸ್ಮರಣಿಯ ದಿನವಾಗಿದೆ. 2001 ಮಾರ್ಚ್​ 14 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಮಾಜಿ ಅನುಭವಿ ಬ್ಯಾಟ್ಸ್‌ಮನ್‌ಗಳಾದ ವಿವಿಎಸ್ ಲಕ್ಷ್ಮಣ್ ಮತ್ತು ರಾಹುಲ್ ದ್ರಾವಿಡ್ ದಾಖಲೆ ಜೊತೆಯಾಟ ನಡೆಸಿ ಟೀಂ ಇಂಡಿಯಾವನ್ನು ಸಂಕಷ್ಟದಿಂದ ಪಾರು ಮಾಡಿದ್ದರು. ಈ ಪಂದ್ಯದಲ್ಲಿ ಭಾರತ ಕೂಡ ಗೆಲುವು ದಾಖಲಿಸಿತ್ತು.

VVSLaxman  and Rahul Dravid remembering  test match
2001ರ ಬಾರ್ಡರ್​ ಗವಾಸ್ಕರ್​ ಟ್ರೋಫಿಯ ದ್ರಾವಿಡ್​-ಲಕ್ಷ್ಮಣ್​ ದಾಖಲೆಯ ಜೊತೆಯಾಟ

ಟೆಸ್ಟ್‌ನ ಮೊದಲ ಮೂರು ದಿನಗಳ ಸ್ಥಿತಿ (11-13 ಮಾರ್ಚ್): ಈಡನ್ ಗಾರ್ಡನ್‌ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಸ್ಟೀವ್ ವಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು. ಸ್ಟೀವ್ ವಾ (110) ಮತ್ತು ಮ್ಯಾಥ್ಯೂ ಹೇಡನ್ (97) ರನ್‌ಗಳ ನೆರವಿನಿಂದ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 445 ರನ್ ಗಳಿಸಿತು. ಭಾರತದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಈ ಇನ್ನಿಂಗ್ಸ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದರು. 445 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡದ ಮೊದಲ ಇನ್ನಿಂಗ್ಸ್ ಕೇವಲ 171 ರನ್‌ಗಳಿಗೆ ಆಲ್​ಔಟ್​ ಆಗಿತ್ತು. ಭಾರತ ಆಸ್ಟ್ರೇಲಿಯಾಕ್ಕಿಂತ 274 ರನ್​ನ ಹಿನ್ನಡೆ ಅನುಭವಿಸಿತ್ತು. ಆಸ್ಟ್ರೇಲಿಯಾ ಭಾರತಕ್ಕೆ ಫಾಲೋಆನ್​ ನೀಡಿತು.

ಇದಾದ ನಂತರ ಭಾರತ ತಂಡದಲ್ಲಿ ನಡೆದದ್ದಯ ಮ್ಯಾಜಿಕ್​ ಎಂದೇ ಹೇಳಬೇಕು. ಫಾಲೋ ಆನ್ ಹೇರಿಕೋಂಡ ಟೀಂ ಇಂಡಿಯಾ 115ಕ್ಕೆ ಮೂರು ವಿಕೆಟ್ ಕಳೆದುಕೊಂಡಿತ್ತು. ಆಗ 'ವೆರಿ-ವೆರಿ ಸ್ಪೆಷಲ್' ಲಕ್ಷ್ಮಣ್ ಮೈದಾನಕ್ಕೆ ಬಂದರು. ಮೈದಾನಕ್ಕೆ ಬಂದ ಅವರು ಗಂಗೂಲಿ ಜೊತೆಗೂಡಿ ಲಕ್ಷ್ಮಣ್ ಶತಕ ಪೂರೈಸಿ ತಂಡ ಮೊತ್ತವನ್ನು 200ರ ಗಡಿ ದಾಟಿಸಿದರು. ಮೂರನೇ ದಿನದಾಟದ ಅಂತ್ಯಕ್ಕೆ ಭಾರತದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿದೆ. ವಿವಿಎಸ್ ಲಕ್ಷ್ಮಣ್ (109) ಮತ್ತು ರಾಹುಲ್ ದ್ರಾವಿಡ್ (7) ರನ್ ಗಳಿಸಿ ಅಜೇಯರಾಗುಳಿದರು.

VVSLaxman  and Rahul Dravid remembering  test match
2001ರ ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಅವಿಸ್ಮರಣಿಯ ಟೆಸ್ಟ್​ ಜೊತೆಯಾಟ

ಟೆಸ್ಟ್‌ನ ನಾಲ್ಕನೇ ದಿನ (14 ಮಾರ್ಚ್): ಗೆಲುವು ಕೈಯಲ್ಲಿದೆ ಎಂದು ಭಾವಿಸಿದ್ದ ಕಾಂಗರೂ ಪಡೆಗೆ ಅಚ್ಚರಿ ಉಂಟಾಗಿತ್ತು. ಟೀಂ ಇಂಡಿಯಾದ 'ವೆರಿ ವೆರಿ ಸ್ಪೆಷಲ್' ವಿವಿಎಸ್ ಲಕ್ಷ್ಮಣ್ ಮತ್ತು 'ದಿ ವಾಲ್' ರಾಹುಲ್ ದ್ರಾವಿಡ್ ನಾಲ್ಕನೇ ದಿನವಿಡೀ ಬ್ಯಾಟಿಂಗ್ ಮಾಡಿದರು. ಇಬ್ಬರೂ ಆಸ್ಟ್ರೇಲಿಯದ ಎಲ್ಲ ಬೌಲರ್‌ಗಳನ್ನು ಹೀನಾಯವಾಗಿ ದಂಡಿಸಿದರು. ಆಸಿಸ್​ ಗೆಲುವಿನ ಕನಸು ಇವರಿಬ್ಬರ ಆಟಕ್ಕೆ ದೂರ ಸರಿಯಿತು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 589ಕ್ಕೆ ಏರಿಕೆ ಕಂಡಿತ್ತು. ವಿವಿಎಸ್ ಲಕ್ಷ್ಮಣ್ 275 ಮತ್ತು ರಾಹುಲ್ ದ್ರಾವಿಡ್ 155 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.

ಭಾರತ ಐತಿಹಾಸಿಕ ಗೆಲುವು: ವಿವಿಎಸ್ ಲಕ್ಷ್ಮಣ್ (281) ಮತ್ತು ರಾಹುಲ್ ದ್ರಾವಿಡ್ (180) ನಡುವೆ ನಾಲ್ಕನೇ ವಿಕೆಟ್‌ಗೆ 376 ರನ್‌ಗಳ ದಾಖಲೆಯ ಜೊತೆಯಾಟ ಮಾಡಿದ್ದರು. ಇದರ ನೆರವಿನಿಂದ ಭಾರತ ಐದನೇ ದಿನ 657 ರನ್ ಗಳಿಸಿ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಭಾರತ ಆಸ್ಟ್ರೇಲಿಯಕ್ಕೆ 384 ರನ್‌ಗಳ ಗುರಿಯನ್ನು ನೀಡಿತು. ಹರ್ಭಜನ್ ಸಿಂಗ್ 6 ಹಾಗೂ ಸಚಿನ್ ತೆಂಡೂಲ್ಕರ್ 3 ವಿಕೆಟ್‌ ಕಬಳಿಸಿ ಡ್ರಾ ಆಗುವ ಪಂದ್ಯವನ್ನು ಗೆದ್ದುಕೊಂಡಿತು. ಆಸ್ಟ್ರೇಲಿಯಾವನ್ನು 212 ರನ್‌ಗಳಿಗೆ ಆಲೌಟ್ ಆದರೆ, ಭಾರತ 171 ರನ್‌ಗಳ ಐತಿಹಾಸಿಕ ಗೆಲುವು ದಾಖಲಿಸಿತ್ತು.

ಇದನ್ನೂ ಓದಿ: WTC 2023: ಭಾರತೀಯ ಆಟಗಾರರ ಪ್ರದರ್ಶನ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.