ETV Bharat / sports

Shubman Gills Dismissal: ಅಂಪೈರ್​ ನಿರ್ಧಾರವನ್ನು ಟ್ರೋಲ್​ ಮಾಡಿದ ಸೆಹ್ವಾಗ್​, ಜಾಫರ್​

author img

By

Published : Jun 11, 2023, 2:43 PM IST

ಶುಭಮನ್​ ಗಿಲ್​ ವಿವಾದಿತ ಔಟ್​ ನೀಡಿದ ಅಂಪೈರ್​​ ರಿಚರ್ಡ್​ ಕೆಟಲ್​ಬರೋ ಅವರ ನಿರ್ಧಾರವನ್ನು ಭಾರತದ ಹಿರಿಯ ಆಟಗಾರರಾದ ವೀರೇಂದ್ರ ಸೆಹ್ವಾಗ್​, ವಾಸೀಂ ಜಾಫರ್​ ಟ್ರೋಲ್​ ಮಾಡಿದ್ದಾರೆ.

: ಅಂಪೈರ್​ ನಿರ್ಧಾರವನ್ನು ಟ್ರೋಲ್​ ಮಾಡಿದ ಸೆಹ್ವಾಗ್​, ಜಾಫರ್​
: ಅಂಪೈರ್​ ನಿರ್ಧಾರವನ್ನು ಟ್ರೋಲ್​ ಮಾಡಿದ ಸೆಹ್ವಾಗ್​, ಜಾಫರ್​

ಕ್ರಿಕೆಟ್​ನಲ್ಲಿ ನಿಯಮಗಳನ್ನು ಅದೆಷ್ಟೇ ನಾಜೂಕಾಗಿ ರೂಪಿಸಿದ್ದರೂ, ಮಹತ್ವದ ಪಂದ್ಯಗಳಲ್ಲಿ ಅವು ದೊಡ್ಡ ವಿವಾದವನ್ನೇ ಸೃಷ್ಟಿಸುತ್ತವೆ. ಸಾಗುತ್ತಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಕೂಡ ಇಂಥದ್ದೇ ಒಂದು ಸೂಕ್ಷ್ಮ ನಿಯಮ ಚರ್ಚೆಗೀಡಾಗಿದೆ. ಭಾರತದ ಆರಂಭಿಕ ಬ್ಯಾಟರ್ ಶುಭಮನ್​ ಗಿಲ್​ ಔಟಾಗಿರುವುದು ಕ್ರಿಕೆಟ್​ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟಿಸಿದೆ. ಇದನ್ನು ಹಿರಿಯ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್​, ವಾಸೀಂ ಜಾಫರ್​ ಸೇರಿದಂತೆ ಹಲವರು ಟ್ರೋಲ್​ ಮಾಡಿದ್ದಾರೆ.

ವೀರೇಂದ್ರ ಸೆಹ್ವಾಗ್ ಟ್ರೋಲ್​ ಡಿಚ್ಚಿ: ಭಾರತದ ಹಿರಿಯ ಆಟಗಾರ ವೀರೇಂದ್ರ ಸೆಹ್ವಾಗ್​ ಕ್ರೀಸ್​ನಲ್ಲಿದ್ದಾಗ ಬೌಲರ್​ಗಳನ್ನು ಹೇಗೆ ಬೆಂಡೆತ್ತುತ್ತಿದ್ದರೋ, ನಿವೃತ್ತಿಯಾದ ಬಳಿಕ ಸಾಮಾಜಿಕ ಜಾಲತಾಣಗಳ ಮೂಲಕ ವಿವಾದಗಳುಂಟಾದರೆ ಟ್ರೋಲ್​ ಮಾಡಿ ಡಿಚ್ಚಿ ಕೊಡೋದು ಪಕ್ಕಾ. ಈಗ ಶುಭಮನ್​ ಗಿಲ್​ ಔಟಾಗಿದ್ದನ್ನೂ ತಮ್ಮದೇ ರೀತಿಯಲ್ಲಿ ಅಪಹಾಸ್ಯ ಮಾಡಿರುವ ವೀರೂ, ಅಂಪೈರ್​​ ರಿಚರ್ಡ್​ ಕೆಟಲ್​ಬರೋ ನಿರ್ಣಯವನ್ನು ಪ್ರಶ್ನಿಸಿದ್ದಾರೆ.

ವ್ಯಕ್ತಿಯೊಬ್ಬನ ಕಣ್ಣಿಗೆ ಬಟ್ಟೆ ಕಟ್ಟಿ ಕಣ್ಣಾಮುಚ್ಚಾಲೆ ಆಡುವ ಚಿತ್ರವನ್ನು ಟ್ವಿಟರ್​ನಲ್ಲಿ ಹಂಚಿಕೊಂಡು ಶುಭಮನ್​ ಗಿಲ್​ ಬಗ್ಗೆ ಮೂರನೇ ಅಂಪೈರ್​ಗೆ ಸಂದೇಹಗಳಿದ್ದರೆ, ಸೂಕ್ತ ಆಧಾರಗಳು ಇಲ್ಲದಾಗ ಅದು ನಾಟ್​ಔಟ್​ ಆಗಬೇಕಿತ್ತು ಎಂದು ಅಭಿಪ್ರಾಯಿಸಿ ಟ್ವೀಟಿಸಿದ್ದಾರೆ.

ಜಾಫರ್​ ವ್ಯಂಗ್ಯ ಟೀಕೆ: ಭಾರತದ ಇನ್ನೊಬ್ಬ ಹಿರಿಯ ಆಟಗಾರ ವಾಸೀಂ ಜಾಫರ್​ ಕೂಡ ವ್ಯಂಗ್ಯ ರೀತಿಯಲ್ಲಿ ಟ್ವೀಟ್​ ಮಾಡಿದ್ದಾರೆ. ಗುರಿ ನೋಡುವ ಕಣ್ಣನ್ನು ಮುಚ್ಚಿ, ಇನ್ನೊಂದು ಕಣ್ಣನ್ನು ತೆರೆದಿರುವ ಮಹಿಳಾ ಶೂಟರ್​ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಂದರೆ, ನೋಡಬೇಕಾದ ಕಣ್ಣನ್ನೇ ಮುಚ್ಚಿದರೆ ಗುರಿ ಹೇಗೆ ಕಾಣುತ್ತದೆ ಎಂಬುದು ಇದರ ಅರ್ಥವಾಗಿದೆ.

ಮೂರನೇ ಅಂಪೈರ್​ ಔಟ್​ ದೃಶ್ಯಗಳನ್ನು ಕಣ್ಣು ಮುಚ್ಚಿಕೊಂಡು ನೋಡಿದ್ದಾರೆ ಎಂದು ಹೇಳುವ ಮಾದರಿಯಲ್ಲಿ ಅಪಹಾಸ್ಯ ಮಾಡಿದ್ದಾರೆ. ಅಲ್ಲದೇ, "ಮೂರನೇ ಅಂಪೈರ್ ನಿರ್ಧರಿಸುವ ಮೊದಲು ದೃಶ್ಯಗಳನ್ನು ಹೀಗೆ ವೀಕ್ಷಿಸುತ್ತಿದ್ದಾರೆ" ಎಂದು ಬರೆದುಕೊಂಡಿದ್ದಾರೆ. ಇನ್ನು ಕೆಲವರು ಮೂರನೇ ಅಂಪೈರ್​ ನಿರ್ಧಾರವನ್ನು ನಿಯಮಗಳನ್ವಯ ಸರಿ ಎಂದು ವಾದಿಸಿದ್ದಾರೆ. ಆದರೆ, ಪ್ರಮುಖ ಪಂದ್ಯಗಳಲ್ಲಿ ಕ್ರಿಕೆಟ್​ನ ಇಂತಹ ಕೆಲ ನಿಯಮಗಳು ವಿವಾದಕ್ಕೀಡಾಗುವುದು ಮಾತ್ರ ತಪ್ಪಿಲ್ಲ.

ಏನಿದು ವಿವಾದಿತ ಔಟ್​: 444 ರನ್​ಗಳ ಬೆಟ್ಟದಂತ ಗುರಿ ಬೆನ್ನಟ್ಟಿರುವ ಭಾರತ 2ನೇ ಇನಿಂಗ್ಸ್​ನ ಆರಂಭದಲ್ಲಿ 18 ರನ್​ ಗಳಿಸಿ ಆಡುತ್ತಿದ್ದ ಶುಭಮನ್​ ಗಿಲ್​ ಸ್ಲಿಪ್​ನಲ್ಲಿದ್ದ ಕ್ಯಾಮರೂನ್​ ಗ್ರೀನ್​ಗೆ ಕ್ಯಾಚ್​ ನೀಡಿದರು. ಎಡಕ್ಕೆ ಜಿಗಿದು ಗ್ರೀನ್​ ಕ್ಯಾಚ್ ಹಿಡಿವ ವೇಳೆ ಚೆಂಡು ನೆಲಕ್ಕೆ ತಾಗಿದಂತಿತ್ತು. ಮೈದಾನದ ಅಂಪೈರ್​ ಸಾಫ್ಟ್​ ಸಿಗ್ನಲ್​ ರದ್ದಾದ ಕಾರಣ ನೇರವಾಗಿ ಮೂರನೇ ಅಂಪೈರ್​ ಮೊರೆ ಹೋಗಲಾಯಿತು. ಟಿವಿ ರಿಪ್ಲೈ ನೋಡಿದ ರಿಚರ್ಡ್​ ಕೆಟಲ್​ಬರೋ ಕೊನೆಗೆ ಔಟ್​ ನೀಡಿದರು.

ಆದರೆ ದೃಶ್ಯಗಳಲ್ಲಿ ಚೆಂಡು ನೆಲಕ್ಕೆ ತಾಕಿದ್ದು ಸ್ಪಷ್ಟವಾಗಿತ್ತು. ಐಸಿಸಿಯ ನಿಯಮದನ್ವಯ ಆಟಗಾರ ಕ್ಯಾಚ್​ ಪಡೆಯುವ ವೇಗದ ಆಧಾರದ ಮೇಲೆ ನೆಲಕ್ಕೆ ತಾಕುತ್ತಿದ್ದರೂ ಔಟ್​ ಎಂದು ಪರಿಗಣಿಸಲಾಗುತ್ತದೆ. ಮಹತ್ವದ ಘಟ್ಟದಲ್ಲಿ ಈ ರೀತಿ ಆಗಿದ್ದು ಚರ್ಚೆಗೀಡು ಮಾಡಿದೆ.

ಇದನ್ನೂ ಓದಿ: Shubman Gill: ಗಿಲ್​ ಔಟಾಗಲು ಹೊಸ ನಿಯಮ ಕಾರಣವೇ? ವಿಕೆಟ್​ ಬಗ್ಗೆ ಬೇಸರ ವ್ಯಕ್ತಪಡಿಸಿದ ಕ್ರಿಕೆಟಿಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.