ETV Bharat / sports

ರಿಷಬ್ ಪಂತ್ ಜನ್ಮದಿನ... ಯಾರಿಗಂತ ಹೇಳದೇ ಗಾಳಿಯಲ್ಲಿ ಕಿಸ್ ತೇಲಿಬಿಟ್ಟ ನಟಿ ಊರ್ವಶಿ ರೌಟೇಲಾ

author img

By

Published : Oct 5, 2022, 1:56 PM IST

ಬಾಲಿವುಡ್​ ನಟಿ ಊರ್ವಶಿ ರೌಟೇಲಾ ಕ್ರಿಕೆಟಿಗ ರಿಷಬ್​ ಪಂತ್​ರನ್ನು ಮತ್ತೆ ಕೆಣಕಿದ್ದಾರೆ. ಪಂತ್​ ಜನ್ಮದಿನಕ್ಕೆ ಪರೋಕ್ಷವಾಗಿ ವಿಷ್​ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Etv Bharaturvashi-rautelas-supposed-birthday
ರಿಷಬ್​ ಪಂತ್​ಗೆ ಕಿಸ್​ ಮಾಡಿದರೇ ನಟಿ ಊರ್ವಶಿ ರೌಟೇಲಾ

ಹೈದರಾಬಾದ್ (ತೆಲಂಗಾಣ): ಬಾಲಿವುಡ್​ ನಟಿ ಊರ್ವಶಿ ರೌಟೇಲಾ ಮತ್ತೆ ಸುದ್ದಿಯಲ್ಲಿದ್ದಾರೆ. ಕ್ರಿಕೆಟಿಗ ರಿಷಬ್​ ಪಂತ್​ 25 ನೇ ವರ್ಷಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಬಾಲಿವುಡ್​ ನಟಿ ಊರ್ವಶಿ ರೌಟೇಲಾ ಕೂಡ ಹೆಸರೇಳದೇ ಜನ್ಮದಿನದ ಶುಭಕೋರಿದ್ದು, ಇದು ರಿಷಬ್​ ಪಂತ್​ಗೆ ಹೇಳಿದ ಶುಭಾಶಯ ಎಂದು ಅಭಿಮಾನಿಗಳು ಭಾವಿಸಿದ್ದಾರೆ.

ನಟಿ ಊರ್ವಶಿ ಇನ್​ಸ್ಟಾಗ್ರಾಮ್​ನಲ್ಲಿ ಹರಿಬಿಟ್ಟಿರುವ ವಿಡಿಯೋದಲ್ಲಿ ಫ್ಲೈಯಿಂಗ್​ ಕಿಸ್​ ನೀಡಿದ್ದು, ಹ್ಯಾಪಿ ಬರ್ತಡೇ ಎಂದು ಬರೆದುಕೊಂಡಿದ್ದಾರೆ. ಮಂಗಳವಾರ ರಿಷಬ್​ ಪಂತ್ ಜನ್ಮದಿನವಾದ ಕಾರಣ ಅವರು ಕ್ರಿಕೆಟಿಗನಿಗೇ ವಿಷ್​ ಮಾಡಿದ್ದು ಎಂದು ಅಭಿಮಾನಿಗಳು ಲಿಂಕ್​ ಮಾಡಿದ್ದಾರೆ.

ಊರ್ವಶಿ ಮತ್ತೆ ಟ್ರೋಲ್​: ಕ್ರಿಕೆಟಿಗನಿಗೆ ಪರೋಕ್ಷವಾಗಿ ವಿಷ್​ ಮಾಡಿದ ನಟಿ ಊರ್ವಶಿಯನ್ನು ರಿಷಬ್​ ಪಂತ್​ ಅಭಿಮಾನಿಗಳು ಟ್ರೋಲ್​ ಮಾಡಿದ್ದಾರೆ. ಪಂತ್​ ಹೆಸರೇಳಿ ಎಷ್ಟು ಬಾರಿ ಖ್ಯಾತಿ ಪಡೆಯುತ್ತೀರಿ ಎಂದೆಲ್ಲಾ ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ಟ್ರೆಂಡ್​ ಆಗಿತ್ತು.

ಕೆಲ ದಿನಗಳ ಹಿಂದೆ ಕೂಡ ಊರ್ವಶಿ ರೌಟೇಲಾ ರಿಷಬ್​ ಪಂತ್​ ಪರಿಚಯವದ ಬಗ್ಗೆ ಹೇಳಿಕೊಂಡಿದ್ದರು. ತಮ್ಮನ್ನು ಭೇಟಿಯಾಗಲು ಹೋಟೆಲ್​ ರೂಮಿಗೆ ಬರುತ್ತೇನೆ ಎಂದು ಪಂತ್​ ಕಾಯಿಸಿದ್ದರು ಎಂದು ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದರು.

ಇದು ಇಬ್ಬರ ಮಧ್ಯೆ ಕಿತ್ತಾಟಕ್ಕೆ ಕಾರಣವಾಗಿ, ಕ್ರಿಕೆಟಿಗ ರಿಷಬ್​ ಪಂತ್​ ತಮ್ಮ ಹಿಂದೆ ಬೀಳುವುದನ್ನು ಬಿಡಿ ಅಕ್ಕ ಎಂದು ಕಾಲೆಳೆದಿದ್ದರು. ಇದಕ್ಕೆ ನಟಿ ಕೂಡ ಖಾರವಾಗಿ ಉತ್ತರಿಸಿ ರಾಖಿ ಹಬ್ಬದ ಶುಭಾಶಯ ಕೋರಿದ್ದರು.

ಓದಿ: ತೇಜ್​​ರಾನ್​ ಮದುವೆ ಯಾವಾಗ..ತೇಜಸ್ವಿ ಪ್ರಕಾಶ್ ಹೇಳಿದ್ದೇನು ಗೊತ್ತಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.