ETV Bharat / sports

U19 world cup finals: ಭಾರತಕ್ಕೆ ದಾಖಲೆಯ 5ನೇ ವಿಶ್ವಕಪ್​ ಗೆಲ್ಲಲು 190ರನ್​ಗಳ ಗುರಿ

author img

By

Published : Feb 5, 2022, 10:11 PM IST

Updated : Feb 5, 2022, 11:02 PM IST

ಫೈನಲ್​ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಇಂಗ್ಲೆಂಡ್ U19 ತಂಡ ಜೇಮ್ಸ್​ ರಿವ್​ ಅವರ 95 ರನ್​ಗಳ ಹೊರತಾಗಿಯೂ 44.5 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 189 ರನ್​ಗಳಿಸಿದೆ. ರಿವ್​ 116 ಎಸೆತಗಳಲ್ಲಿ 12 ಬೌಂಡರಿ ಸಹಿತ 95 ರನ್​ಗಳಿಸಿದರೆ, ಉಳಿದೆಲ್ಲಾ ಬ್ಯಾಟರ್​ಗಳು ಕೇವಲ 94 ರನ್​ಗಳಿಸಿದರು.

U19 world cup final
ಅಂಡರ್​ 19 ವಿಶ್ವಕಪ್ ಫೈನಲ್

ಆಂಟಿಗುವಾ: ರವಿಕುಮಾರ್ ಮತ್ತು ರಾಜ್​ ಭಾವಾ ಅವರ ಅಮೋಘ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ಕಿರಿಯರ ತಂಡ 2022ರ ಅಂಡರ್​ 19 ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಆಂಗ್ಲರನ್ನು 189ಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ.

ಫೈನಲ್​ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಇಂಗ್ಲೆಂಡ್ U19 ತಂಡ ಜೇಮ್ಸ್​ ರಿವ್​ ಅವರ 95 ರನ್​ಗಳ ಹೊರತಾಗಿಯೂ 44.5 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 189 ರನ್​ಗಳಿಸಿದೆ. ರಿವ್​ 116 ಎಸೆತಗಳಲ್ಲಿ 12 ಬೌಂಡರಿ ಸಹಿತ 95 ರನ್​ಗಳಿಸಿದರೆ, ಉಳಿದೆಲ್ಲಾ ಬ್ಯಾಟರ್​ಗಳು ಕೇವಲ 94 ರನ್​ಗಳಿಸಿದರು.

91 ರನ್​ಗಳಿಗೆ 7 ವಿಕೆಟ್ ಕಳೆದುಕೊಂಡು ಇಂಗ್ಲೆಂಡ್​

ಇಂಗ್ಲೆಂಡ್ ಪರ ಆರಂಭಿರಾಗಿ ಕಣಕ್ಕಿಳಿದಿದ್ದ ಸ್ಫೋಟಕ ಬ್ಯಾಟರ್​ ಜಾಕೋಬ್ ಬೆತೆಲ್(2)​ ಮತ್ತು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಇಳಿದಿದ್ದ ನಾಯಕ ಟಾಮ್​ ಪ್ರಿಸ್ಟ್(0)​ರನ್ನು ತಂಡದ ಮೊತ್ತ 18ರನ್​ಗಳಾಗುವಷ್ಟರಲ್ಲಿ ರವಿ ಕುಮಾರ್​ ಪೆವಿಲಿಯನ್​ಗಟ್ಟಿದರು. ನಂತರ ಬಂದ ವಿಲ್​ ಲಕ್​ಸ್ಟನ್​(4), ಜಾರ್ಜ್​ ಬೆಲ್​(0),ರೆಹಾನ್ ಅಹ್ಮದ್​, ಅಲೆಕ್ಸ್​ ಹೊರ್ಟನ್​ ತಲಾ 10 ರನ್ ನೀಡಿ ವಿಕೆಟ್​ ಒಪ್ಪಿಸಿದರು. ಇದರಲ್ಲಿ 4 ವಿಕೆಟ್​ ರಾಜ್​ ಬಾವಾ ಪಡೆದರೆ, ಕೌಶಾಲ್​ ತಾಂಬೆ ಒಂದು ವಿಕೆಟ್ ಪಡೆದಿದ್ದರು.

100 ರನ್​ಗಳಿಗೆ ಆಲೌಟ್​ ಆಗಬಹುದು ಎನ್ನುತ್ತಿದ್ದ ವೇಳೆ 8ನೇ ವಿಕೆಟ್​ ಒಂದಾದ ಜೇಮ್ಸ್​ ರಿವ್​(95) ಮತ್ತು ಜೇಮ್ಸ್​ ಸೇಲ್ಸ್​(34) 3ನೇ ವಿಕೆಟ್​ಗೆ 93 ರನ್​ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನು 180ರ ಗಢಿ ದಾಟಿಸಿದರು. ಆದರೆ ಒಂದೇ ಓವರ್​ನಲ್ಲಿ ರವಿ ಕುಮಾರ್​ ರಿವ್​ ಮತ್ತು ಥಾಮಸ್​ ಆ್ಯಸ್ಪಿನ್​ವಿಲ್​ ವಿಕೆಟ್​ ಪಡೆದು ಇಂಗ್ಲೆಂಡ್​ ತಂಡದ ಬೃಹತ್ ಮೊತ್ತದ ಕನಸಿಗೆ ತಣ್ಣೀರೆರಚಿದರು.

ಭಾರತದ ಪರ ಪ್ರಚಂಡ ಬೌಲಿಂಗ್ ದಾಳಿ ನಡೆಸಿದ ವೇಗಿಗಳಾದ ರವಿಕುಮಾರ್​ 34ಕ್ಕೆ 4, ರಾಜ್​ ಭಾವಾ 31ಕ್ಕೆ 5 ವಿಕೆಟ್ ಪಡೆದು ಆಂಗ್ಲರನ್ನು 200ರ ಗಡಿ ದಾಟದಂತೆ ತಡೆಯುವಲ್ಲಿ ಯಶಸ್ವಿಯಾದರು. ಕೌಶಾಲ್ ತಾಂಬೆ 29ಕ್ಕೆ 1 ವಿಕೆಟ್ ಪಡೆದರು.

ಇದನ್ನು ಓದಿ: IND vs WI ODI : ಭಾರತ ತಂಡಕ್ಕೆ ಇಬ್ಬರು ಸ್ಫೋಟಕ ಬ್ಯಾಟರ್​ಗಳ ಸೇರ್ಪಡೆ

Last Updated : Feb 5, 2022, 11:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.