ETV Bharat / sports

"ಅನುಭವಗಳಿಂದಲೇ ಪಾಠ ಕಲಿಯಬೇಕು"...ರಾಹುಲ್ ದ್ರಾವಿಡ್

author img

By

Published : Jul 30, 2021, 6:36 AM IST

Updated : Jul 30, 2021, 6:49 AM IST

ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ಮೂರು ಟಿ - 20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವು 1-2 ಅಂತರದಿಂದ ಸೋಲು ಕಂಡಿದೆ. ಈ ಬಗ್ಗೆ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Dravid
ರಾಹುಲ್ ದ್ರಾವಿಡ್

ಕೊಲಂಬೊ: ಭಾರತೀಯ ಕ್ರಿಕೆಟ್​ ತಂಡದ ಹೊಸ ಮುಖಗಳು ಅನುಭವಗಳಿಂದ ಕಲಿಯಬೇಕಿದೆ. ಕಡಿಮೆ ಸ್ಕೋರ್​ ಮಾಡಿದ್ದ ಸಂದರ್ಭದಲ್ಲಿ ಯಾವ ರೀತಿ ಆಟ ಆಡಬೇಕು ಎಂಬ ಕಲೆಯ ಬಗ್ಗೆ ತಿಳಿದುಕೊಳ್ಳಬೇಕು ಎಂದು ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ. ಶ್ರೀಲಂಕಾ ವಿರುದ್ಧದ ಕೊನೆಯ ಎರಡು ಟಿ- 20 ಅಂತಾರಾಷ್ಟ್ರೀಯ ಪಂದ್ಯದ ಬಗ್ಗೆ ಉಲ್ಲೇಖಿಸಿ ಅವರು ಮಾತನಾಡಿದರು.

ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ಮೂರು ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವು 1-2 ಅಂತರದಿಂದ ಸೋಲು ಕಂಡಿದೆ. ಲೆಗ್ ಸ್ಪಿನ್ನರ್ ವನಿಂದು ಹಸರಂಗ ನೇತೃತ್ವದಲ್ಲಿ ಗುಣಮಟ್ಟದ ಸ್ಪಿನ್ ಬೌಲಿಂಗ್ ದಾಳಿಗೆ ಭಾರತದ ದೇವದತ್ತ್​ ಪಡಿಕ್ಕಲ್, ರುತುರಾಜ್ಡ್ ಗಾಯಕ್​ವಾಡ್, ನಿತೀಶ್ ರಾಣಾ ಮತ್ತು ಸಂಜು ಸ್ಯಾಮ್ಸನ್ ಅಕ್ಷರಶಃ ಹೋರಾಡಬೇಕಾಯಿತು.

"ನಮ್ಮ ತಂಡದ ಸದಸ್ಯರು ಸಣ್ಣವರಾಗಿರುವುದರಿಂದ ನಾನು ನಿರಾಸೆಗೊಳ್ಳುವುದಿಲ್ಲ. ಅವರು ಈ ರೀತಿಯ ಪರಿಸ್ಥಿತಿಗಳು ಮತ್ತು ಬೌಲಿಂಗ್ ಗುಣಮಟ್ಟಕ್ಕೆ ಒಡ್ಡಿಕೊಂಡಾಗ ಮಾತ್ರ ಕಲಿಯಲು ಸಾಧ್ಯ. ಇನ್ನು ಶ್ರೀಲಂಕಾ ತಂಡದ ಬೌಲಿಂಗ್ ದಾಳಿಯು ಅಂತಾರಾಷ್ಟ್ರೀಯ ಮಟ್ಟದ್ದಾಗಿದೆ" ಎಂದು ದ್ರಾವಿಡ್ ಹೇಳಿದರು.

Last Updated : Jul 30, 2021, 6:49 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.