ETV Bharat / sports

IPL 2022: ಗುಜರಾತ್ ವಿರುದ್ಧ ಆರ್​ಸಿಬಿ ಸೋಲಿಗೆ ಕಾರಣವಾದ 3 ಅಂಶಗಳು

author img

By

Published : Apr 30, 2022, 9:51 PM IST

ಶನಿವಾರ ನಡೆದ ಪಂದ್ಯದಲ್ಲಿ ಆರ್​ಸಿಬಿ 15ನೇ ಆವೃತ್ತಿಯ ಅತ್ಯಂತ ಸ್ಥಿರತೆಯುಳ್ಳ ತಂಡವಾದ ಗುಜರಾತ್ ಟೈಟನ್ಸ್ ವಿರುದ್ಧ 6 ವಿಕೆಟ್​ಗಳ ಸೋಲು ಕಂಡಿತು. ಆದರೆ ಈ ಪಂದ್ಯದಲ್ಲಿ ಗೆಲ್ಲುವ ಅವಕಾಶವನ್ನು ಆರ್​ಸಿಬಿ ತೆಗೆದುಕೊಂಡ ಕೆಲವು ನಿರ್ಣಯಗಳು ಮತ್ತು ಕೆಲ ಆಟಗಾರರ ಪ್ರದರ್ಶನ ಕೂಡ ಕಾರಣವಾಗಿವೆ.

Gujarat Titans vs Royal Challengers Bangalore
Gujarat Titans vs Royal Challengers Bangalore

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲಾರ್ಧದ 7 ಪಂದ್ಯಗಳಲ್ಲಿ 5 ರಲ್ಲಿ ಜಯಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಂತರ ಆಡಿದ 3 ಪಂದ್ಯಗಳಲ್ಲೂ ಸೋಲು ಕಾಣುವ ಮೂಲಕ ಪ್ಲೇ ಆಫ್​ ಪ್ರವೇಶಿಸುವ ಹಾದಿಯನ್ನು ಕಠಿಣ ಮಾಡಿಕೊಂಡಿದೆ.

ಶನಿವಾರ ನಡೆದ ಪಂದ್ಯದಲ್ಲಿ ಆರ್​ಸಿಬಿ 15ನೇ ಆವೃತ್ತಿಯ ಅತ್ಯಂತ ಸ್ಥಿರತೆಯುಳ್ಳ ತಂಡವಾದ ಗುಜರಾತ್ ಟೈಟನ್ಸ್ ವಿರುದ್ಧ 6 ವಿಕೆಟ್​ಗಳ ಸೋಲು ಕಂಡಿತು. ಆದರೆ ಈ ಪಂದ್ಯದಲ್ಲಿ ಗೆಲ್ಲುವ ಅವಕಾಶವನ್ನು ಆರ್​ಸಿಬಿ ತೆಗೆದುಕೊಂಡ ಕೆಲವು ನಿರ್ಣಯಗಳು ಮತ್ತು ಕೆಲವು ಆಟಗಾರರ ಪ್ರದರ್ಶನ ಕೂಡ ಕಾರಣವಾಗಿವೆ.

  1. ಟಾಸ್​ ಗೆದ್ದರೂ ಬ್ಯಾಟಿಂಗ್ ಆಯ್ಕೆ: ಐಪಿಎಲ್​ನ 15ನೇ ಆವೃತ್ತಿಯಲ್ಲಿ 43 ಪಂದ್ಯಗಳಾಗಿದ್ದು, ಒಂದು ಪಂದ್ಯ ಬಿಟ್ಟು ಟಾಸ್​ ಗೆದ್ದ ತಂಡಗಳು ಎಲ್ಲಾ ಪಂದ್ಯಗಳಲ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದವು. ಗುಜರಾತ್ ಟೈಟನ್ಸ್ ಮಾತ್ರ ಒಮ್ಮೆ ಬ್ಯಾಟಿಂಗ್ ಮಾಡಿ ಡಿಫೆಂಡ್ ಕೂಡ ಮಾಡಿಕೊಂಡಿತ್ತು. ಆದರೆ ಆರ್​ಸಿಬಿ ನಿರ್ಣಯ ಅಚ್ಚರಿಯಾಗಿತ್ತು. ಏಕೆಂದರೆ ಇದೇ ಮೈದಾನದಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿ ಕೇವಲ 68 ರನ್​ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿತ್ತು. ಇದು ತಿಳಿದಿದ್ದರೂ ಮತ್ತೆ ಅದನ್ನೇ ಆಯ್ಕೆ ಮಾಡಿಕೊಂಡಿದ್ದು, ಮೂರ್ಖತನದ ನಿರ್ಧಾರವಾಗಿತ್ತು.
  2. ವಿರಾಟ್​ ಕೊಹ್ಲಿ ನಿಧಾನಗತಿ ಇನ್ನಿಂಗ್ಸ್: ಫಾರ್ಮ್​ ಸಮಸ್ಯೆ ಎದುರಿಸುತ್ತಿದ್ದ ಮಾಜಿ ನಾಯಕ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಉತ್ತಮ ಆರಂಭ ಪಡೆದರು. ಮೊದಲ ಓವರ್​ನಲ್ಲೇ 2 ಬೌಂಡರಿ ಸಿಡಿಸಿದ್ದ ಅವರು ಒಂದು ಅಂತದಲ್ಲಿ 18 ಎಸೆತಗಳಲ್ಲಿ 24 ರನ್​ಗಳಿಸಿದ್ದರು. ಆದರೆ ಮುಂದಿನ 26 ರನ್​ಗಳಿಸಲು ಅವರು 27 ಎಸೆತಗಳನ್ನು ತೆಗೆದುಕೊಂಡರು. ಕೊನೆಗೆ 53 ಎಸೆತಗಳಲ್ಲಿ 58 ರನ್​ಗಳಿಸಿ 17ನೇ ಓವರ್​ನಲ್ಲಿ ವಿಕೆಟ್​ ಒಪ್ಪಿಸಿದರು. ತಂಡಕ್ಕೆ ಗೆಲುವು ಅನಿವಾರ್ಯವಾಗಿದ್ದ ಪಂದ್ಯದಲ್ಲಿ ಅವರು ವೇಗವಾಗಿ ರನ್​ಗಳಿಸಲು ಪ್ರಯತ್ನಿಸದಿರುವುದು ಒಂದು ಕಾರಣವಾಯಿತು.
  3. ಶಹಬಾಜ್ ಸ್ಪೆಲ್ ಅಪೂರ್ಣ: ಸತತ 2 ಓವರ್​ಗಳಲ್ಲಿ ಶುಬ್ಮನ್​ ಗಿಲ್​ ಮತ್ತು ಹಾರ್ದಿಕ್ ಪಾಂಡ್ಯರಂತಹ ಅನುಭವಿಗಳ ವಿಕೆಟ್ ಪಡೆದಿದ್ದ ಶಹಬಾಜ್​ ಉತ್ತಮ ರಿದಮ್​ ಕಂಡುಕೊಂಡಿದ್ದರೂ ಅವರ ಸ್ಪೆಲ್ ಅಪೂರ್ಣಗೊಳಿಸಿದರು. ಹಸರಂಗ ಮತ್ತು ಶಹಬಾಜ್ ಜೋಡಿ ಟೈಟನ್ಸ್​ ತಂಡದ ಬ್ಯಾಟರ್​ಗಳನ್ನು ಸತತವಾಗಿ ಪೆವಿಲಿಯನ್​ಗಟ್ಟುತ್ತಿದ್ದರೂ ಮಧ್ಯ ಪೇಸರ್​ಗಳನ್ನು ತಂದ ನಿರ್ಧಾರ ಆರ್​ಸಿಬಿಗೆ ಮಾರಕವಾಗಿ ಪರಿಣಮಿಸಿತು. ಒಂದು ವೇಳೆ ಮಿಲ್ಲರ್ ಅಥವಾ ತೆವಾಟಿಯಾ ಇಬ್ಬರಲ್ಲಿ ಒಬ್ಬರ ವಿಕೆಟ್ ಪಡೆದಿದ್ದರೂ ಈ ಪಂದ್ಯ ಆರ್​ಸಿಬಿಯದ್ದಾಗಿರುತ್ತಿತ್ತು.

ಇದನ್ನೂ ಓದಿ:ಆರ್​ಸಿಬಿಯಿಂದ ಜಯ ಕಸಿದುಕೊಂಡ ತೆವಾಟಿಯಾ-ಮಿಲ್ಲರ್​.. ಪ್ಲೇ ಆಫ್​ಗೆ ಹತ್ತಿರವಾದ ಟೈಟನ್ಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.