ಮುಂಬೈ (ಮಹಾರಾಷ್ಟ್ರ): ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆಯಲಿರುವ ಒಡಿಐ ವಿಶ್ವಕಪ್ 2023ರ 33ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಮುಂಚಿತವಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ( BCCI) ಕಾರ್ಯದರ್ಶಿ ಜಯ್ ಶಾ ಅವರು, ''ಮುಂಬೈನಲ್ಲಿ ಪಟಾಕಿ ಸಿಡಿಸುವುದಿಲ್ಲ'' ಎಂದು ಹೇಳಿದ್ದಾರೆ.
''ಭಾರತೀಯ ಕ್ರಿಕೆಟ್‌ನ ಅತ್ಯುನ್ನತ ಸಂಸ್ಥೆಯು ಪರಿಸರ ಕಾಳಜಿಯ ಬಗ್ಗೆ ಸೂಕ್ಷ್ಮತೆ ಹೊಂದಿದೆ. ಈ ವಿಷಯವನ್ನು ಐಸಿಸಿಗೂ ಮುಟ್ಟಿಸಲಾಗಿದೆ. ಪರಿಸರ ಮಾಲಿನ್ಯ ತಡೆಗಟ್ಟಲು ವಾಂಖೆಡೆ ಸ್ಟೇಡಿಯಂನಲ್ಲಿ ಯಾವುದೇ ಪಟಾಕಿಗಳನ್ನು ಸಿಡಿಸಬಾರದು ಎಂದು ನಿರ್ಧರಿಸಲಾಗಿದೆ'' ಎಂದು ಜಯ್ ಶಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ''ಪರಿಸರ ಸಮಸ್ಯೆಗಳ ವಿರುದ್ಧ ಹೋರಾಡಲು ಬಿಸಿಸಿಐ ಬದ್ಧವಾಗಿದೆ. ಈ ಹಿತಾಸಕ್ತಿಗೆ ಕ್ರಿಕೆಟ್ ಅಭಿಮಾನಿಗಳು ಸೇರಿದಂತೆ ಎಲ್ಲರೂ ಬೆಂಬಲಿಸಬೇಕು'' ಎಂದು ಅವರು ಹೇಳಿದರು.
"ಬಿಸಿಸಿಐ ಪರಿಸರದ ಬಗ್ಗೆ ವಿಶೇಷ ಕಾಳಜಿ ವಹಿಸಿದೆ. ನಾನು ಕೂಡ ಈ ವಿಷಯವಾಗಿ ಐಸಿಸಿಯೊಂದಿಗೆ ಔಪಚಾರಿಕವಾಗಿ ತಿಳಿಸಿದ್ದೇನೆ. ಮುಂಬೈನಲ್ಲಿ ಯಾವುದೇ ಪಟಾಕಿ ಹಾರಿಸಬಾರದು. ಇದು ಮಾಲಿನ್ಯದ ಮಟ್ಟವನ್ನು ಕಡೆಮೆ ಮಾಡುತ್ತದೆ. ಮಂಡಳಿಯು ಪರಿಸರಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬದ್ಧವಾಗಿದೆ. ಯಾವಾಗಲೂ ಪರಿಸರ ಸ್ನೇಹಿ ಹಿತಾಸಕ್ತಿಗಳನ್ನು ಬೆಂಬಲಿಸುತ್ತದೆ. ನಮ್ಮ ಅಭಿಮಾನಿಗಳು ಈ ಹಿತಾಸಕ್ತಿಗೆ ಸಹಕಾರ ನೀಡಬೇಕು'' ಎಂದ ಅವರು, ಮುಂಬೈ ಮತ್ತು ನವದೆಹಲಿ ಎರಡರಲ್ಲೂ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಬಿಸಿಸಿಐ ತುರ್ತು ಕಾಳಜಿವಹಿಸಿದೆ'' ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಜಯ್ ಶಾ ಅವರು ತಿಳಿಸಿದರು.
''ಐಸಿಸಿ ವಿಶ್ವಕಪ್ ಸಂದರ್ಭದಲ್ಲಿ ಈ ನಿರ್ಧಾರ ತೆಗೆದುಕೊಂಡಿರುವ ಉದ್ದೇಶ ಎಂದರೆ, ನಮ್ಮೆಲ್ಲರ ಆರೋಗ್ಯ ಮತ್ತು ಸುರಕ್ಷತೆಗೆ ಮೊದಲ ಆದ್ಯತೆ ನೀಡುವುದು ಬಿಸಿಸಿಐ ಮತ್ತು ಐಸಿಸಿಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ದೃಢವಾದ ಬದ್ಧತೆ ಪ್ರದರ್ಶಿಸಬೇಕಾಗುತ್ತದೆ'' ಎಂದು ಅವರು ಇದೇ ವೇಳೆ ತಮ್ಮ ಬದ್ಧತೆ ವ್ಯಕ್ತಪಡಿಸಿದರು.
ಅಗ್ರಸ್ಥಾನದಲ್ಲಿ ಟೀಂ ಇಂಡಿಯಾ: ಭಾರತ ತನ್ನ ಮುಂದಿನ ಪಂದ್ಯವನ್ನು ಗುರುವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ಆಡಲಿದೆ. ಐಸಿಸಿ ವಿಶ್ವಕಪ್‌ನಲ್ಲಿ ಭಾರತ ಇದುವರೆಗೆ ಆಡಿರುವ ಎಲ್ಲ ಆರು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ನಂತರದ ಸ್ಥಾನದಲ್ಲಿವೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ವಿಲಿಯಮ್ಸನ್ ಅಲಭ್ಯ