ETV Bharat / sports

ಭಾರತ ತಂಡದಲ್ಲಿ ದೌರ್ಬಲ್ಯಗಳಿವೆ, ಇಂಗ್ಲೆಂಡ್ ಸರಣಿ ಗೆಲ್ಲುವ ವಿಶ್ವಾಸವಿದೆ : ನಾಸಿರ್​ ಹುಸೇನ್

author img

By

Published : Aug 23, 2021, 5:35 PM IST

ಹೆಡಿಂಗ್ಲೆ ಫ್ಲಾಟ್ ಪಿಚ್​ ಆಗಿದ್ದು, ಎರಡೂ ತಂಡಗಳಿಂದಲೂ ರನ್​ ಹರಿದು ಬರಲಿದೆ ಎಂದು ಹುಸೇನ್ ಅಭಿಪ್ರಾಯಪಟ್ಟಿದ್ದಾರೆ. ಈ ಪಿಚ್​ ಜೋ ರೂಟ್​, ಜಾನಿ ಬೈರ್​ಸ್ಟೋವ್​, ಡೇವಿಡ್ ಮಲನ್ ಅವರ ತವರು ನೆಲವಾಗಿದ್ದು, ಅವರಿಂದಲೂ ಉತ್ತಮ ರನ್​ ಬರುವ ನಿರೀಕ್ಷೆಯಿದೆ..

Nasser Hussain
ನಾಸಿರ್ ಹುಸೇನ್

ಲೀಡ್ಸ್ ​: ಲಾರ್ಡ್ಸ್​ನಲ್ಲಿ ಅದ್ವಿತೀಯ ಜಯ ಸಾಧಿಸಿದ ಹೊರೆತಾಗಿಯೂ ಭಾರತ ತಂಡದಲ್ಲಿರುವ ಕೆಲವು ದೌರ್ಬಲ್ಯಗಳನ್ನು ಇಂಗ್ಲೆಂಡ್​ ನೆನಪಿನಲ್ಲಿಡಬೇಕಾಗಿದೆ ಎಂದು ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್​ ತಿಳಿಸಿದ್ದಾರೆ. ಜೊತೆಗೆ ಮುಂದಿನ ಮೂರು ಟೆಸ್ಟ್​ ಪಂದ್ಯಗಳಲ್ಲಿ ಇಂಗ್ಲೆಂಡ್​ ಜಯ ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಭಾರತ ತಂಡದಲ್ಲಿ ಇನ್ನೂ ಕೆಲವು ದೌರ್ಬಲ್ಯಗಳಿವೆ. ಇದನ್ನು ಹೆಡಿಂಗ್ಲೆಯಲ್ಲಿ ಇಂಗ್ಲೆಂಡ್ ನೆನಪಿನಲ್ಲಿಟ್ಟುಕೊಳ್ಳಬೇಕು. ಒಂದು ವೇಳೆ ಜೋಫ್ರಾ ಆರ್ಚರ್​, ಬೆನ್​ ಸ್ಟೋಕ್ಸ್​, ಕ್ರಿಸ್​ ವೋಕ್ಸ್​ ಮತ್ತು ಸ್ಟುವರ್ಟ್​ ಬ್ರಾಡ್​ರನ್ನು ಇಂಗ್ಲೆಂಡ್​ ಹೊಂದಿದ್ದರೆ, ಈ ಸರಣಿಯನ್ನು ಸುಲಭವಾಗಿ ಗೆಲ್ಲಲಿದೆ ಎಂದು ನಾನು ಬಲವಾಗಿ ಹೇಳುತ್ತಿದ್ದೆ.

ಆದರೂ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲೂ ಮುಂದಿನ ಮೂರು ಟೆಸ್ಟ್​ ಪಂದ್ಯಗಳಲ್ಲಿ ಇಂಗ್ಲೆಂಡ್​ ತಿರುಗಿ ಬೀಳಲಿದೆ ಎಂದು ಹುಸೇನ್ ಡೈಲಿ ಮೇಲ್​ಗೆ ಬರೆದ ಲೇಖನದಲ್ಲಿ ತಿಳಿಸಿದ್ದಾರೆ. ನೀವು ಭಾರತ ತಂಡದ ಬ್ಯಾಟಿಂಗ್ ಲೈನ್​ ಅಪ್​ ನೋಡಿದಾಗ, ರಿಷಭ್​ ಪಂತ್​ ಒಬ್ಬರ ಅಪಾಯಕಾರಿ ಬ್ಯಾಟ್ಸ್​ಮನ್ ಆಗಿ ಕಾಣುತ್ತಾರೆ.

ಆದರೆ, ಅವರು ಎಲ್ಲಾ ಸಮಯದಲ್ಲೂ ಆಡುವುದಕ್ಕೆ ಸಾಧ್ಯವಿಲ್ಲ. 7ನೇ ಕ್ರಮಾಂಕದಲ್ಲಿ ಆಡುವ ರವೀಂದ್ರ ಜಡೇಜಾ ಅವರ ಬಗ್ಗೆಯೂ ಇದೇ ಅಭಿಪ್ರಾಯವಿದೆ. ಇನ್ನೂ ಅವರು ಲಾರ್ಡ್ಸ್​ನಲ್ಲಿ ಅವರು ಏನೇ ಮಾಡಿದ್ದರೂ, ಭಾರತ ತಂಡದಲ್ಲಿ ಇನ್ನೂ ಲೋಪದೋಷಗಳ ದೊಡ್ಡದಾದ ಬಾಲವನ್ನು ಹೊಂದಿದೆ. ಕಳೆದ ಪಂದ್ಯದಲ್ಲಿ ಇಂಗ್ಲೆಂಡ್ ಎದುರಾಳಿಯ ಬಾಲಂಗೋಚಿಗಳ ವಿರುದ್ಧ ಸ್ಥಿರತೆ ಕಳೆದುಕೊಂಡದ್ದು ಸೋಲಿಗೆ ಕಾರಣವಾಯಿತು" ಎಂದು ಹುಸೇನ್ ಬರೆದಿದ್ದಾರೆ.

ಹೆಡಿಂಗ್ಲೆ ಫ್ಲಾಟ್ ಪಿಚ್​ ಆಗಿದ್ದು, ಎರಡೂ ತಂಡಗಳಿಂದಲೂ ರನ್​ ಹರಿದು ಬರಲಿದೆ ಎಂದು ಹುಸೇನ್ ಅಭಿಪ್ರಾಯಪಟ್ಟಿದ್ದಾರೆ. ಈ ಪಿಚ್​ ಜೋ ರೂಟ್​, ಜಾನಿ ಬೈರ್​ಸ್ಟೋವ್​, ಡೇವಿಡ್ ಮಲನ್ ಅವರ ತವರು ನೆಲವಾಗಿದ್ದು, ಅವರಿಂದಲೂ ಉತ್ತಮ ರನ್​ ಬರುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ: ಶೀಘ್ರದಲ್ಲಿ ಕೊಹ್ಲಿಯಿಂದ ಒಂದು ದೊಡ್ಡ ಶತಕ ಹೊರ ಬರಲಿದೆ : ಬಾಲ್ಯದ ಕೋಚ್ ರಾಜ್​ಕುಮಾರ್ ಶರ್ಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.