ETV Bharat / sports

4ನೇ ಸ್ಥಾನದಲ್ಲಿ ಬ್ಯಾಟಿಂಗ್​ ಮಾಡುವ ಆಟಗಾರರು ಹಲವರಿದ್ದಾರೆ: ಸೌರವ್ ಗಂಗೂಲಿ

author img

By

Published : Aug 19, 2023, 8:02 AM IST

Former India Captain Sourav Ganguly: ''ಭಾರತ ತಂಡದಲ್ಲಿ 4ನೇ ಸ್ಥಾನದಲ್ಲಿ ಆಟವಾಡುವ ಆಟಗಾರರು ಇಲ್ಲ ಎಂದು ಯಾರು ಹೇಳಿದ್ದಾರೆ. 4ನೇ ನಂಬರ್​ನಲ್ಲಿ ಬ್ಯಾಟಿಂಗ್ ಮಾಡುವವರು ತಂಡದಲ್ಲಿ ಅನೇಕರು ಇದ್ದಾರೆ'' ಎಂದು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

"There are many who can bat at no.4": Sourav Ganguly
4ನೇ ಸ್ಥಾನದಲ್ಲಿ ಬ್ಯಾಟಿಂಗ್​ ಮಾಡುವ ಆಟಗಾರರು ಹಲವರಿದ್ದಾರೆ: ಸೌರವ್ ಗಂಗೂಲಿ

ಕೋಲ್ಕತ್ತಾ (ಪಶ್ಚಿಮ ಬಂಗಾಳ): 2023ರ ಐಸಿಸಿ ವಿಶ್ವಕಪ್​ನಲ್ಲಿ ಭಾರತದ 4ನೇ ಸ್ಥಾನದಲ್ಲಿ ಯಾರು ಎಂಬುದರ ಮೇಲೆ ಎಲ್ಲ ಕಣ್ಣುಗಳಿವೆ. ಆದರೆ, ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು, ಈ ವಿಚಾರದಲ್ಲಿ ಭಾರತಕ್ಕೆ ಸಾಕಷ್ಟು ಆಯ್ಕೆಗಳಿವೆ ಹಾಗೂ ಇದು ಸಮಸ್ಯೆಯಾಗದು ಎಂದು ಹೇಳಿದ್ದಾರೆ.

ರೋಹಿತ್ ಶರ್ಮಾ, ಕೊಹ್ಲಿ ಮತ್ತು ಶುಭಮನ್ ಗಿಲ್ ಅವರಂತಹ ಆಟಗಾರರನ್ನು ಹೊಂದಿರುವ ತಂಡವು ಅದ್ಭುತ ತಂಡವಾಗಿದೆ ಎಂದು ಹೇಳಿದ ಅವರು, "ಭಾರತ ತಂಡದಲ್ಲಿ ಇನ್ನೂ 4ನೇ ಸ್ಥಾನದಲ್ಲಿ ಆಡುವ ಆಟಗಾರರು ಇಲ್ಲ ಎಂದು ನಾನು ಪತ್ರಿಕೆಗಳಲ್ಲಿ ಓದಿದ್ದೆ. 4ನೇ ಸ್ಥಾನದಲ್ಲಿ ಆಟವಾಡುವ ಆಟಗಾರರು ಇಲ್ಲ ಎಂದು ಯಾರು ಹೇಳಿದರು. ಆದರೆ 4ನೇ ನಂಬರ್​ನಲ್ಲಿ ಬ್ಯಾಟಿಂಗ್​ ಮಾಡುವವರು ಭಾರತ ತಂಡದಲ್ಲಿ ಅನೇಕರಿದ್ದಾರೆ. ಈ ಕುರಿತು ನಿಸ್ಸಂಶಯವಾಗಿ ನಾನು ವಿಭಿನ್ನವಾಗಿ ಯೋಚಿಸುತ್ತೇನೆ. ನನ್ನ ಮನಸ್ಥಿತಿ ವಿಭಿನ್ನವಾಗಿದೆ, ಇದು ಅದ್ಭುತವಾದ ಭಾಗವಾಗಿದೆ'' ಎಂದ ಅವರು, ಟೀಂ ಇಂಡಿಯಾದ ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿ, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅವರು ಈ ಸ್ಥಾನಕ್ಕೆ ಫಿಟ್ ಆಗಿದ್ದಾರೆ'' ಎಂದು ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ಪತ್ರಿಕಾ ಸಂವಾದದಲ್ಲಿ ಸೌರವ್ ಗಂಗೂಲಿ ಹೇಳಿದ್ದಾರೆ.

''ಮೊಹಮ್ಮದ್ ಶಮಿ, ಜಡೇಜಾ ಹಾಗೂ ಜಸ್ಪ್ರೀತ್ ಬುಮ್ರಾ ಉತ್ತಮ ವೇಗದಲ್ಲಿ ಬೌಲಿಂಗ್ ಮಾಡುವುದನ್ನು ನಾನು ನೋಡಿದ್ದೇನೆ. ಅವರು ವೆಸ್ಟ್ ಇಂಡೀಸ್‌ನಲ್ಲಿ ಹೊಸ ಆಟ ಆಡಿದ್ದಾರೆ. ಸಮಯ ಬರುವ ಹೊತ್ತಿಗೆ ಅದು ಅಗ್ರ ತಂಡವಾಗಿರುತ್ತದೆ ಎಂದ ಅವರು, ಭಾರತ ತಂಡವು ಯಾವಾಗಲೂ ನನ್ನ ಮೆಚ್ಚಿನ ಆಟಗಾರರನ್ನು ಒಳಗೊಂಡಿರುತ್ತದೆ. ನಾನು ಹೇಳಿದಂತೆ ರೋಹಿತ್ ಶರ್ಮಾ, ಪಾಂಡ್ಯ ಮತ್ತು ದ್ರಾವಿಡ್ ಮೈದಾನದಲ್ಲಿ ಆಟವನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದು ಬಹಳ ಮುಖ್ಯ. ನಾನು ಯುವ ಎಡಗೈ ಆಟಗಾರನನ್ನು ಆರ್ಡರ್‌ನ ಮೇಲ್ಭಾಗದಲ್ಲಿ ನೋಡಲು ಬಯಸುತ್ತೇನೆ. ಏಕೆಂದರೆ ಆಟಗಾರ ಅಗಾಧ ಸಾಮರ್ಥ್ಯವನ್ನು ಹೊಂದಿದ್ದಾನೆ ಮತ್ತು ಅವರು ನಿರ್ಭೀತನಾಗಿರುತ್ತಾರೆ. ಆದ್ದರಿಂದ, ಇದು ಉತ್ತಮ ತಂಡವಾಗಿದೆ" ಎಂದು ಗಂಗೂಲಿ ತಿಳಿಸಿದರು.

ದ್ರಾವಿಡ್- ರೋಹಿತ್ ಶರ್ಮಾ ಮನಸ್ಸಿನಲ್ಲಿರುವ ಇಬ್ಬರು ಆಟಗಾರರು ಯಾರು?: ''ವಿಕೆಟ್ ಕೀಪರ್, ಬ್ಯಾಟ್ಸಮನ್ ರಿಷಬ್ ಪಂತ್ ಇನ್ನೂ ಗಾಯದಿಂದ ಚೇತರಿಸಿಕೊಳ್ಳುತ್ತಿರುವಾಗ, ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್ ಅವರ ಸ್ಥಾನಕ್ಕೆ ಸಾಕಷ್ಟು ಉತ್ತಮರು ಇದ್ದಾರೆ'' ಎಂದು ಗಂಗೂಲಿ ಭಾವಿಸಿದ್ದಾರೆ. "ಪಂತ್ ಗಾಯಗೊಂಡಿದ್ದಾರೆ, ಅವರು ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ಅವರು ಬಹುಶಃ ದೇಶದ ಅತ್ಯುತ್ತಮ ವಿಕೆಟ್ ಕೀಪರ್. ಜೊತೆಗೆ ಕೆಎಲ್ ರಾಹುಲ್, ಇಶಾನ್ ಕಿಶನ್ ಅವರನ್ನು ನೋಡುವಾಗ ನೀವು ಸಾಕಷ್ಟು ಪ್ರತಿಭೆಗಳನ್ನು ನೋಡುತ್ತೀರಿ. ದ್ರಾವಿಡ್ ಮತ್ತು ರೋಹಿತ್ ಶರ್ಮಾ ಅವರ ಮನಸ್ಸಿನಲ್ಲಿ ಇಬ್ಬರು ಇರುತ್ತಾರೆ. ಅವರಲ್ಲಿ ಒಬ್ಬರು ನಿಜವಾಗಿ ಉಳಿಯುತ್ತಾರೆ. ನಾನು ಇಶಾನ್ ಕಿಶನ್ ಅವರನ್ನು ಇಷ್ಟಪಡುತ್ತೇನೆ. ರಾಹುಲ್ ದ್ರಾವಿಡ್ ಅವರನ್ನು ತಮ್ಮ ಯೋಜನೆಗಳಲ್ಲಿ ಉಳಿಸಿಕೊಳ್ಳುತ್ತಾರೆ ಎಂದು ನನಗೆ ಖಾತ್ರಿಯಿದೆ" ಎಂದು ಸೌರವ್ ಗಂಗೂಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಎಡ ಮತ್ತು ಬಲಗೈ ಬ್ಯಾಟ್ಸಮೆನ್​‌ಗಳ ಸಂಯೋಜನೆ: "ಜೈಸ್ವಾಲ್, ತಿಲಕ್ ವರ್ಮಾ, ಇಶಾನ್ ಕಿಶನ್ ಅವರಂತಹವರು ನಿರ್ಭೀತ ಕ್ರಿಕೆಟ್ ಆಡುತ್ತಾರೆ. ರಾಹುಲ್ ದ್ರಾವಿಡ್, ರೋಹಿತ್ ಶರ್ಮಾ ಮತ್ತು ಆಯ್ಕೆದಾರರಿಗೆ ಸಾಕಷ್ಟು ಆಯ್ಕೆಗಳಿವೆ. ಅವರು ಗುರುತಿಸಬೇಕಾಗಿದೆ. ಸರಿಯಾದ ವ್ಯಕ್ತಿಗಳು ಮತ್ತು ತಂಡವನ್ನು ಆಯ್ಕೆ ಮಾಡಬೇಕಾಗಿದೆ'' ಎಂದು ಅವರು, ''ಭಾರತವು ಕೆಲವು ಗುಣಮಟ್ಟದ ಬಲಗೈ ಬ್ಯಾಟ್ಸ‌ರ್​​ಗಳನ್ನು ಹೊಂದಿದೆ. ಅವರು ಎಡ ಮತ್ತು ಬಲಗೈ ಬ್ಯಾಟರ್​ಗಳ ಉತ್ತಮ ಸಂಯೋಜನೆಯನ್ನು ರಚಿಸಲು ಆಯ್ಕೆಗಳನ್ನು ಹುಡುಕುತ್ತಿದ್ದಾರೆ.

''ಭಾರತವು ಅತ್ಯುತ್ತಮ ಎಡಗೈ ಆಟಗಾರರಾದ ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ ಮತ್ತು ಇಶಾನ್ ಕಿಶನ್ ಆಗಿದ್ದಾರೆ. ಕೊಹ್ಲಿ, ರೋಹಿತ್ ಶರ್ಮಾ, ಜಡೇಜಾ, ಅಕ್ಸರ್ ಪಟೇಲ್, ಹಾರ್ದಿಕ್ ಪಾಂಡ್ಯ ಅವರಂತಹ ಅತ್ಯುತ್ತಮ ಬಲಗೈ ಆಟಗಾರರಿದ್ದು, ಇದು ಅದ್ಭುತ ತಂಡವಾಗಿದೆ. ಭಾರತ ತಂಡದಲ್ಲಿ ಪ್ರತಿ ಪಂದ್ಯದಲ್ಲೂ ಮೌಲ್ಯಮಾಪನವಿದೆ. ಒಂದು ದಿನ ಗೆದ್ದರೆ ಒಳ್ಳೆಯವರು, ಸೋತರೆ ಕೆಟ್ಟವರು, ಮರುದಿನ ಗೆದ್ದರೆ ಮತ್ತೆ ಒಳ್ಳೆಯವರು'' ಎಂದು ಗಂಗೂಲಿ ವಿವರಿಸಿದರು.

ಭಾರತವು ಅಸಾಧಾರಣ ತಂಡ - ಗಂಗೂಲಿ: ''ಭಾರತವು ಅಸಾಧಾರಣ ತಂಡವಾಗಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಪಾಕಿಸ್ತಾನದಂತಹ ತಂಡಗಳೊಂದಿಗೆ ಸೆಮಿಫೈನಲ್ ಹಂತವನ್ನು ತಲುಪಲಿದೆ ಎಂದು ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. ನ್ಯೂಜಿಲ್ಯಾಂಡ್​ ಮತ್ತು ದಕ್ಷಿಣ ಆಫ್ರಿಕಾವನ್ನು ಸಹ ಅಗ್ರ ಸ್ಪರ್ಧಿಗಳು ಎಂದು ರೇಟಿಂಗ್ ಮಾಡುತ್ತಾರೆ. ಯಾವುದು ನಾಲ್ಕು ಅಥವಾ ಐದು ಎಂದು ಹೇಳುವುದು ಕಷ್ಟ. ನನ್ನ ಅತ್ಯುತ್ತಮ ಐದು ತಂಡಗಳು ಅಂದ್ರೆ, ಆಸ್ಟ್ರೇಲಿಯಾ, ಭಾರತ, ಇಂಗ್ಲೆಂಡ್, ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್​ " ಎಂದು ಭಾರತದ ಮಾಜಿ ನಾಯಕ ಹೇಳಿದರು.

''ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ಅವರ ಲಭ್ಯತೆ ಭಾರತದ ಯಶಸ್ಸಿಗೆ ಪ್ರಮುಖವಾಗಿದ್ದು, ಅದು ತುಂಬಾ ನಿರ್ಣಾಯಕ. ಅವರು ನೆಟ್ಸ್‌ನಲ್ಲಿ ಬೌಲಿಂಗ್ ಮಾಡುವುದನ್ನು ನಾನು ನೋಡಿದೆ. ಇದು ಭಾರತಕ್ಕೆ ಉತ್ತಮ ಸುದ್ದಿ. ಬುಮ್ರಾ, ಶಮಿ, ಸಿರಾಜ್ ಹಾಗೂ ಜಡೇಜಾ, ಪಾಂಡ್ಯ, ಅಕ್ಸರ್, ಚಾಹಲ್, ಕುಲದೀಪ್ ಅವರಲ್ಲಿ ಅಗಾಧ ಪ್ರತಿಭೆ ಇದೆ" ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. ರವಿಚಂದ್ರನ್ ಅಶ್ವಿನ್ ಶ್ರೇಷ್ಠ ಬೌಲರ್. ಆದರೆ, ಅವರು ವಿಶ್ವಕಪ್‌ನ ವಿಷಯಗಳ ಯೋಜನೆಯಲ್ಲಿಲ್ಲ ಎಂದು ಭಾರತದ ಮಾಜಿ ನಾಯಕ ಹೇಳಿದ್ದಾರೆ.

ಇದನ್ನೂ ಓದಿ: ಮಹಾರಾಜ ಟ್ರೋಫಿಯಲ್ಲಿ ಶಿವಮೊಗ್ಗಕ್ಕೆ ಮೊದಲ ಸೋಲು; 12 ರನ್‌ಗಳಿಂದ ಗೆದ್ದು ಬೀಗಿದ ಮೈಸೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.