ETV Bharat / sports

590 ಪ್ಲೇಯರ್ಸ್​, 561. 5ಕೋಟಿ ರೂ... IPL ಮೆಗಾ ಹರಾಜು ಬಗ್ಗೆ ಕ್ರಿಕೆಟ್ ಪ್ರೇಮಿಗಳು ತಿಳಿದುಕೊಳ್ಳಬೇಕಾಗಿದ್ದೇನು!?

author img

By

Published : Feb 12, 2022, 4:48 AM IST

ಕ್ರಿಕೆಟ್ ಲೋಕದ ಅತ್ಯಂತ ಶ್ರೀಮಂತ ಲೀಗ್​ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್​​ನ 2022ರ ಆವೃತ್ತಿಯ ಮೆಗಾ ಹರಾಜು ಪ್ರಕ್ರಿಯೆ ಇಂದು ಆರಂಭಗೊಳ್ಳಲಿದ್ದು, ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ಹರಾಜು ಪ್ರಕ್ರಿಯೆ ಇದಾಗಿದೆ.

IPL Auction 2022
IPL Auction 2022

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಐಪಿಎಲ್​ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು, 10 ಫ್ರಾಂಚೈಸಿಗಳು ಆಟಗಾರರ ಖರೀದಿ ಮಾಡಲು ಎಲ್ಲ ರೀತಿಯ ಯೋಜನೆ ರೂಪಿಸಿಕೊಂಡಿವೆ. ಹೀಗಾಗಿ, ಈ ಸಲದ ಹರಾಜು ಪ್ರಕ್ರಿಯೆ ಮೇಲೆ ಎಲ್ಲ ಕ್ರಿಕೆಟ್ ಪ್ರೇಮಿಗಳ ಚಿತ್ತ ನೆಟ್ಟಿದೆ.

2018ರ ಬಳಿಕ ಇದೇ ಮೊದಲ ಸಲ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಒಟ್ಟು 590 ಆಟಗಾರರು ಹರಾಜು ಪ್ರಕ್ರಿಯೆಲ್ಲಿ ಭಾಗಿಯಾಗಲಿದ್ದಾರೆ. ಹರಾಜಿನಲ್ಲಿ 370 ಭಾರತೀಯ ಮತ್ತು 220 ವಿದೇಶಿ ಪ್ಲೇಯರ್ಸ್​ ಇದ್ದಾರೆ.

ಶನಿವಾರ ಮತ್ತು ಭಾನುವಾರ ಬೆಳಗ್ಗೆ 11 ಗಂಟೆಗೆ ಬಿಡ್​ ಪ್ರಕ್ರಿಯೆ ನಡೆಯಲಿದ್ದು, 10 ಫ್ರಾಂಚೈಸಿಗಳಿಂದ ಒಟ್ಟು 217 ಪ್ಲೇಯರ್ಸ್ ಖರೀದಿ ಆಗಲಿದ್ದಾರೆ.

ಹರಾಜಿಗೂ ಮುನ್ನ ಈ ವಿಷಯ ತಿಳಿದುಕೊಳ್ಳಿ: ಈಗಿರುವ ಎಂಟು ಫ್ರಾಂಚೈಸಿಗಳು ಒಟ್ಟು 30 ಪ್ಲೇಯರ್ಸ್​ಗೆ ರಿಟೈನ್ ಮಾಡಿಕೊಂಡಿದ್ದು, ಹೊಸದಾಗಿ ಸೇರ್ಪಡೆಯಾಗಿರುವ ಲಕ್ನೋ ಹಾಗೂ ಗುಜರಾತ್ ತಂಡ ತಲಾ ಮೂವರು ಪ್ಲೇಯರ್ಸ್​​ ಖರೀದಿ ಮಾಡಿದೆ. ಹರಾಜು ಪ್ರಕ್ರಿಯೆಲ್ಲಿ ಪ್ರತಿ ತಂಡ ಕನಿಷ್ಠ 18 ಹಾಗೂ ಗರಿಷ್ಠ 25 ಪ್ಲೇಯರ್ಸ್​ ಖರೀದಿ ಮಾಡಬಹುದಾಗಿದೆ.

ಇದನ್ನೂ ಓದಿರಿ: ಟಾಟಾ ಐಪಿಎಲ್​ ಮೆಗಾ ಹರಾಜು: ಶ್ರೇಯಸ್​, ಇಶಾನ್​, ಹರ್ಷಲ್ ಪಟೇಲ್​ಗೆ ಜಾಕ್​ಪಾಟ್​!?

ಇಂದು ನಡೆಯುವ ಹರಾಜು ಪ್ರಕ್ರಿಯೆಯಲ್ಲಿ 161 ಆಟಗಾರರ ಬಿಡ್ಡಿಂಗ್ ನಡೆಯಲಿದ್ದು, ಅಶ್ವಿನ್​, ವಾರ್ನರ್​, ಬೌಲ್ಟ್​, ಕಮ್ಮಿನ್ಸ್​, ಡಿಕಾಕ್​, ಶಿಖರ್ ಧವನ್, ಡುಪ್ಲೆಸಿಸ್​, ಶ್ರೇಯಸ್ ಅಯ್ಯರ್, ರಬಾಡ, ಮೊಹಮ್ಮದ್ ಶಮಿ ಸೇರಿದ್ದಾರೆ. ಪ್ಲೇಯರ್ಸ್ ಕಡಿಮೆ ಮೂಲ ಬೆಲೆ 20 ಲಕ್ಷ ರೂ. ಆಗಿದ್ದು, ಗರಿಷ್ಠ ಬೆಲೆ 2 ಕೋಟಿ ರೂ. ಆಗಿದೆ.

ಐಪಿಎಲ್​ನಲ್ಲಿ ಅತ್ಯಂತ ಕಿರಿಯ ಆಟಗಾರ ಅಫ್ಘಾನಿಸ್ತಾನದ 17 ವರ್ಷದ ನೂರ್​ ಅಹ್ಮದ್ ಇದ್ದು, ಈಗಾಗಲೇ BBL, PSL ಮತ್ತು LPL ನಲ್ಲಿ ಆಡಿದ್ದಾರೆ. ಆದರೆ, ಅಂತಾರಾಷ್ಟ್ರೀಯ ಪದಾರ್ಪಣೆ ಆಗಿಲ್ಲ. ಹರಾಜು ಪ್ರಕ್ರಿಯೆಯಲ್ಲಿ ಹಿರಿಯ ಆಟಗಾರ 43 ವರ್ಷದ ಇಮ್ರಾನ್ ತಾಹೀರ್ ಕೂಡ ಇದ್ದಾರೆ.

ಯಾವ ತಂಡದ ಬಳಿ ಎಷ್ಟು ಮೊತ್ತ?

  • ಚೆನ್ನೈ ಸೂಪರ್ ಕಿಂಗ್ಸ್: 42 ಕೋಟಿ ರೂ.
  • ರಾಯಲ್ ಚಾಲೆಂಜರ್ಸ್ ಬೆಂಗಳೂರು: 57 ಕೋಟಿ ರೂ.
  • ಮುಂಬೈ ಇಂಡಿಯನ್ಸ್: 48 ಕೋಟಿ ರೂ.
  • ಪಂಜಾಬ್ ಕಿಂಗ್ಸ್: 72 ಕೋಟಿ ರೂ.
  • ದೆಹಲಿ ಕ್ಯಾಪಿಟಲ್ಸ್: 47.5 ಕೋಟಿ ರೂ.
  • ಕೋಲ್ಕತ್ತಾ ನೈಟ್ ರೈಡರ್ಸ್: 48 ಕೋಟಿ ರೂ.
  • ರಾಜಸ್ಥಾನ್ ರಾಯಲ್ಸ್: 62 ಕೋಟಿ ರೂ.
  • ಸನ್​ ರೈಸರ್ಸ್ ಹೈದರಾಬಾದ್: 68 ಕೋಟಿ ರೂ.
  • ಲಕ್ನೋ ಸೂಪರ್ ಜೈಂಟ್ಸ್: 58 ಕೋಟಿ ರೂ.
  • ಗುಜರಾತ್ ಟೈಟಾನ್ಸ್: 52 ಕೋಟಿ ರೂ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.