ETV Bharat / sports

ಶ್ರೀಲಂಕಾ ಪ್ರವಾಸಕ್ಕೆ ಭಾರತ ಮಹಿಳಾ ಕ್ರಿಕೆಟ್​ ತಂಡ ಪ್ರಕಟ: ಹರ್ಮನ್​​ಪ್ರೀತ್​ಗೆ ಕ್ಯಾಪ್ಟನ್​ ಪಟ್ಟ

author img

By

Published : Jun 8, 2022, 7:38 PM IST

Team India announces squad for SL tour, Harmanpreet to captain ODI side after Mithali's retirement
ಶ್ರೀಲಂಕಾ ಪ್ರವಾಸಕ್ಕೆ ಭಾರತದ ಮಹಿಳಾ ಕ್ರಿಕೆಟ್​ ತಂಡ ಪ್ರಕಟ: ಹರ್ಮನ್​​ಪ್ರೀತ್​ಗೆ ಕ್ಯಾಪ್ಟನ್​ ಪಟ್ಟ

ಭಾರತ ಮಹಿಳಾ ಟಿ-20 ತಂಡದಲ್ಲಿ ಜೆಮಿಮಾ ರೋಡ್ರಿಗಸ್, ರಾಧಾ ಯಾದವ್​ಗೆ ಅವಕಾಶ ಸಿಕ್ಕರೆ, ಏಕದಿನ ತಂಡದಲ್ಲಿ ತಾನಿಯಾ ಭಾಟಿಯಾ, ಹರ್ಲೀನ್​ ಡಿಯೋಲ್​ಗೆ ಸ್ಥಾನ ದೊರೆತಿದೆ.

ಮುಂಬೈ(ಮಹಾರಾಷ್ಟ್ರ): ಮುಂಬರುವ ಶ್ರೀಲಂಕಾ ಪ್ರವಾಸಕ್ಕೆ ಭಾರತದ ಮಹಿಳಾ ಕ್ರಿಕೆಟ್​ ತಂಡವನ್ನು ಪ್ರಕಟಿಸಲಾಗಿದ್ದು, ಹರ್ಮನ್​​ಪ್ರೀತ್​ ಕೌರ್​ ತಂಡ ಮುನ್ನಡೆಸಲಿದ್ದಾರೆ. ಮಿಥಾಲಿ ರಾಜ್​ ಎಲ್ಲ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಹಿನ್ನೆಲೆಯಲ್ಲಿ ಹರ್ಮನ್​​ಪ್ರೀತ್​ಗೆ ನಾಯಕಿಯ ಸ್ಥಾನ ಒಲಿದು ಬಂದಿದೆ.

ಶ್ರೀಲಂಕಾ ಮತ್ತು ಭಾರತ ತಂಡಗಳ ನಡುವೆ ಜೂನ್​ 23ರಿಂದ ಟಿ-20 ಮತ್ತು ಏಕದಿನ ಕ್ರಿಕೆಟ್​ ಪಂದ್ಯಗಳು ನಿಗದಿಯಾಗಿವೆ. ಎರಡೂ ಸರಣಿಯಲ್ಲಿ ತಲಾ ಮೂರು ಪಂದ್ಯಗಳಿವೆ. ಎರಡಕ್ಕೂ ಹರ್ಮನ್​​ಪ್ರೀತ್​ ಕೌರ್​​ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.

ಭಾರತದ ಟಿ-20 ತಂಡ ಹೀಗಿದೆ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಯಸ್ತಿಕಾ ಭಾಟಿಯಾ (ವಿಕೆಟ್​ಕೀಪರ್​​), ಎಸ್.ಮೇಘನಾ, ದೀಪ್ತಿ ಶರ್ಮಾ, ಪೂನಂ ಯಾದವ್, ರಾಜೇಶ್ವರಿ ಗಾಯಕ್‌ವಾಡ್, ಸಿಮ್ರಾನ್ ಬಹದ್ದೂರ್, ರಿಚಾ ಘೋಷ್ (ವಿಕೆಟ್​​ಕೀಪರ್​), ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್, ಜೆಮಿಮಾ ರೋಡ್ರಿಗಸ್, ರಾಧಾ ಯಾದವ್.

ಭಾರತದ ಏಕದಿನ ತಂಡ ಹೀಗಿದೆ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಯಸ್ತಿಕಾ ಭಾಟಿಯಾ (ವಿಕೆಟ್​ಕೀಪರ್​​), ಎಸ್.ಮೇಘನಾ, ದೀಪ್ತಿ ಶರ್ಮಾ, ಪೂನಂ ಯಾದವ್, ರಾಜೇಶ್ವರಿ ಗಾಯಕ್‌ವಾಡ್, ಸಿಮ್ರಾನ್ ಬಹದ್ದೂರ್, ರಿಚಾ ಘೋಷ್ (ವಿಕೆಟ್​​ಕೀಪರ್​), ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್ ಹಾಗೂ ತಾನಿಯಾ ಭಾಟಿಯಾ (ವಿಕೆಟ್​ಕೀಪರ್​​), ಹರ್ಲೀನ್​ ಡಿಯೋಲ್​.

ಎರಡೂ ತಂಡಗಳಿಗೆ ಹೋಲಿಕೆ ಮಾಡಿದರೆ ಎರಡು ಬದಲಾವಣೆ ಮಾತ್ರ ಇವೆ. ಟಿ-20 ತಂಡದಲ್ಲಿ ಜೆಮಿಮಾ ರೋಡ್ರಿಗಸ್, ರಾಧಾ ಯಾದವ್​ಗೆ ಅವಕಾಶ ಸಿಕ್ಕರೆ, ಏಕದಿನ ತಂಡದಲ್ಲಿ ತಾನಿಯಾ ಭಾಟಿಯಾ, ಹರ್ಲೀನ್​ ಡಿಯೋಲ್​ಗೆ ಸ್ಥಾನ ಕಲ್ಪಿಸಲಾಗಿದೆ. ಉಳಿದಂತೆ, ಆಟಗಾರ್ತಿಯರಲ್ಲಿ ಯಾವುದೇ ಬದಲಾವಣೆ ಇಲ್ಲ.

ಇನ್ನು, ಮೂರು ಪಂದ್ಯಗಳ ಟಿ-20 ಸರಣಿ ಜೂ.23ರಿಂದ ಆರಂಭವಾಗಲಿದೆ. ಡಂಬುಲ್ಲಾದಲ್ಲಿ ಜೂ.23, ಜೂ.25 ಮತ್ತು ಜೂ.27ರಂದು ಟಿ-20 ಪಂದ್ಯ ನಡೆಯಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯು ಕ್ಯಾಂಡಿಯಲ್ಲಿ ನಿಗದಿಯಾಗಿದ್ದು, ಜು.1, ಜು.4 ಹಾಗೂ ಜು.7ರಂದು ಏಕದಿನ ಪಂದ್ಯಗಳು ಜರುಗಲಿದೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮಿಥಾಲಿ ರಾಜ್​ ವಿದಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.