ಕ್ವಾಲಿಫೈಯರ್ ಮುಕ್ತಾಯ: ಸೂಪರ್ 12 ಟೀಂಗಳು, ಭಾರತ ತಂಡದ ವೇಳಾಪಟ್ಟಿ ಹೀಗಿದೆ ನೋಡಿ

author img

By

Published : Oct 23, 2021, 6:48 AM IST

T20I world cup 2021

ಕ್ವಾಲಿಫೈಯರ್​ ಎ ಗುಂಪಿನಲ್ಲಿ 3ಕ್ಕೆ 3ಪಂದ್ಯಗಳನ್ನು ಗೆದ್ದಿರುವ ಸ್ಕಾಟ್ಲೆಂಡ್​ ಸೂಪರ್​ 12ರಲ್ಲಿ 2ನೇ ಗುಂಪಿನಲ್ಲಿ ಆಡಿದರೆ, 2ನೇ ಸ್ಥಾನ ಪಡೆದಿದ್ದ ಬಾಂಗ್ಲಾದೇಶ ಸೂಪರ್​ 12ನ ಒಂದನೇ ಗುಂಪಿನಲ್ಲಿ ಆಡಲಿದೆ.

ದುಬೈ: ಶುಕ್ರವಾರ ಐಸಿಸಿ ಟಿ20 ವಿಶ್ವಕಪ್​ ಕ್ವಾಲಿಫೈಯರ್​ ಶುಕ್ರವಾರ ಮುಗಿದಿದೆ. ಇಂದಿನಿಂದ ಅಸಲಿ ವಿಶ್ವಕಪ್​ ಆರಂಭವಾಗಲಿದ್ದು, 12 ಶ್ರೇಷ್ಠ ತಂಡಗಳು ಚಾಂಪಿಯನ್​ ಪಟ್ಟಕ್ಕಾಗಿ ಸೆಣಸಾಡಲಿವೆ. ಅಗ್ರ 8 ತಂಡಗಳ ಜೊತೆಗೆ ಕ್ವಾಲಿಫೈಯರ್​ನಲ್ಲಿ 4 ತಂಡಗಳು ಸೇರ್ಪಡೆಗೊಂಡಿವೆ.

ಇದೇ ಮೊದಲ ಬಾರಿಗೆ ವಿಶ್ವಕಪ್​ಗೆ ಅರ್ಹತೆ ಪಡೆದುಕೊಂಡಿದ್ದ ನಮೀಬಿಯಾ ಶುಕ್ರವಾರ ನಡೆದ ಪಂದ್ಯದಲ್ಲಿ ಐರ್ಲೆಂಡ್​ ವಿರುದ್ಧ ಅಚ್ಚರಿಯ ಗೆಲುವು ಸಾಧಿಸಿ ಚೊಚ್ಚಲ ವಿಶ್ವಕಪ್​ನಲ್ಲೇ ಸೂಪರ್​ 12ಕ್ಕೆ ಪ್ರವೇಶಿಸಿದೆ. ನಮೀಬಿಯಾ ಭಾರತ ತಂಡವಿರುವ 2ನೇ ಗುಂಪುನಲ್ಲಿ ಅವಕಾಶ ಪಡೆದುಕೊಂಡಿದೆ. ಕ್ವಾಲಿಫೈಯರ್​ನ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದ್ದ ಶ್ರೀಲಂಕಾ ಸೂಪರ್​ 12ನಲ್ಲಿ ಒಂದನೇ ಗುಂಪಿನಲ್ಲಿ ಆಡಲಿದೆ.

ಕ್ವಾಲಿಫೈಯರ್​ ಎ ಗುಂಪಿನಲ್ಲಿ 3ಕ್ಕೆ 3ಪಂದ್ಯಗಳನ್ನು ಗೆದ್ದಿರುವ ಸ್ಕಾಟ್ಲೆಂಡ್​ ಸೂಪರ್​ 12ರಲ್ಲಿ 2ನೇ ಗುಂಪಿನಲ್ಲಿ ಆಡಿದರೆ, 2ನೇ ಸ್ಥಾನ ಪಡೆದಿದ್ದ ಬಾಂಗ್ಲಾದೇಶ ಸೂಪರ್​ 12ನ ಒಂದನೇ ಗುಂಪಿನಲ್ಲಿ ಆಡಲಿದೆ.

ಸೂಪರ್​ 12 ಮೊದಲ ಗುಂಪಿನ ತಂಡಗಳು

ಬಾಂಗ್ಲಾದೇಶ

ಇಂಗ್ಲೆಂಡ್

ಶ್ರೀಲಂಕಾ

ಆಸ್ಟ್ರೇಲಿಯಾ

ದಕ್ಷಿಣ ಆಫ್ರಿಕಾ

ವೆಸ್ಟ್​ ಇಂಡೀಸ್​

ಸೂಪರ್​ 12 ಎರಡನೇ ಗುಂಪಿನ ತಂಡಗಳು

ಸ್ಕಾಟ್ಲೆಂಡ್​

ಭಾರತ

ನಮೀಬಿಯಾ

ಪಾಕಿಸ್ತಾನ

ನ್ಯೂಜಿಲ್ಯಾಂಡ್​

ಅಫ್ಘಾನಿಸ್ತಾನ

ಸೂಪರ್ 12ನಲ್ಲಿ ಭಾರತದ ವೇಳಾಪಟ್ಟಿ

ಭಾರತ vs ಪಾಕಿಸ್ತಾನ- ಅಕ್ಟೋಬರ್ 24, ಸಂಜೆ 7:30

ಭಾರತ vs ನ್ಯೂಜಿಲ್ಯಾಂಡ್- ಅಕ್ಟೋಬರ್​ 31, ಸಂಜೆ 7:30

ಭಾರತ vs ಅಫ್ಘಾನಿಸ್ತಾನ- ನವೆಂಬರ್​ 3, ಸಂಜೆ 7:30

ಭಾರತ vs ಸ್ಕಾಟ್ಲೆಂಡ್​- ನವೆಂಬರ್​ 5, ಸಂಜೆ 7:30

ಭಾರತ vs ನಮೀಬಿಯಾ- ನವೆಂಬರ್​ 8, ಸಂಜೆ 7:30

ಇದನ್ನು ಓದಿ:T-20 ವಿಶ್ವಕಪ್​​ನಲ್ಲಿ ಐರ್ಲೆಂಡ್​ ಕನಸು ಭಗ್ನ.. ಸೂಪರ್​-12 ಹಂತಕ್ಕೆ ನಮೀಬಿಯಾ ಎಂಟ್ರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.