ETV Bharat / sports

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸಾಧಾರಣ ಮೊತ್ತ ದಾಖಲಿಸಿದ ವೆಸ್ಟ್​ ಇಂಡೀಸ್​.. ಐರ್ಲೆಂಡ್​ಗೆ 147 ರನ್​ಗಳ ಗುರಿ

author img

By

Published : Oct 21, 2022, 11:37 AM IST

ಐರ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಇಂದು ಟಿ20 ವಿಶ್ವಕಪ್ ರೌಂಡ್-1 ರ ಗುಂಪು-ಬಿ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ವೆಸ್ಟ್ ಇಂಡೀಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ 146 ರನ್​ಗಳನ್ನು ಕಲೆಹಾಕಿದೆ.

T20 World Cup  West Indies won the toss  West Indies vs Ireland match updates  T20 World Cup in Australia  T20 World Cup 2022  ಮಾಡು ಇಲ್ಲವೇ ಮಡಿ ಪಂದ್ಯ  ಸಾಧಾರಣ ಮೊತ್ತ ದಾಖಲಿಸಿದ ವೆಸ್ಟ್​ ಇಂಡೀಸ್  ಐರ್ಲೆಂಡ್​ಗೆ 147 ರನ್​ಗಳ ಗುರಿ  ವೆಸ್ಟ್ ಇಂಡೀಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್  ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸಾಧಾರಣ ಮೊತ್ತ ದಾಖಲಿಸಿದ ವೆಸ್ಟ್​ ಇಂಡೀಸ್

ಹೋಬರ್ಟ್: ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ರೋಚಕತೆ ಆರಂಭವಾಗಿದೆ. ಟೂರ್ನಿಯ 11ನೇ ಪಂದ್ಯ ಇಂದು ಐರ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿದೆ. ವೆಸ್ಟ್ ಇಂಡೀಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ಸಾಧಾರಣ ಮೊತ್ತವನ್ನು ಕಲೆ ಹಾಕಿದೆ.

ಗ್ರೂಪ್​-ಬಿನ ಈ ಪಂದ್ಯವು ಎರಡೂ ತಂಡಗಳಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ಎರಡು ಪಂದ್ಯಗಳಲ್ಲಿ ತಲಾ ಎರಡು ಅಂಕಗಳನ್ನು ಹೊಂದಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಸೂಪರ್-12ರಲ್ಲಿ ಸ್ಥಾನ ಪಡೆಯಲಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ವೆಸ್ಟ್​ ತಂಡವನ್ನು ಐರ್ಲೆಂಡ್​ ತಂಡ 146 ರನ್​ಗಳಿಗೆ ಕಟ್ಟಿ ಹಾಕಿದೆ. ಆರಂಭದಿಂದಲೇ ಕುಸಿತ ಕಂಡ ವೆಸ್ಟ್​ ತಂಡ ನಿಧನವಾಗಿ ಚೇತರಿಸಿಕೊಂಡಿತು. ಬ್ರಾಂಡನ್​ ಕಿಂಗ್​ ಅಮೋಘ ಅರ್ಧ ಶತಕದ ನೆರವಿನಿಂದ ತಂಡ ಸ್ಕೋರ್​ ಏರಿಕೆ ಕಂಡಿತು. ಒಟ್ಟಿನಲ್ಲಿ ನಿಗದಿತ 20 ಓವರ್​ಗಳಿಗೆ ವೆಸ್ಟ್​ ಇಂಡೀಸ್​ ತಂಡ ಐದು ವಿಕೆಟ್​ಗಳ ನಷ್ಟಕ್ಕೆ 146 ರನ್​ಗಳನ್ನು ಕಲೆ ಹಾಕುವ ಮೂಲಕ ಎದುರಾಳಿ ಐರ್ಲೆಂಡ್​ ತಂಡಕ್ಕೆ 147 ರನ್​ಗಳ ಗುರಿ ನೀಡಿದೆ.

ವೆಸ್ಟ್​ ಇಂಡೀಸ್​ ತಂಡದ ಪರವಾಗಿ ಕೈಲ್ ಮೇಯರ್ಸ್ 1 ರನ್​, ಜಾನ್ಸನ್ ಚಾರ್ಲ್ಸ್ 24 ರನ್​, ಎವಿನ್ ಲೆವಿಸ್ 13 ರನ್​, ನಿಕೋಲಸ್ ಪೂರನ್ 13 ರನ್​, ರೋವ್ಮನ್ ಪೊವೆಲ್ 6 ರನ್​ ಮತ್ತು ಬ್ರಾಂಡನ್ ಕಿಂಗ್ 62 ರನ್​ ಹಾಗೂ ಓಡಿಯನ್ ಸ್ಮಿತ್ 19 ರನ್​ ಕಲೆ ಹಾಕಿ ಅಜೇಯರಾಗಿ ಉಳಿದರು. ಐರ್ಲೆಂಡ್​ ಪರ ಗರೆಥ್ ಡೆಲಾನಿ ಮೂರು ವಿಕೆಟ್​ ಪಡೆದು ಮಿಂಚಿದ್ರೆ, ಸಿಮಿ ಸಿಂಗ್ ಮತ್ತು ಬ್ಯಾರಿ ಮೆಕಾರ್ಥಿ ತಲಾ ಒಂದೊಂದು ವಿಕೆಟ್​ ಕಬಳಿಸಿದರು.

ಪಿಚ್ ವರದಿ: ಬೆಲ್ಲೆರಿವ್ ಓವಲ್ ಕ್ರೀಡಾಂಗಣದಲ್ಲಿ ಬ್ಯಾಟಿಂಗ್ ಸುಲಭ. ಇದರೊಂದಿಗೆ ಬೌಲರ್‌ಗಳು ಕೂಡ ಈ ಮೈದಾನದಲ್ಲಿ ಸಾಕಷ್ಟು ವೇಗ ಮತ್ತು ಬೌನ್ಸ್ ಪಡೆಯುತ್ತಾರೆ. ಈ ಮೈದಾನದಲ್ಲಿ ಮೂರು ಟಿ20 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವು ಎರಡು ಪಂದ್ಯಗಳನ್ನು ಗೆದ್ದಿದೆ.

ವೆಸ್ಟ್ ಇಂಡೀಸ್ ತಂಡ: ಕೈಲ್ ಮೇಯರ್ಸ್, ಜಾನ್ಸನ್ ಚಾರ್ಲ್ಸ್, ಎವಿನ್ ಲೆವಿಸ್, ಬ್ರಾಂಡನ್ ಕಿಂಗ್, ನಿಕೋಲಸ್ ಪೂರನ್ (C/W), ರೋವ್ಮನ್ ಪೊವೆಲ್, ಜೇಸನ್ ಹೋಲ್ಡರ್, ಅಕಿಲ್ ಹುಸೇನ್, ಓಡಿಯನ್ ಸ್ಮಿತ್, ಅಲ್ಜಾರಿ ಜೋಸೆಫ್, ಓಬೆಡ್ ಮೆಕಾಯ್.

ಐರ್ಲೆಂಡ್ ತಂಡ: ಆಂಡ್ರ್ಯೂ ಬಾಲ್ಬಿರ್ನಿ (ಸಿ), ಪಾಲ್ ಸ್ಟಿರ್ಲಿಂಗ್, ಲೋರ್ಕನ್ ಟಕರ್ (ವಾಕ್), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಪರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಮಾರ್ಕ್ ಅಡೇರ್, ಸಿಮಿ ಸಿಂಗ್, ಬ್ಯಾರಿ ಮೆಕಾರ್ಥಿ, ಜೋಶುವಾ ಲಿಟಲ್.

ಓದಿ: ಒತ್ತಡದ ಪರಿಸ್ಥಿತಿ ನಿಭಾಯಿಸುವುದು ಹೇಗೆಂದು ಕೊಹ್ಲಿ ಕಲಿಸಬಲ್ಲರು: ಪಂತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.