ETV Bharat / sports

ಒಂದು ಪಂದ್ಯ ಸಾಧನೆ ಹಲವು..: ನೆದರ್ಲ್ಯಾಂಡ್‌ ವಿರುದ್ಧ ಟೀಂ ಇಂಡಿಯಾ ದಾಖಲೆ ವಿಕ್ರಮ

author img

By

Published : Oct 27, 2022, 6:12 PM IST

ವಿಶ್ವಕಪ್​ನ ನೆದರ್ಲ್ಯಾಂಡ್‌​ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವಾಗಿ ಮತ್ತು ವೈಯಕ್ತಿಕವಾಗಿ ಆಟಗಾರರು ಹಲವು ದಾಖಲೆಗಳನ್ನು ಬರೆದರು.

indian-team-records-in-t20-world-cup
ವಿಶ್ವಕಪ್​ನಲ್ಲಿ ಭಾರತೀಯರ ದಾಖಲೆ ವಿಕ್ರಮ

ಸಿಡ್ನಿ(ಆಸ್ಟ್ರೇಲಿಯಾ): ಟಿ20 ವಿಶ್ವಕಪ್​​ನಲ್ಲಿಂದು ನಡೆದ ಭಾರತ ಮತ್ತು ನೆದರ್ಲ್ಯಾಂಡ್‌​ ವಿರುದ್ಧದ ಪಂದ್ಯದಲ್ಲಿ ಹಲವು ದಾಖಲೆಗಳು ರಚನೆಯಾಗಿವೆ. ಅರ್ಧಶತಕ ಸಿಡಿಸಿದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ, ಸೂರ್ಯಕುಮಾರ್​ ಯಾದವ್​ ವೈಯಕ್ತಿಕ ದಾಖಲೆ ಸರಿಪಡಿಸಿಕೊಂಡರು. ಅಲ್ಲದೇ ತಂಡವೂ ಕೂಡ ವಿಶೇಷ ಗೌರವಕ್ಕೆ ಭಾಜನವಾಯಿತು.

ವಿಶ್ವಕಪ್​ನಲ್ಲಿ ಅತಿಹೆಚ್ಚು ಫಿಫ್ಟಿ ಹೊಡೆದ ಭಾರತ ತಂಡ
ವಿಶ್ವಕಪ್​ನಲ್ಲಿ ಅತಿಹೆಚ್ಚು ಫಿಫ್ಟಿ ಹೊಡೆದ ಭಾರತ ತಂಡ

ಕೊಹ್ಲಿ ಅರ್ಧಶತಕ, ಟಾಪ್​ ಆಟಗಾರ: ವಿಶ್ವಕಪ್​ನಲ್ಲಿ ವಿರಾಟ್​ ಕೊಹ್ಲಿ ಸತತ 2 ಅರ್ಧಶತಕ ಸಿಡಿಸಿದರು. ಒಟ್ಟಾರೆ ಅವರು 12 ಫಿಫ್ಟಿ ಬಾರಿಸಿ ಈ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ರೋಹಿತ್​ ಶರ್ಮಾ ಐಸಿಸಿ ಟೂರ್ನಿಯಲ್ಲಿ 9 ನೇ ಅರ್ಧಶತಕವನ್ನು ತಮ್ಮ ಬತ್ತಳಿಕೆಗೆ ಸೇರಿಸಿದರು. ಈ ಮೂಲಕ ಜಂಟಿ 2ನೇ ಸ್ಥಾನ ಪಡೆದರು. ವೆಸ್ಟ್​ ಇಂಡೀಸ್​ನ ಸಿಡಿಲಮರಿ ಕ್ರಿಸ್​ ಗೇಲ್​ ಕೂಡ 9 ಅರ್ಧಶತಕ ಸಾಧನೆ ಮಾಡಿದ್ದಾರೆ.

ವಿಶ್ವಕಪ್​ನಲ್ಲಿ ವಿರಾಟ್​ ಕೊಹ್ಲಿ ಅತಿಹೆಚ್ಚು ಅರ್ಧಶತಕಗಳ ದಾಖಲೆ
ವಿಶ್ವಕಪ್​ನಲ್ಲಿ ವಿರಾಟ್​ ಕೊಹ್ಲಿ ಅತಿಹೆಚ್ಚು ಅರ್ಧಶತಕಗಳ ದಾಖಲೆ

ಭಾರತ ತ್ರಿವಳಿ ಅರ್ಧಶತಕಗಳ ದಾಖಲೆ: ನೆದರ್ಲ್ಯಾಂಡ್‌​ ವಿರುದ್ಧದ ಪಂದ್ಯದಲ್ಲಿ ಭಾರತದ ಮೂವರು ಬ್ಯಾಟರ್​ಗಳು ಅರ್ಧಶತಕ ದಾಖಲಿಸಿದರು. ವಿಶ್ವಕಪ್​ನಲ್ಲಿ ಎರಡನೇ ಬಾರಿಗೆ ಈ ದಾಖಲೆಯನ್ನು ಭಾರತೀಯರು ಬರೆದರು. ಇದಕ್ಕೂ ಮೊದಲು 2007-08 ರಲ್ಲಿ ಇಂಗ್ಲೆಂಡ್​ ವಿರುದ್ಧ ಮೂವರು ಫಿಫ್ಟಿ ಹೊಡೆದ ದಾಖಲೆ ಮಾಡಿದ್ದರು. ಇದೀಗ 2ನೇ ಬಾರಿಗೆ ಒಂದೇ ಪಂದ್ಯದಲ್ಲಿ ಮೂವರು ಆಟಗಾರರು ಅರ್ಧಶತಕ ಗಳಿಸಿದ್ದು, ಮೊದಲ ತಂಡವಾಗಿದೆ. ದಕ್ಷಿಣ ಆಫ್ರಿಕಾ ಒಂದು ಬಾರಿ ಈ ರೆಕಾರ್ಡ್​ ಮಾಡಿದೆ.

ರೋಹಿತ್​ ಶರ್ಮಾ ಅತಿಹೆಚ್ಚು ಸಿಕ್ಸರ್​ ದಾಖಲೆ
ರೋಹಿತ್​ ಶರ್ಮಾ ಅತಿಹೆಚ್ಚು ಸಿಕ್ಸರ್​ ದಾಖಲೆ

ಅತಿಹೆಚ್ಚು ಸಿಕ್ಸರ್,​ ರೋಹಿತ್​ ದ್ವಿತೀಯ​: ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ದಾಖಲೆ ಕ್ರಿಸ್‌ ಗೇಲ್‌ ಹೆಸರಿನಲ್ಲೇ ಉಳಿದಿದೆ. ಗೇಲ್ ವಿಶ್ವ ಕ್ರಿಕೆಟ್​ನಲ್ಲಿ ಈವರೆಗೂ 63 ಸಿಕ್ಸರ್ ಬಾರಿಸಿದ್ದಾರೆ. ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 3 ಸಿಕ್ಸರ್​ ಹೊಡೆದಿದ್ದು, ಒಟ್ಟಾರೆ 34 ಸಿಕ್ಸರ್​ಗಳು ಇವರ ಹೆಸರಲ್ಲಿವೆ. 33 ಸಿಕ್ಸರ್​ ಮೂಲಕ ಎರಡನೇ ಸ್ಥಾನದಲ್ಲಿ ಭಾರತದ ಮಾಜಿ ಆಟಗಾರ ಯುವರಾಜ್​ ಸಿಂಗ್​ರನ್ನು ಹಿಂದಿಕ್ಕಿದ್ದಾರೆ. ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ 30 ಸಿಕ್ಸರ್​ಗಳಿಂದ 4 ರಲ್ಲಿದ್ದಾರೆ.

ಪಾಕಿಸ್ತಾನ ಹಿಂದಿಕ್ಕಿದ ಭಾರತ: ವಿಶ್ವಕಪ್​ನಲ್ಲಿ ಭಾರತ ಮತ್ತೊಂದು ಅರ್ಧಶತಕಗಳ ದಾಖಲೆ ಬರೆಯಿತು. ವಿಶ್ವಟೂರ್ನಿಯಲ್ಲಿ 37 ಅರ್ಧಶತಕಗಳನ್ನು ಬಾರಿಸಿದ ತಂಡವಾಗಿ ಹೊರಹೊಮ್ಮಿತು. 34 ಫಿಫ್ಟಿ ಮಾಡಿರುವ ಪಾಕಿಸ್ತಾನ 2 ಸ್ಥಾನಕ್ಕೆ ಕುಸಿಯಿತು. ಶ್ರೀಲಂಕಾ 33 ಫಿಫ್ಟಿ ಬಾರಿಸಿದೆ.

ಈ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡ ಉತ್ತಮವಾಗಿ ಬೌಲಿಂಗ್ ಮಾಡಿತು. ಎಲ್ಲಾ ಬೌಲರ್‌ಗಳು ಕೇವಲ 4 ಹೆಚ್ಚುವರಿ ರನ್‌ಗಳನ್ನು ಮಾತ್ರ ಬಿಟ್ಟುಕೊಟ್ಟರು. ಇದರಲ್ಲಿ 3 ವೈಡ್‌ಗಳು ಮತ್ತು 1 ಲೆಗ್ ಬೈ ಇದೆ. ಯಾವುದೇ ಬೌಲರ್ ಒಂದೇ ಒಂದು ನೋ ಬಾಲ್ ಹಾಕಿಲ್ಲ. ಭಾರತವೂ ಕೂಡ 6 ಹೆಚ್ಚುವರಿ ರನ್​ ನೀಡಿದೆ. ಇದರಲ್ಲಿ 2 ಲೆಗ್​ಬೈ, 3 ವೈಡ್​ ಮತ್ತು 1 ನೋಬಾಲ್ ಇತ್ತು.

ಇದನ್ನೂ ಓದಿ: ಟಿ20 ವಿಶ್ವಕಪ್​: ನೆದರ್ಲ್ಯಾಂಡ್‌​ ವಿರುದ್ಧ ಭಾರತಕ್ಕೆ 56 ರನ್​ ಜಯ; ಬಿ ಗುಂಪಿನಲ್ಲಿ ಅಗ್ರ ಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.