ETV Bharat / sports

T20 World Cup.. ನಾವು ಸೋತಿದ್ದೇವೆ, ಆದರೆ ನಮ್ಮ ಪ್ರದರ್ಶನದ ಬಗ್ಗೆ ಹೆಮ್ಮೆಪಡುತ್ತೇವೆ: ಮಾರ್ಗನ್

author img

By

Published : Nov 11, 2021, 1:15 PM IST

ವಿಶ್ವಕಪ್‌ನ (World Cup) ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್​​ ಇಂಗ್ಲೆಂಡ್ ಅನ್ನು 5 ವಿಕೆಟ್‌ಗಳಿಂದ ಸೋಲಿಸಿದೆ. ಅಬುಧಾಬಿಯಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ, ನ್ಯೂಜಿಲ್ಯಾಂಡ್​​ 167 ರನ್‌ಗಳ ಸವಾಲನ್ನು ಮುಂಚಿತವಾಗಿಯೇ ಸಾಧಿಸಿದೆ.

England captain Morgan
ಇಯಾನ್ ಮಾರ್ಗನ್

ಅಬುಧಾಬಿ: ಟಿ-20 ವಿಶ್ವಕಪ್‌ನ (T20 World Cup) ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್​​ ವಿರುದ್ಧ ಇಂಗ್ಲೆಂಡ್ ಸೋಲು ಅನುಭವಿಸಿತು. ಆದರೆ, ನಮ್ಮ ಪ್ರದರ್ಶನದ ಬಗ್ಗೆ ಹೆಮ್ಮೆಪಡುತ್ತೇವೆ ಎಂದು ಪಂದ್ಯದ ನಂತರದ ಪತ್ರಿಕಾಗೋಷ್ಠಿ ಉದ್ದೇಶಿಸಿ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ (England captain Eoin Morgan) ಹೇಳಿದ್ದಾರೆ. ಅಲ್ಲದೇ ತಂಡದ ನಾಯಕರಾಗಿ ಮುಂದುವರಿಯುವ ಭರವಸೆ ವ್ಯಕ್ತಪಡಿಸಿದ್ದಾರೆ.

ವಿಶ್ವಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್​, ಇಂಗ್ಲೆಂಡ್ ಅನ್ನು 5 ವಿಕೆಟ್‌ಗಳಿಂದ ಸೋಲಿಸಿತ್ತು. ಅಬುಧಾಬಿಯಲ್ಲಿ (Abu Dhabi) ನಡೆದ ಸೆಮಿಫೈನಲ್ ಪಂದ್ಯದಲ್ಲಿ, ನ್ಯೂಜಿಲೆಂಡ್ 6 ಎಸೆತಗಳಿರುವಂತೆಯೇ 167 ರನ್‌ಗಳ ಗುರಿ ತಲುಪಿ ವಿಜಯ ಸಾಧಿಸಿತ್ತು. ಭರ್ಜರಿ ಅರ್ಧಶತಕ ಬಾರಿಸಿದ ಡ್ಯಾರೆಲ್ ಮಿಚೆಲ್ ನ್ಯೂಜಿಲ್ಯಾಂಡ್​​ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಜಿಮ್ಮಿ ನೀಶಮ್ ಕೂಡ 10 ಎಸೆತಗಳಲ್ಲಿ 26 ರನ್ ಗಳಿಸಿ ತಂಡದ ಗೆಲುವನ್ನು ನಿರ್ಧರಿಸಿದರು.

ಡ್ಯಾರೆಲ್ ಮಿಚೆಲ್ ಇಂಗ್ಲೆಂಡ್​ಗೆ ವಿಲನ್ ಆದರು. ಆರಂಭಿಕರಾಗಿ ಬಂದ ಮಿಚೆಲ್ ಕೊನೆಯವರೆಗೂ ಬ್ಯಾಟಿಂಗ್ ಮಾಡಿದರು. ಮಿಚೆಲ್ 47 ಎಸೆತಗಳಲ್ಲಿ ಔಟಾಗದೇ 72 ರನ್ ಗಳಿಸಿದರು. ಈ ಬ್ಯಾಟ್ಸ್‌ಮನ್ 4 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಬಾರಿಸಿದರು. ಡೆವೊನ್ ಕಾನ್ವೆ ಕೂಡ 38 ಎಸೆತಗಳಲ್ಲಿ 46 ರನ್‌ಗಳ ಇನಿಂಗ್ಸ್‌ ಆಡಿದರು. ಕೊನೆಯಲ್ಲಿ, ಜೇಮ್ಸ್ ನೀಶಮ್ (Neesham ) ಅವರ ತ್ವರಿತ ಇನ್ನಿಂಗ್ಸ್ ಇಂಗ್ಲೆಂಡ್‌ಗೆ ಸಾಕಷ್ಟು ಹಾನಿ ಮಾಡಿತು ಜೇಮ್ಸ್ ನೀಶಮ್ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. 11 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 27 ರನ್ ಗಳಿಸಿ ನ್ಯೂಜಿಲ್ಯಾಂಡ್​​ ಅನ್ನು ಫೈನಲ್‌ಗೆ ಕೊಂಡೊಯ್ದರು.

ನಾವು ಪ್ರದರ್ಶಿಸಿದ ಪ್ರದರ್ಶನದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಎಂದು ಮಾರ್ಗನ್​​ ಹೇಳಿದ್ದಾರೆ. ಇನ್ನು ಆಟದ ವೇಗವನ್ನು ಬದಲಿಸಿದ ಕೀರ್ತಿ ನೀಶಮ್ ಅವರಿಗೆ ಸಲ್ಲುತ್ತದೆ. ಪಂದ್ಯವು ಇಂಗ್ಲೆಂಡ್‌ನಿಂದ ಎಲ್ಲಿ ಜಾರಿಹೋಯಿತು ಎಂಬ ಪ್ರಶ್ನೆಗೆ ಉತ್ತರಿಸಿದ ಮಾರ್ಗನ್​​ ಪ್ರಮುಖ ಕ್ಷಣಗಳನ್ನು ಗುರುತಿಸುವುದು ಕಷ್ಟ ಎಂದರು.

ಇದನ್ನೂ ಓದಿ: ಟಿ20 ವಿಶ್ವಕಪ್​ ಸೆಮಿಫೈನಲ್: ಆಂಗ್ಲರಿಗೆ ಸೆಡ್ಡು ಹೊಡೆದು ಚೊಚ್ಚಲ ಬಾರಿಗೆ ಫೈನಲ್ ತಲುಪುವುದೇ ಕಿವೀಸ್?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.