ETV Bharat / sports

ಟಿ20 ವಿಶ್ವಕಪ್‌ 11 ಬಳಗಕ್ಕೆ ಬಟ್ಲರ್​ ನಾಯಕ: ತಂಡದಲ್ಲಿ ಇಬ್ಬರು ಭಾರತೀಯರಿಗೆ ಸ್ಥಾನ

author img

By

Published : Nov 14, 2022, 10:50 AM IST

ಐಸಿಸಿ ಪುರುಷರ ಟಿ20 ವಿಶ್ವಕಪ್‌ 'ಅತ್ಯಮೂಲ್ಯ ತಂಡ' ಪ್ರಕಟಿಸಲಾಗಿದೆ. ಇಬ್ಬರು ಭಾರತೀಯರು ಸೇರಿ ತಂಡದಲ್ಲಿ ನಾಲ್ವರು ಇಂಗ್ಲೆಂಡ್ ಆಟಗಾರರು, ಪಾಕಿಸ್ತಾನದ ಇಬ್ಬರು, ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನ್ಯೂಜಿಲೆಂಡ್​ನ ಕೆಲ ಆಟಗಾರರೂ ಕೂಡ ಇದ್ದಾರೆ.

T20 World Cup 2022 Team of Tournament revealed
ಟಿ20 ವಿಶ್ವಕಪ್‌ 11 ಬಳಗಕ್ಕೆ ಜೋಸ್​ ನಾಯಕ: ತಂಡದಲ್ಲಿ ಇಬ್ಬರು ಭಾರತೀಯರಿಗೆ ಸ್ಥಾನ

ಮೆಲ್ಬೋರ್ನ್​ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ಜಯ ಸಾಧಿಸಿ ಚುಟುಕು ಕ್ರಿಕೆಟ್​ ಚಾಂಪಿಯನ್​ ಪಟ್ಟಕ್ಕೇರಿದೆ. ಸದ್ಯ ಪಂದ್ಯಾವಳಿಯ ಅಪ್‌ಸ್ಟಾಕ್ಸ್ ಅತ್ಯಂತ ಮೌಲ್ಯಯುತ ತಂಡ ಪ್ರಕಟಿಸಲಾಗಿದ್ದು, ಭಾರತದ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದಾರೆ.

ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ಅತ್ಯಮೂಲ್ಯ ತಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸೋಮವಾರ ಪ್ರಕಟಿಸಿದೆ. ತಂಡದಲ್ಲಿ ನಾಲ್ವರು ಇಂಗ್ಲೆಂಡ್ ಆಟಗಾರರು, ಪಾಕಿಸ್ತಾನದ ಇಬ್ಬರು ಆಟಗಾರರು, ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನ್ಯೂಜಿಲೆಂಡ್​ನ ಕೆಲ ಆಟಗಾರರೂ ಕೂಡ ಇದ್ದಾರೆ.

ತಂಡದಲ್ಲಿ ಸ್ಥಾನ ಪಡೆದ ಇಬ್ಬರು ಭಾರತೀಯರೆಂದರೆ ಮಾಜಿ ನಾಯಕ ವಿರಾಟ್​ ಕೊಹ್ಲಿ ಹಾಗೂ ಸ್ಫೋಟಕ ಬ್ಯಾಟರ್​ ಸೂರ್ಯಕುಮಾರ್​ ಯಾದವ್​ ಆಗಿದ್ದಾರೆ. ಇಂಗ್ಲೆಂಡ್​ ನಾಯಕ ಜೋಸ್ ಬಟ್ಲರ್ ಈ ತಂಡದ ನಾಯಕ ಹಾಗೂ ವಿಕೆಟ್ ಕೀಪರ್​ ಆಗಿದ್ದಾರೆ. ಸಹ ಆರಂಭಿಕ ಅಲೆಕ್ಸ್ ಹೇಲ್ಸ್ ಮತ್ತು ಆಲ್​​ರೌಂಡರ್​ ಸ್ಯಾಮ್ ಕರನ್, ವೇಗಿ ಮಾರ್ಕ್​ ವುಡ್​, ನ್ಯೂಜಿಲೆಂಡ್ ಬ್ಯಾಟರ್​ ಗ್ಲೆನ್ ಫಿಲಿಪ್ಸ್, ಪಾಕಿಸ್ತಾನದ ಎಡಗೈ ವೇಗಿ ಶಾಹಿನ್ ಶಾ ಆಫ್ರಿದಿ, ಸ್ಪಿನ್ನರ್​ ಶದಾಬ್​ ಖಾನ್, ದಕ್ಷಿಣ ಆಫ್ರಿಕಾ ವೇಗದ ಬೌಲರ್​ ಅನ್ರಿಚ್​ ನೋಕಿಯಾ​ ಮತ್ತು ಜಿಂಬಾಬ್ವೆ ಆಲ್​ರೌಂಡರ್​ ಸಿಕಂದರ್ ರಾಜಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ತಂಡದ 12ನೇ ಆಟಗಾರನಾಗಿ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಇದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2022​ 11ರ ಬಳಗ ಹೀಗಿದೆ:

  • ಅಲೆಕ್ಸ್ ಹೇಲ್ಸ್ (ಇಂಗ್ಲೆಂಡ್) - 212 ರನ್, 42.40 ಸರಾಸರಿ
  • ಜೋಸ್ ಬಟ್ಲರ್ (ನಾಯಕ/ವಿ.ಕೀ) (ಇಂಗ್ಲೆಂಡ್) - 45.00 ಸರಾಸರಿ, 225 ರನ್ ; 9 ಔಟ್​
  • ವಿರಾಟ್ ಕೊಹ್ಲಿ (ಭಾರತ) - 296 ರನ್, 98.66 ಸರಾಸರಿ
  • ಸೂರ್ಯಕುಮಾರ್ ಯಾದವ್ (ಭಾರತ) - 239 ರನ್, 59.75 ಸರಾಸರಿ
  • ಗ್ಲೆನ್ ಫಿಲಿಪ್ಸ್ (ನ್ಯೂಜಿಲೆಂಡ್) - 40.20 ಸರಾಸರಿ, 201 ರನ್
  • ಸಿಕಂದರ್ ರಜಾ (ಜಿಂಬಾಬ್ವೆ) - 27.37 ಸರಾಸರಿ, 219 ರನ್ ; 10 ವಿಕೆಟ್, 15.60 ಸರಾಸರಿ
  • ಶದಾಬ್ ಖಾನ್ (ಪಾಕಿಸ್ತಾನ) - 24.50 ಸರಾಸರಿ, 98 ರನ್ ; 11 ವಿಕೆಟ್, 15.00 ಸರಾಸರಿ
  • ಸ್ಯಾಮ್ ಕರನ್ (ಇಂಗ್ಲೆಂಡ್) - 13 ವಿಕೆಟ್, 11.38 ಸರಾಸರಿ
  • ಅನ್ರಿಚ್ ನೋಕಿಯಾ (ದಕ್ಷಿಣ ಆಫ್ರಿಕಾ) - 11 ವಿಕೆಟ್, 8.54 ಸರಾಸರಿ
  • ಮಾರ್ಕ್ ವುಡ್ (ಇಂಗ್ಲೆಂಡ್) - 9 ವಿಕೆಟ್, 12.00 ಸರಾಸರಿ
  • ಶಾಹೀನ್ ಶಾ ಆಫ್ರಿದಿ (ಪಾಕಿಸ್ತಾನ) - 11 ವಿಕೆಟ್, 14.09 ಸರಾಸರಿ
  • 12ನೇ ಆಟಗಾರ: ಹಾರ್ದಿಕ್ ಪಾಂಡ್ಯ (ಭಾರತ) - 128 ರನ್, 25.60 ಸರಾಸರಿ ; 8 ವಿಕೆಟ್, 25.60 ಸರಾಸರಿ

ಇದನ್ನೂ ಓದಿ: ಮೊಹಮ್ಮದ್ ಶಮಿ 'ಕರ್ಮ' ಟ್ವೀಟ್​ಗೆ ಪಾಕ್​ ಮಾಜಿ ಕ್ರಿಕೆಟಿಗರು ಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.