ETV Bharat / sports

ಟಿ-20 ವಿಶ್ವಕಪ್​ 2022: ಬುಕ್ಕಿಂಗ್​ ಆರಂಭವಾದ ಕೆಲವೇ ಗಂಟೆಗಳಲ್ಲಿ ಇಂಡೋ - ಪಾಕ್ ಟಿಕೆಟ್​ ಸೋಲ್ಡ್ ​ಔಟ್!​

author img

By

Published : Feb 7, 2022, 3:14 PM IST

ಎಂಸಿಜಿ ವಿಶ್ವದ ಅತ್ಯಂತ ದೊಡ್ಡ ಮೈದಾನದಲ್ಲಿ ಒಂದಾಗಿದ್ದು, ಇಲ್ಲಿ ಒಂದು ಲಕ್ಷ ಮಂದಿ ಕುಳಿತು ಪಂದ್ಯ ವೀಕ್ಷಿಸಬಹುದಾಗಿದೆ. ಹಾಗಾಗಿ ಟಿಕೆಟ್​ಗಳೆಲ್ಲ ಈಗಲೇ ಮಾರಾಟವಾಗಿರುವುದರಿಂದ ಪಂದ್ಯ ಸಾಕಷ್ಟು ರೋಚಕತೆಯನ್ನುಂಟು ಮಾಡಲಿದೆ.

India Vs Pakistan Tickets SOLD OUT
ಭಾರತ vs ಪಾಕಿಸ್ತಾನ ವಿಶ್ವಕಪ್​ ಟಿಕೆಟ್ ಮಾರಾಟ

ಮೆಲ್ಬೋರ್ನ್​: ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್​ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​ನ ಲೀಗ್​ ಹಂತ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್​ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಾರಾಟಗೊಂಡಿವೆ. ಸಂಪ್ರಾದಾಯ ಎದುರಾಳಿಗಳ ನಡುವಿನ ಪಂದ್ಯ ಮೆಲ್ಬೋರ್ನ್​ ಕ್ರಿಕೆಟ್​ ಮೈದಾನದಲ್ಲಿ ಅಕ್ಟೋಬರ್​ 23ರಂದು ನಡೆಯಲಿದೆ.

ಎಂಸಿಜಿ ವಿಶ್ವದ ಅತ್ಯಂತ ದೊಡ್ಡ ಮೈದಾನದಲ್ಲಿ ಒಂದಾಗಿದ್ದು, ಇಲ್ಲಿ ಒಂದು ಲಕ್ಷ ಮಂದಿ ಕುಳಿತು ಪಂದ್ಯ ವೀಕ್ಷಿಸಬಹುದಾಗಿದೆ. ಹಾಗಾಗಿ ಟಿಕೆಟ್​ಗಳೆಲ್ಲಾ ಈಗಲೇ ಮಾರಾಟವಾಗಿರುವುದರಿಂದ ಪಂದ್ಯ ಸಾಕಷ್ಟು ರೋಚಕತೆಯನ್ನುಂಟು ಮಾಡಲಿದೆ.

ಐಸಿಸಿ ಸೋಮವಾರ 6:30ರಿಂದ ರಾತ್ರಿ 11:30ರವರೆಗೆ ಟಿಕೆಟ್​ ಮಾರಾಟಕ್ಕೆ ಅವಕಾಶ ಕಲ್ಪಿಸಿತ್ತು. ಆದರೆ, ಟಿಕೆಟ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಪೂರ್ಣ ಟಿಕೆಟ್​ ಬಿಕರಿಯಾಗಿದೆ. ಇಂಡೋ - ಪಾಕ್​ ಪಂದ್ಯಕ್ಕೆ ಸುಮಾರು 60 ಸಾವಿರ ಟಿಕೆಟ್​ಗಳ ಬುಕ್ಕಿಂಗ್​ಗೆ ಐಸಿಸಿ ಅವಕಾಶ ಕಲ್ಪಿಸಿತ್ತು ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್​ ವರದಿ ಮಾಡಿದೆ.

ವಿಶ್ವಕಪ್​ ಮೊದಲ ಸುತ್ತು ಮತ್ತು ಸೂಪರ್​ 12 ಪಂದ್ಯಗಳಿಗೆ ಮಕ್ಕಳಿಗೆ 5 ಡಾಲರ್​, ವಯಸ್ಕರಿಗೆ 20 ಡಾಲರ್​ಗಳನ್ನು ನಿಗಧಿ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಪುರುಷರ ಟಿ-20 ವಿಶ್ವಕಪ್​ಗೆ ಆತಿಥ್ಯವಹಿಸುತ್ತಿದ್ದು, ಪಂದ್ಯಗಳು ಅಡಿಲೇಡ್​, ಬ್ರಿಸ್ಬೇನ್​, ಗ್ಲೀಲಾಂಗ್​,ಹೋಬರ್ಟ್​, ಮೆಲ್ಬೋರ್ನ್​, ಪರ್ತ್​ ಮತ್ತು ಸಿಡ್ನಿಯಲ್ಲಿ ನಡೆಯಲಿವೆ.

ಇದನ್ನೂ ಓದಿ:ವಿಂಡೀಸ್​ ವಿರುದ್ಧ ಭಾರತಕ್ಕೆ 6 ವಿಕೆಟ್​ಗಳ​ ಜಯ : ಗೆಲುವಿನೊಂದಿಗೆ ರೋಹಿತ್ ಯುಗ ಆರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.