ETV Bharat / sports

T20 ವಿಶ್ವಕಪ್​​: ಸ್ಕಾಟ್ಲೆಂಡ್​ ವಿರುದ್ಧ ದಾಖಲೆಯ 130ರನ್​ಗಳ ಜಯ ಸಾಧಿಸಿದ ಆಫ್ಘನ್​

author img

By

Published : Oct 25, 2021, 10:49 PM IST

ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಮಿಂಚು ಹರಿಸಿದ ಆಫ್ಘಾನಿಸ್ತಾನ ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡುವ ಮೂಲಕ ಶುಭಾರಂಭ ಮಾಡಿದೆ.

Afghanistan win
Afghanistan win

ಶಾರ್ಜಾ: ಐಸಿಸಿ ಟಿ-20 ವಿಶ್ವಕಪ್​​ನ ಸೂಪರ್​​-12 ಹಂತದ ಮತ್ತೊಂದು ಪಂದ್ಯದಲ್ಲಿ ಸ್ಕಾಟ್ಲೆಂಡ್ ಮೇಲೆ ಸವಾರಿ ಮಾಡಿದ ಆಫ್ಘನ್ ತಂಡ ದಾಖಲೆಯ 130ರನ್​ಗಳ ಅಂತರದ ಜಯ ಸಾಧಿಸಿದೆ. ಈ ಮೂಲಕ ಟಿ-20 ಇತಿಹಾಸದಲ್ಲಿ ಅತಿ ದೊಡ್ಡ ಜಯ ಸಾಧಿಸಿರುವ ಸಾಧನೆ ಮಾಡಿದೆ.

ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನ ನಿಗದಿತ 20 ಓವರ್​ಗಳಲ್ಲಿ 4ವಿಕೆಟ್​ನಷ್ಟಕ್ಕೆ ದಾಖಲೆಯ 190ರನ್​ಗಳಿಕೆ ಮಾಡಿತು. ತಂಡದ ಪರ ಆರಂಭಿಕರಾದ ಹಜರುತುಲ್ಲಾ 44 ರನ್​ ಹಾಗೂ ಮಿಹಮ್ಮದ್​ ಸಹ್ಜಾದ್​​ 22ರನ್​ಗಳಿಸಿ ಉತ್ತಮ ಅಡಿಪಾಯ ಹಾಕಿದರು. ಇದಾದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಿದ ಗುರ್ಬಾಜ್​​​ ಸ್ಪೋಟಕ 46ರನ್​ಗಳಿಕೆ ಮಾಡಿದ್ರೆ, ನಜಿಬುಲ್ಲಾ 59ರನ್​ಗಳ ಕಾಣಿಕೆ ನೀಡಿದರು. ಕ್ಯಾಪ್ಟನ್​ ನಬಿ ಕೂಡ 4 ಎಸೆತಗಳಲ್ಲಿ 11ರನ್​ಗಳಿಕೆ ಮಾಡಿದರು.

Afghanistan win
ಬ್ಯಾಟಿಂಗ್​ನಲ್ಲಿ ಮಿಂಚಿದ ನಜೀಬುಲ್ಲಾ

191ರನ್​ಗಳ ಗುರಿ ಬೆನ್ನತ್ತಿದ್ದ ಸ್ಕಾಟ್ಲೆಂಡ್ ತಂಡ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಜಾರ್ಜ್​​​ 25ರನ್​​, ಕೈಲಿ 10ರನ್​ಗಳಿಕೆ ಮಾಡಿ ವಿಕೆಟ್​​ ಒಪ್ಪಿಸಿದರು. ಇದಾದ ಬಳಿ ಬಂದ ನಾಲ್ವರು ಬ್ಯಾಟರ್​​ಗಳು ಖಾತೆ ತೆರೆಯುವಲ್ಲಿ ಯಶಸ್ವಿಯಾಗಲಿಲ್ಲ. ಕ್ಲೂಮಾ, ರಿಚಿ, ಮ್ಯಾಥಿವ್​ ಹಾಗೂ ಮಿಚೆಲ್​​ ಶೂನ್ಯ ಸುತ್ತಿದರು. ಮಧ್ಯಮ ಕ್ರಮಾಂಕದಲ್ಲಿ ಕ್ರಿಸ್​​ 12ರನ್​ಗಳಿಸಿದರೆ, ಉಳಿದಂತೆ ಮಾರ್ಕ್​ 1ರನ್​, ಜೋಶ್​ 4, ಶರೀಫ್​​ 3ರನ್​ಗಳಿಕೆ ಮಾಡಿತು. ತಂಡ ಕೊನೆಯದಾಗಿ 10.2 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್​ ಕಳೆದುಕೊಂಡು ಕೇವಲ 60ರನ್​ಗಳಿಕೆ ಮಾಡಲು ಮಾತ್ರ ಶಕ್ತವಾಯಿತು.

Afghanistan win
ವಿಕೆಟ್​ ಪಡೆದು ಸಂಭ್ರಮಿಸಿದ ಮುಜೀಬ್​

ಟಿ-20 ಕ್ರಿಕೆಟ್​ನಲ್ಲಿ ಅತಿ ದೊಡ್ಡ ಗೆಲುವು

ಆಫ್ಘಾನಿಸ್ತಾನ ಟಿ-20 ಕ್ರಿಕೆಟ್​ನಲ್ಲಿ ಅತಿ ದೊಡ್ಡ ಗೆಲುವು ಸಾಧಿಸಿದೆ. ಈ ಹಿಂದೆ ಶ್ರೀಲಂಕಾ ತಂಡ ಕೀನ್ಯಾ ವಿರುದ್ಧ 2007ರಲ್ಲಿ 172ರನ್​ಗಳ ಅಂತರದ ಜಯ ದಾಖಲು ಮಾಡಿತ್ತು. ಇದಾದ ಬಳಿಕ ಇಂದಿನ ಪಂದ್ಯದಲ್ಲಿ ಸ್ಕಾಟ್ಲೆಂಡ್​ ವಿರುದ್ಧ 130ರನ್​ಗಳ ಜಯ ಸಾಧಿಸಿದೆ. ಈ ಹಿಂದೆ ದಕ್ಷಿಣ ಆಫ್ರಿಕಾ(2009)ತಂಡ ಸ್ಕಾಟ್ಲೆಂಡ್​ ವಿರುದ್ಧ 130ರನ್​ಗಳ ಗೆಲುವು ದಾಖಲು ಮಾಡಿತು.

ಅಫ್ಘಾನಿಸ್ತಾನದ ಪರ ಮುಜ್ಬೀರ್​​ ರಹಮಾನ್​ 5 ವಿಕೆಟ್​​, ರಾಶೀದ್ ಖಾನ್​ 4 ವಿಕೆಟ್​ ಪಡೆದು ಮಿಂಚಿದ್ರೆ ಹಕ್​ 1 ವಿಕೆಟ್​ ಕಬಳಿಸಿದರು. ಆಫ್ಘಾನ್ ತಂಡದ ಮುಜ್ಬಿರ್​​​ 5 ವಿಕೆಟ್ ಪಡೆದು ಮಿಂಚಿದ್ದಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.