ETV Bharat / sports

WTC ಫೈನಲ್: ಪಿಚ್​​ ಸ್ವಿಂಗ್​ಗೆ ನೆರವಾದರೆ ಕೊಹ್ಲಿ-ಭಾರತೀಯ ಬ್ಯಾಟ್ಸ್​​ಮನ್ಸ್​ ನಮ್ಮ ಬೌಲರ್​ಗಳೆದುರು ಪರದಾಡ್ತಾರೆ!

author img

By

Published : Jun 7, 2021, 5:03 PM IST

Updated : Jun 7, 2021, 5:50 PM IST

2020 ರ ಕಿವೀಸ್ ಪ್ರವಾಸದಲ್ಲಿ ವಿಶ್ವದ ನಂಬರ್ 1 ತಂಡವಾಗಿದ್ದ ಭಾರತ ತಂಡ ಕೇವಲ ಒಮ್ಮೆ ಮಾತ್ರ 200ರ ಗಡಿ ದಾಟಲು ಯಶಸ್ವಿಯಾಗಿತ್ತು. ಕೊಹ್ಲಿ 4 ಇನ್ನಿಂಗ್ಸ್​ಗಳಲ್ಲಿ ಕೇವಲ 41 ರನ್​ಗಳಿಸಿದ್ದರು. ಕೈಲ್ ಜೆಮೀಸನ್ , ಟಿಮ್ ಸೌತಿ ಮತ್ತು ಟ್ರೆಂಟ್​ ಬೌಲ್ಟ್​ ಭಾರತೀಯ ಬ್ಯಾಟ್ಸ್​ಮನ್​ಗಳನ್ನು ಕಾಡಿದ್ದರು. ಇದೀಗ WTC ಫೈನಲ್ ಪಂದ್ಯದಲ್ಲೂ ಅವರು ಆಡಲಿದ್ದಾರೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್
ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್

ಲಂಡನ್: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪಂದ್ಯ ನಡೆಯುವ ಸೌತಾಂಪ್ಟನ್​ನ ಪಿಚ್​ ವೇಗ ಮತ್ತು ಸ್ವಿಂಗ್​ಗೆ ನೆರವಾದರೆ ಕೊಹ್ಲಿ ಸೇರಿದಂತೆ ಭಾರತೀಯ ಬ್ಯಾಟ್ಸ್​ಮನ್​ಗಳು ಪರದಾಡಲಿದ್ದಾರೆ ಎಂದು ನ್ಯೂಜಿಲ್ಯಾಂಡ್ ತಂಡದ ಮಾಜಿ ನಾಯಕ ಗ್ಲೇನ್ ಟರ್ನರ್​ ಅಭಿಪ್ರಾಯ ಪಟ್ಟಿದ್ದಾರೆ.

ಭಾರತ ತಂಡ ಸೌತಾಂಪ್ಟನ್​ನ ಏಜಿಯಸ್ ಬೌಲ್​ನಲ್ಲಿ ನಡೆಯಲಿರುವ ಫೈನಲ್ ಚೊಚ್ಚಲ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಕಿವೀಸ್ ತಂಡವನ್ನು ಎದರಿಸಲಿದೆ. ಇತ್ತೀಚೆಗೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡದ ವಿರುದ್ಧ ಟೆಸ್ಟ್ ಸರಣಿ ಗೆದ್ದಿರುವ ಭಾರತ ತಂಡ ಚಾಂಪಿಯನ್​ ಅಗುವ ನೆಚ್ಚಿನ ತಂಡ ಎನ್ನಲಾಗುತ್ತಿದೆಯಾದರೂ, ಕಳೆದ 2020ರಲ್ಲಿ ಭಾರತವನ್ನು 2-0ಯಲ್ಲಿ ಮಣಿಸಿರುವುದರಿಂದ ಇಲ್ಲೂ ಅದೇ ವಿಲಿಯಮ್ಸನ್ ಬಳಗ ಮತ್ತೊಮ್ಮೆ ಮೇಲುಗೈ ಸಾಧಿಸಬಹುದು ಎಂದು ಕಿವೀಸ್ ನಾಯಕ ಟರ್ನರ್ ಅಭಿಪ್ರಾಯಪಟ್ಟಿದ್ದಾರೆ.

"ಕೊಹ್ಲಿ ಸಾಮರ್ಥ್ಯ ಕುಸಿಯುತ್ತಿದೆ ಎಂಬದನ್ನು ನಾನು ಊಹಿಸಲೂ ಬಯಸುವುದಿಲ್ಲ, ಆದರೆ, ಪಿಚ್ ಮತ್ತು ಪರಿಸ್ಥಿತಿ ಸೀಮ್ ಮತ್ತು ಸ್ವಿಂಗ್​ಗೆ ನೆರವು ನೀಡಿದರೆ, ಅವರೂ(ಕೊಹ್ಲಿ) ಕೂಡ ಇತರ ಬ್ಯಾಟ್ಸ್​ಮನ್​ಗಳಂತೆ ನ್ಯೂಜಿಲ್ಯಾಂಡ್​ನಂತೆ ಇಲ್ಲೂ ಪರದಾಡಲಿದ್ದಾರೆ. ಏಕೆಂದರೆ ಇಂಗ್ಲೆಂಡ್​ ಕಂಡೀಷನ್​ ಹೆಚ್ಚು ಕಡಿಮೆ ನ್ಯೂಜಿಲ್ಯಾಂಡ್​ನಂತೆಯೇ ಇದೆ " ಎಂದು ಟರ್ನರ್​ ತಿಳಿಸಿದ್ದಾರೆ.

2020 ರ ಕಿವೀಸ್ ಪ್ರವಾಸದಲ್ಲಿ ವಿಶ್ವದ ನಂಬರ್ 1 ತಂಡವಾಗಿದ್ದ ಭಾರತ ತಂಡ ಕೇವಲ ಒಮ್ಮೆ ಮಾತ್ರ 200ರ ಗಡಿ ದಾಟಲು ಯಶಸ್ವಿಯಾಗಿತ್ತು. ಕೊಹ್ಲಿ 4 ಇನ್ನಿಂಗ್ಸ್​ಗಳಲ್ಲಿ ಕೇವಲ 41 ರನ್​ಗಳಿಸಿದ್ದರು. ಕೈಲ್ ಜೆಮೀಸನ್ , ಟಿಮ್ ಸೌತಿ ಮತ್ತು ಟ್ರೆಂಟ್​ ಬೌಲ್ಟ್​ ಭಾರತೀಯ ಬ್ಯಾಟ್ಸ್​ಮನ್​ಗಳನ್ನು ಕಾಡಿದ್ದರು. ಇದೀಗ WTC ಫೈನಲ್ ಪಂದ್ಯದಲ್ಲೂ ಅವರು ಆಡಲಿದ್ದಾರೆ.

ಇದನ್ನು ಓದಿ: ಕೊಹ್ಲಿ ಜೊತೆಗೆ WTC ಟಾಸ್​ಗಾಗಿ ಹೆಜ್ಜೆ ಹಾಕುವುದು ಹರ್ಷದಾಯಕ ವಿಚಾರ: ವಿಲಿಯಮ್ಸನ್​

Last Updated : Jun 7, 2021, 5:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.