ETV Bharat / sports

WTC final: ವಿರಾಟ್​ ಶಾಟ್​ ಸೆಲೆಕ್ಷನ್​ ರಾಂಗ್.. ಅವರ ಆ ಶಾಟ್​ ಆಯ್ಕೆಗೆ ಕಾರಣ ಏನೆಂದು ಪ್ರಶ್ನಿಸಬೇಕು.. ಗವಾಸ್ಕರ್​

author img

By

Published : Jun 12, 2023, 1:16 PM IST

Updated : Jun 12, 2023, 2:08 PM IST

ವಿರಾಟ್​ ಕೊಹ್ಲಿ ಔಟ್​ ಆದ ಶಾಟ್​ ಮತ್ತು ಕೊನೆಯ ದಿನ ಏಳು ವಿಕೆಟ್​ ಇದ್ದರೂ ಮೊದಲ ಸೆಷನ್​ನಲ್ಲೇ ಭಾರತ ಆಲ್​ಔಟ್​ ಆಗಿದ್ದರ ಬಗ್ಗೆ ಮಾಜಿ ಕ್ರಿಕೆಟಿಗ ಸುನಿಲ್​ ಗವಾಸ್ಕರ್​ ಹೇಳಿದ್ದಾರೆ.

Sunil Gavaskar
ಮಾಜಿ ಕ್ರಿಕೆಟಿಗೆ ಸುನಿಲ್​ ಗವಾಸ್ಕರ್​

ಓವೆಲ್ (ಲಂಡನ್): ವಿರಾಟ್ ಕೊಹ್ಲಿ ಔಟ್​​ ಆದ ಶಾಟ್​​ ರಾಂಗ್​ ಸೆಲೆಕ್ಷನ್​ ಆಗಿತ್ತು, ಮಹತ್ವದ ಪಂದ್ಯದಲ್ಲಿ ಅನುಭವಿ ಆಟಗಾರ ತನ್ನ ಅರ್ಧಶತಕ ಗಳಿಸುವ ಬಗ್ಗೆ ಗಮನ ಕೇಂದ್ರೀಕರಿಸದೇ ತಂಡಕ್ಕೆ ಬೃಹತ್​ ಮೊತ್ತ ಕಲೆಹಾಕಲು ಜೊತೆಯಾಟ ನಿರ್ಮಾಣ ಮಾಡಲು ನೋಡಬೇಕಿತ್ತು. ಅಲ್ಲದೇ ಎರಡನೇ ಇನ್ನಿಂಗ್ಸ್​ನಲ್ಲಿ ಹೆಚ್ಚಿ ಬ್ಯಾಟರ್​ಗಳು ಬಿರುಸಿನ ಆಟಕ್ಕೆ ಮುಂದಾಗ ತಪ್ಪಾದ ಶಾಟ್​ನಿಂದ ವಿಕೆಟ್​ ಕೊಟ್ಟಿದ್ದಾರೆ ಎಂದು ಮಾಜಿ ಕ್ರಿಕೆಟಿಗೆ ಸುನಿಲ್​ ಗವಾಸ್ಕರ್​ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಬ್ಯಾಟಿಂಗ್​ ವೈಫಲ್ಯದ ಬಗ್ಗೆ ಮಾತನಾಡಿದ್ದಾರೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಗೆಲ್ಲಲು ಭಾರತ ಎರಡನೇ ಇನ್ನಿಂಗ್ಸ್​ನಲ್ಲಿ 444 ರನ್​ ಗಳಿಸಬೇಕಿತ್ತು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ ಮೂರು ವಿಕೆಟ್​ ಕಳೆದು ಕೊಂಡು 164 ರನ್​ ಗಳಿಸಿತ್ತು. ಕೊನೆಯ ದಿನಕ್ಕೆ ಭಾರತ 280 ರನ್​ ಗಳಿಸುವ ಅಗತ್ಯತೆ ಇತ್ತು. ಆದರೆ, ಭಾರತ ಮೊದಲ ಸೆಷನ್​ನಲ್ಲಿ 7 ವಿಕೆಟ್​ಗಳನ್ನು ಕಳೆದುಕೊಂಡು 209 ರನ್​ನಿಂದ ಸೋಲನುಭವಿಸಿತ್ತು.

ಪಂದ್ಯ ಸೋಲಿನ ನಂತರ ಸ್ಟಾರ್​ಸ್ಪೋರ್ಟ್​ಗೆ ಚರ್ಚೆಯಲ್ಲಿ ಮಾತನಾಡಿ ಗವಾಸ್ಕರ್​ ವಿರಾಟ್​ ಕೊಹ್ಲಿ ವಿಕೆಟ್​ ಔಟ್ ಆಗಿದ್ದರ ಬಗ್ಗೆ ನೇರವಾಗಿ ಕಮೆಂಟ್​ ಮಾಡಿದ ಅವರು ಶಾಟ್​ ಸೆಲೆಕ್ಷನ್​ ಮಾಡಿದ್ದನ್ನೇ ತಪ್ಪು ಎಂದು ಹೇಳಿದ್ದಾರೆ."ಇದೊಂದು ಕೆಟ್ಟ ಶಾಟ್ ಮತ್ತು ಅದು ಸಾಮಾನ್ಯವಾಗಿ ಆಡುವ ಆಟ ಆಗಿದೆ. ಆ ಶಾಟ್​ ಬಗ್ಗೆ ವಿರಾಟ್​ ಕೊಹ್ಲಿಯನ್ನು ಅಭಿಪ್ರಾಯ ಕೇಳಬೇಕು ಎಂದು ನಾನು ಭಾವಿಸುತ್ತೇನೆ. ಅದು ಆಫ್-ಸ್ಟಂಪ್‌ನ ಹೊರಗಿನ ಹೋಗುತ್ತಿದ್ದ ಶಾಟ್. ಪಂದ್ಯವನ್ನು ಗೆಲ್ಲಲು, ತಂಡಕ್ಕೆ ಸುದೀರ್ಘ ಇನ್ನಿಂಗ್ಸ್ ಬೇಕು, ನಿಮಗೆ ಒಂದು ಶತಕ ಬೇಕು. ಆಫ್-ಸ್ಟಂಪ್‌ನ ಹೊರಗೆ ಶಾಟ್ ಆಡಲು ಹೋದರೆ ನೀವು ಶತಕವನ್ನು ಹೇಗೆ ಮಾಡಲಿದ್ದೀರಿ"

"ಆಫ್ ಸ್ಟಂಪ್‌ನ ಹೊರಗೆ ಸಾಕಷ್ಟು ಶಾಟ್​ಗಳನ್ನು ಆಡಿದ್ದರು. ಆದರೆ ಇಲ್ಲಿ ಅವರ ಆಟದ ಆಯ್ಕೆ ಇದಾಗಿತ್ತು ಎಂಬುದರ ಬಗ್ಗೆ ಪ್ರಶ್ನೆ ಮೂಡುತ್ತದೆ. ಈ ವೇಳೆ ವಿರಾಟ್​ ತಲೆಯಲ್ಲಿ ಅರ್ಧಶತಕದ ಮೈಲಿಗಲ್ಲಿನ ಗುರಿ ಮಾತ್ರ ಇದ್ದಂತೆ ಕಾಣುತ್ತದೆ. ಒಂದು ರನ್​ ಓಡಿ 50 ರನ್​ ಗಳಿಸಲು ಆ ಆಟವನ್ನು ಆಡಿದ್ದರು. ಇದೇ ತಪ್ಪನ್ನು ಮೊದಲ ಇನ್ನಿಂಗ್ಸ್​ನಲ್ಲಿ ರವೀಂದ್ರ ಜಡೇಜಾ ಸಹ ಮಾಡಿದ್ದರು. 48 ರನ್​ ಗಳಿಸಿದ್ದಾಗ ಅರ್ಧಶತಕಕ್ಕಾಗಿ ಮಾಡಿದ್ದ ಶಾಟ್​ ಸೆಲೆಕ್ಷನ್​ ಸಹ ರಾಂಗ್​ ಆಗಿತ್ತು" ಎಂದು ಹೇಳಿದ್ದಾರೆ.

"ಎರಡನೇ ಇನ್ನಿಂಗ್ಸ್​ನಲ್ಲಿ ಭಾರತ ಅಗ್ರ ಕ್ರಮಾಂಕದ ಬ್ಯಾಟರ್​ಗಳೆಲ್ಲ ತಪ್ಪಾದ ಶಾಟ್​ ಸೆಲೆಕ್ಷನ್​ನಿಂದಲೇ ವಿಕೆಟ್​ ಕೊಟ್ಟಿದ್ದಾರೆ. ಚೇತೇಶ್ವರ ಪೂಜಾರ ಸಹ ವಿಕೆಟ್​ ಕೊಟ್ಟ ಶಾಟ್​ ಸರಿಯಾಗಿ ಆಯ್ಕೆ ಅಲ್ಲ. ಇಂದು (ಐದನೇ ದಿನ) ಬ್ಯಾಟಿಂಗ್ ಸಂಪೂರ್ಣ ಹದಗೆಟ್ಟಿದೆ. ನಾವು ಇಂದು ನೋಡಿದ್ದು ಹಾಸ್ಯಾಸ್ಪದವಾಗಿತ್ತು. ಕೈಯಲ್ಲಿ ಏಳು ವಿಕೆಟ್‌ಗಳನ್ನು ಇಟ್ಟುಕೊಂಡು ನಾವು ಒಂದೇ ಇನ್ನಿಂಗ್ಸ್​ಗೆ ಆಲ್​ಔಟ್​ ಆಗಿದ್ದು ಇನ್ನೂ ಬೇಸರದ ವಿಷಯ" ಎಂದಿದ್ದಾರೆ.

ಇದನ್ನೂ ಓದಿ: WTC Final: ಐಸಿಸಿ ಎಲ್ಲಾ ಟ್ರೋಪಿ ಗೆದ್ದ ಕೀರ್ತಿಗೆ ಪಾತ್ರವಾದ ಆಸ್ಟ್ರೇಲಿಯಾ.. ಒಟ್ಟು 9ನೇ ಬಾರಿಗೆ ವಿಶ್ವ ಚಾಂಪಿಯನ್​ ಪಟ್ಟ

Last Updated : Jun 12, 2023, 2:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.