ETV Bharat / sports

ಮೈದಾನಕ್ಕಾಗಮಿಸಿ ತೊಂದರೆ ಕೊಡುತ್ತಿದ್ದ ಜಾರ್ವೋಗೆ ಜೀವನ ಪರ್ಯಂತ ನಿಷೇಧ, ಭಾರಿ ದಂಡ

author img

By

Published : Aug 28, 2021, 5:07 PM IST

69 ನಂಬರ್​ ಭಾರತೀಯ ಜರ್ಸಿಯನ್ನು ತೊಟ್ಟು ಲಾರ್ಡ್ಸ್​ ಟೆಸ್ಟ್​ ವೇಳೆ ಮೈದಾನಕ್ಕೆ ಆಗಮಿಸಿದ್ದ ಜರ್ವೋ ಎಲ್ಲರ ಹುಬ್ಬೇರುವಂತೆ ಮಾಡಿದ್ದ. ನಂತರ 3ನೇ ಟೆಸ್ಟ್​ ವೇಳೆ ಬ್ಯಾಟ್​ ಹಿಡಿದು ಮೈದಾನಕ್ಕೆ ಆಗಮಿಸಿದ್ದರಿಂದ ಯಾರ್ಕ್​ಷೈರ್​ ಕ್ರಿಕೆಟ್​ ಕ್ಲಬ್​ ಭದ್ರತಾ ಉಲ್ಲಂಘನೆಯ ಪ್ರಕರಣ ದಾಖಲಿಸಿದ್ದು, ಆತನಗೆ ಲೀಡ್ಸ್​ ಕ್ರೀಡಾಂಗಣದಿಂದ ಅಜೀವ ನಿಷೇಧ ಏರಿದೆ ಮತ್ತು ದೊಡ್ಡ ಪ್ರಮಾಣದ ದಂಡವನ್ನು ವಿಧಿಸಿದೆ.

Jarvo69' fined and banned for life from Headingly
ಜಾರ್ವೋ ನಿಷೇಧ

ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್​ ಸರಣಿಯಲ್ಲಿ ಭಾರತ ತಂಡದ ಜರ್ಸಿ ತೊಟ್ಟು ಪದೇ ಪದೇ ಮೈದಾನಕ್ಕೆ ಪ್ರವೇಶಿಸಿ ಕ್ರಿಕೆಟಿಗರಿಗೆ ಮುಜುಗರ ಉಂಟು ಮಾಡುತ್ತಿದ್ದ ಇಂಗ್ಲೆಂಡ್​​ ಯೂಟ್ಯೂಬರ್​ ಡೇನಿಯಲ್ ಜಾರ್ವಿಸ್ ಅಲಿಯಾಸ್ ಜಾರ್ವೋ69 ಅವರನ್ನು ಭದ್ರತಾ ನಿಯಮವನ್ನು ಉಲ್ಲಂಘಿಸಿದ ಆರೋಪದ ಮೇಲೆ ಕ್ರೀಡಾಂಗಣದಿಂದ ಜೀವನ ಪರ್ಯಂತ ನಿಷೇಧವೇರಲಾಗಿದೆ ಎಂದು ಶನಿವಾರ ಇಂಗ್ಲೀಷ್ ಕೌಂಟಿ ಕ್ಲಬ್​ ಯಾರ್ಕ್​ಷೈರ್​​ ಖಚಿತಪಡಿಸಿದೆ.

69 ನಂಬರ್​ ಭಾರತೀಯ ಜರ್ಸಿಯನ್ನು ತೊಟ್ಟು ಲಾರ್ಡ್ಸ್​ ಟೆಸ್ಟ್​ ವೇಳೆ ಮೈದಾನಕ್ಕೆ ಆಗಮಿಸಿದ್ದ ಜರ್ವೋ ಎಲ್ಲರ ಹುಬ್ಬೇರುವಂತೆ ಮಾಡಿದ್ದ. ನಂತರ 3ನೇ ಟೆಸ್ಟ್​ ವೇಳೆ ಬ್ಯಾಟ್​ ಹಿಡಿದು ಮೈದಾನಕ್ಕೆ ಆಗಮಿಸಿದ್ದರಿಂದ ಯಾರ್ಕ್​ಷೈರ್​ ಕ್ರಿಕೆಟ್​ ಕ್ಲಬ್​ ಭದ್ರತಾ ಉಲ್ಲಂಘನೆಯ ಪ್ರಕರಣ ದಾಖಲಿಸಿದ್ದು, ಆತನಗೆ ಲೀಡ್ಸ್​ ಕ್ರೀಡಾಂಗಣದಿಂದ ಅಜೀವ ನಿಷೇಧ ಏರಿದೆ ಮತ್ತು ದೊಡ್ಡ ಪ್ರಮಾಣದ ದಂಡವನ್ನು ವಿಧಿಸಿದೆ.

"ಹೌದು, ಜರ್ವೋ ಹೆಡಿಂಗ್ಲೆ ಪ್ರವೇಶಿಸುವುದನ್ನು ಜೀವನಪರ್ಯಂತೆ ನಿಷೇಧಿಸಲಾಗಿದೆ. ಅಲ್ಲದೆ ಅವರ ವಿರುದ್ಧ ನಾವು ದಂಡವನ್ನೂ ವಿಧಿಸುತ್ತೇವೆ" ಎಂದು ಯಾರ್ಕ್​ಷೈರ್​ ಸಿಸಿಸಿ ವಕ್ತಾರ ಪಿಟಿಐಗೆ ಮಾಹಿತಿ ನೀಡಿದ್ದಾರೆ

ಎರಡು ಬಾರಿ ಸಂಭವಿಸಿದ ಇಂತಹ ಮುಜುಗರವನ್ನು ತಪ್ಪಿಸಲು ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಕೇಳಿದಕ್ಕೆ ಉತ್ತರಿಸಿದ ಕ್ಲಬ್​ ವಕ್ತಾರರು, " ಹಿಂದಿನ ದಿನಗಳಂತೆ, ಮೈದಾನಕ್ಕೆ ಹೋಗಲು ಪ್ರಯತ್ನಿಸುವವರನ್ನು ತಡೆಯಲು ಸುತ್ತಮುತ್ತಲಿನ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗುತ್ತದೆ "ಎಂದು ಹೇಳಿದ್ದಾರೆ.

ಇದನ್ನು ಓದಿ: ರೋಹಿತ್​ ಶರ್ಮಾ ವಿಕೆಟ್ ಪತನವಾಗ್ತಿದ್ದಂತೆ ಬ್ಯಾಟ್ ಮಾಡಲು ಮೈದಾನಕ್ಕಿಳಿದ ಜಾರ್ವೋ.. ಮುಂದೇನಾಯ್ತು ನೋಡಿ!

ಇದನ್ನು ಓದಿ:ಭಾರತೀಯ ಜರ್ಸಿ ತೊಟ್ಟು ಮೈದಾನಕ್ಕಿಳಿದು ಅವಾಂತರ ಸೃಷ್ಟಿಸಿದ ಇಂಗ್ಲೀಷ್​ ಅಭಿಮಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.