ETV Bharat / sports

Wanindu Hasaranga: ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ಶ್ರೀಲಂಕಾದ ವನಿಂದು ಹಸರಂಗ

author img

By

Published : Aug 15, 2023, 3:53 PM IST

Sri Lanka Test cricket: ಶ್ರೀಲಂಕಾ ಕ್ರಿಕೆಟ್‌ ತಂಡದ ಆಲ್​ರೌಂಡ್​ ಆಟಗಾರ ವನಿಂದು ಹಸರಂಗ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಪ್ರಕಟಿಸಿದ್ದಾರೆ.

Wanindu Hasaranga
Wanindu Hasaranga

ಕೊಲಂಬೊ (ಶ್ರೀಲಂಕಾ): ಅಂತಾರಾಷ್ಟ್ರೀಯ ಟೆಸ್ಟ್​ ಕ್ರಿಕೆಟ್‌ ತಂಡಕ್ಕೆ ಪಾದಾರ್ಪಣೆ ಮಾಡುವುದೆಂದರೆ 10-15 ವರ್ಷಗಳ ಹಿಂದೆಲ್ಲ ಹೆಮ್ಮೆಯ ವಿಷಯವಾಗಿತ್ತು. ಆದರೆ ಇತ್ತೀಚೆಗೆ ಟೆಸ್ಟ್​ ಕ್ರಿಕೆಟ್​​ನಲ್ಲಿ ಆಡಲು ಯುವ ಪ್ರತಿಭೆಗಳು ಅಷ್ಟು ಆಸಕ್ತಿ ತೋರಿಸುತ್ತಿಲ್ಲ. ಟೆಸ್ಟ್ ಕ್ರಿಕೆಟ್​ ಹಳೆಯ ಛಾರ್ಮ್‌ ಕಳೆದುಕೊಂಡಿದೆ. ಆ್ಯಶಸ್‌ನಂತಹ ಸರಣಿಗೂ ವೀಕ್ಷಕರ ಸಂಖ್ಯೆ ಕಡಿಮೆಯಾಗಿದೆ. ಪ್ರಪಂಚಾದ್ಯಂತದ ಉದಯೋನ್ಮುಖ ಕ್ರಿಕೆಟಿಗರಿಗೆ ಟೆಸ್ಟ್ ಕ್ರಿಕೆಟ್ ಇನ್ಮುಂದೆ ಅಪೇಕ್ಷಿತ ಸ್ವರೂಪವಲ್ಲ ಎಂಬ ವಿಚಾರ ಇದೀಗ ಶ್ರೀಲಂಕಾದ ವನಿಂದು ಹಸರಂಗ ನಿವೃತ್ತಿಯಿಂದ ಸಾಬೀತಾಗಿದೆ.

26 ವರ್ಷದ ಆಲ್​ರೌಂಡ್​ ಕ್ರಿಕೆಟರ್​ ವನಿಂದು ಹಸರಂಗ ಅವರು ಟೆಸ್ಟ್​ ಕ್ರಿಕೆಟ್‌ ವೃತ್ತಿಜೀವನಕ್ಕೆ ಇಂದು ನಿವೃತ್ತಿ ಘೋಷಿಸಿದ್ದಾರೆ. ಸೀಮಿತ ಓವರ್‌ಗಳ ಸ್ಪೆಷಲಿಸ್ಟ್ ಆಗಿ ಮಾತ್ರ ತಮ್ಮ ವೃತ್ತಿಜೀವನ ಮುಂದುವರಿಸುವುದು ಈ ನಿರ್ಧಾರದ ಹಿಂದಿನ ಕಾರಣ ಎಂದು ವನಿಂದು ತಿಳಿಸಿರುವುದಾಗಿ ಶ್ರೀಲಂಕಾ ಕ್ರಿಕೆಟ್ ಪ್ರಕಟಣೆಯಲ್ಲಿ ತಿಳಿಸಿದೆ. ಟೆಸ್ಟ್​ ಆಡುವುದಿಲ್ಲ ಎಂಬ ಯುವ ಕ್ರಿಕೆಟಿಗನ ನಿರ್ಧಾರ ಟೆಸ್ಟ್​ ಕ್ರಿಕೆಟ್‌ನ ಜನಪ್ರಿಯತೆ ಕುಗ್ಗುತ್ತಿರುವುದನ್ನು ಹೇಳುತ್ತಿದೆ ಅನ್ನೋದು ಪಂಡಿತರ ಮಾತು. ಇನ್ನೊಂದೆಡೆ, ವನಿಂದು ವೈಯುಕ್ತಿಕ ಕ್ರಿಕೆಟ್‌ ಅಂಕಿಅಂಶಗಳೂ ಇದಕ್ಕೆ ಕಾರಣ ಎಂದು ಹೇಳಬಹುದು.

  • Sri Lanka Men’s all-rounder Wanindu Hasaranga has informed Sri Lanka Cricket that he will retire from playing test cricket. -
    READ: https://t.co/cPV4jbzHeZ #SLC

    — Sri Lanka Cricket 🇱🇰 (@OfficialSLC) August 15, 2023 " class="align-text-top noRightClick twitterSection" data=" ">

ವೈಟ್​​ಬಾಲ್ ಕ್ರಿಕೆಟ್​ನಲ್ಲಿ ಉತ್ತಮ ದಾಖಲೆ ಹೊಂದಿರುವ ಹಸರಂಗ, ಟೆಸ್ಟ್​ ಕ್ರಿಕೆಟ್​ನಲ್ಲಿ ಮೊನಚು ಬೌಲಿಂಗ್​ ಪ್ರದರ್ಶಿಸುವಲ್ಲಿ ಎಡವಿದ್ದಾರೆ. ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಉತ್ತಮ ಬೌಲಿಂಗ್​ ಪ್ರದರ್ಶಿಸಿರುವ ಅವರು ಐಸಿಸಿ ಶ್ರೇಯಾಂಕದಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್​ನಲ್ಲಿ ಪ್ರಭಾವಿ ಬೌಲರ್​ ಎನಿಸುವ ನಿರೀಕ್ಷೆ ಇದೆ.

ಕೇವಲ ನಾಲ್ಕು ಟೆಸ್ಟ್​ ಪಂದ್ಯವಾಡಿರುವ ವನಿಂದು 7 ಇನ್ನಿಂಗ್ಸ್​ನಿಂದ 100.75ರ ಸರಾಸರಿಯಲ್ಲಿ 3.59 ಎಕಾನಮಿಯಲ್ಲಿ 403 ರನ್​ ಬಿಟ್ಟುಕೊಟ್ಟು 4 ವಿಕೆಟ್​ ಪಡೆದುಕೊಂಡಿದ್ದಾರೆ. 171 ರನ್​ಗಳಿಗೆ 4 ವಿಕೆಟ್​ ಪಡೆದಿದ್ದು ಅತ್ಯುತ್ತಮ ಬೌಲಿಂಗ್​ ಸಾಧನೆ. ಬ್ಯಾಟಿಂಗ್​ನಲ್ಲಿ 28ರ ಸರಾಸರಿಯಲ್ಲಿ 86 ಸ್ಟ್ರೈಕ್​ರೇಟ್​ನಿಂದ 196 ರನ್​ ಗಳಿಸಿದ್ದಾರೆ. 59 ರನ್​ ಅತ್ಯುತ್ತಮ ಸ್ಕೋರ್​ ಆಗಿದೆ. 2020 ಡಿಸೆಂಬರ್​ನಲ್ಲಿ ದಕ್ಷಿಣ ಆಫ್ರಿಕಾದ ತಂಡದ ವಿರುದ್ಧ ಇವರು ಟೆಸ್ಟ್​ಗೆ ಪಾದಾರ್ಪಣೆ ಮಾಡಿದ್ದರು. ಕೊನೆಯದಾಗಿ ಬಾಂಗ್ಲಾದೇಶದೆದುರು 2021 ಏಪ್ರಿಲ್​ನಲ್ಲಿ ಟೆಸ್ಟ್‌ ಆಡಿದ್ದರು. ನಂತರ ಎರಡು ವರ್ಷಗಳ ಕಾಲ ತಂಡದಲ್ಲಿ ಸ್ಥಾನ ಸಿಗದೇ ಇದೀಗ ನಿವೃತ್ತಿಯನ್ನು ನಿರ್ಧಾರ ತೆಗೆದುಕೊಂಡಿದ್ದಾರೆ.

ಹಸರಂಗ, ಏಕದಿನ ಕ್ರಿಕೆಟ್​ನಲ್ಲಿ 48 ಪಂದ್ಯಗಳನ್ನಾಡಿ 61 ವಿಕೆಟ್​ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ 58 ಇನ್ನಿಂಗ್ಸ್​ನಿಂದ 91 ವಿಕೆಟ್​ ಸಂಪಾದಿಸಿ ಪ್ರಭಾವಿ ಬೌಲರ್​ ಆಗಿದ್ದಾರೆ. ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ (IPL) ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪರ ಆಡುತ್ತಿದ್ದಾರೆ. ಈ ಬಾರಿ ಆರಂಭವಾದ ಮೇಜರ್​ ಕ್ರಿಕೆಟ್​ ಲೀಗ್​ಗೆ (MCL) ತೆರಳುವಾಗ ರಾಷ್ಟ್ರೀಯ ತಂಡ ಟೆಸ್ಟ್ ಕ್ರಿಕೆಟಿಗರಿಗೆ ತರಬೇತಿ ಶಿಬಿರಕ್ಕೆ ಇವರನ್ನು ಆಯ್ಕೆ ಮಾಡಿತ್ತು. ಇದರಿಂದ ಎಂ​ಸಿಎಲ್​ ಪ್ರವಾಸವನ್ನು ಕಳೆದುಕೊಂಡಿದ್ದರು. ಐಪಿಎಲ್​ 26 ಪಂದ್ಯಗಳಲ್ಲಿ 35 ವಿಕೆಟ್​ ಪಡೆದು ಉತ್ತಮ ಆಲ್​ರೌಂಡರ್​ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಹಸರಂಗ, ಹೆಚ್ಚು ಲೀಗ್​ ಪಂದ್ಯಗಳನ್ನು ಆಡುವ ಸಾಧ್ಯತೆ ಇದೆ.

ಇದನ್ನೂ ಓದಿ: Maharaja Trophy: ಲವನಿತ್ - ಶ್ರೀಜಿತ್ ಶತಕದ ಜೊತೆಯಾಟ, ಹುಬ್ಬಳ್ಳಿ ಟೈಗರ್ಸ್​ಗೆ 7 ವಿಕೆಟ್​ ಜಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.