ETV Bharat / sports

ICC T20 ವಿಶ್ವಕಪ್​ : ಶ್ರೀಲಂಕಾ ತಂಡಕ್ಕೆ ಹೆಚ್ಚುವರಿಯಾಗಿ ಐವರು ಪ್ಲೇಯರ್ಸ್​ ಸೇರ್ಪಡೆ

author img

By

Published : Oct 1, 2021, 10:16 PM IST

ಈಗಾಗಲೇ ಘೋಷಿತ ತಂಡದಲ್ಲಿದ್ದ ಲಾಹೀರು ಮಧುಶಂಕ ತಂಡದೊಂದಿಗೆ ಪ್ರಯಾಣ ಮಾಡುವುದಿಲ್ಲ. ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಅಂತಾ ಲಂಕಾ ಆಯ್ಕೆ ಸಮಿತಿ ಹೇಳಿದೆ. ಶ್ರೀಲಂಕಾ ತಂಡ ಅಕ್ಟೋಬರ್​ 18ರಿಂದ ತನ್ನ ಅಭಿಯಾನ ಆರಂಭ ಮಾಡಲಿದೆ. ಮೊದಲ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಸಿಂಹಳೀಯರು ಸೆಣಸಾಟ ನಡೆಸಲಿದಾರೆ..

Sri Lanka
Sri Lanka

ಕೊಲಂಬೋ(ಶ್ರೀಲಂಕಾ) : ಮುಂದಿನ ತಿಂಗಳಿಂದ ದುಬೈನಲ್ಲಿ ಆರಂಭಗೊಳ್ಳಲಿರುವ ಐಸಿಸಿ ಟಿ-20 ವಿಶ್ವಕಪ್​ ಟೂರ್ನಾಮೆಂಟ್​ಗೆ ಈಗಾಗಲೇ ಎಲ್ಲ ತಂಡಗಳು ತಮ್ಮ ಆಟಗಾರರನ್ನ ಆಯ್ಕೆ ಮಾಡಿಕೊಂಡಿವೆ. ಇದರ ಬೆನ್ನಲ್ಲೇ ಶ್ರೀಲಂಕಾ ಕ್ರಿಕೆಟ್ ಮಂಡಳಿ ತಮ್ಮ ತಂಡಕ್ಕೆ ಹೆಚ್ಚುವರಿಯಾಗಿ ಐವರು ಪ್ಲೇಯರ್‌ಗಳನ್ನ ಸೇರ್ಪಡೆ ಮಾಡಿಕೊಂಡಿದೆ.

  • Sri Lanka Cricket’s Selection Committee included 05 more additional players to join the Sri Lanka squad taking part in the ICC Men’s #T20WorldCup 2021.

    Pathum Nissanka
    Minod Bhanuka
    Ashen Bandara
    Lakshan Sandakan
    Ramesh Mendishttps://t.co/EvtKitqovD

    — Sri Lanka Cricket 🇱🇰 (@OfficialSLC) October 1, 2021 " class="align-text-top noRightClick twitterSection" data=" ">

ಈಗಾಗಲೇ ಆಯ್ಕೆಯಾಗಿರುವ ಶ್ರೀಲಂಕಾ ವಿಶ್ವಕಪ್ ತಂಡಕ್ಕೆ ಪಾತುಮ್ ನಿಶಾಂಕ್​, ಮಿನೋದ್ ಭಾನುಕ, ಅಶೆನ್ ಬಂಡಾರ, ಲಕ್ಷಣ ಸಂದಕನ್ ಮತ್ತು ರಮೇಶ್ ಮೆಂಡಿಸ್ ಹೆಚ್ಚುವರಿಯಾಗಿ ಸೇರಿಕೊಳ್ಳಲಿದ್ದಾರೆ.

ಈಗಾಗಲೇ ಘೋಷಿತ ತಂಡದಲ್ಲಿದ್ದ ಲಾಹೀರು ಮಧುಶಂಕ ತಂಡದೊಂದಿಗೆ ಪ್ರಯಾಣ ಮಾಡುವುದಿಲ್ಲ. ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಅಂತಾ ಲಂಕಾ ಆಯ್ಕೆ ಸಮಿತಿ ಹೇಳಿದೆ. ಶ್ರೀಲಂಕಾ ತಂಡ ಅಕ್ಟೋಬರ್​ 18ರಿಂದ ತನ್ನ ಅಭಿಯಾನ ಆರಂಭ ಮಾಡಲಿದೆ. ಮೊದಲ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಸಿಂಹಳೀಯರು ಸೆಣಸಾಟ ನಡೆಸಲಿದಾರೆ.

ಇದನ್ನೂ ಓದಿರಿ: ಟಿ-20 ವಿಶ್ವಕಪ್‌: ದಸುನ್‌ ಶನಕ ನಾಯಕತ್ವದಲ್ಲಿ ಬಲಿಷ್ಠ ತಂಡ ಪ್ರಕಟಿಸಿದ ಶ್ರೀಲಂಕಾ

ಲಂಡನ್‌ಗೆ ತೆರಳಿದ್ದ ವೇಳೆ ಕೋವಿಡ್ ಪ್ರೋಟೊಕಾಲ್​​ ಬ್ರೇಕ್ ಮಾಡಿದ್ದಕ್ಕಾಗಿ ತಂಡದ ಪ್ರಮುಖ ಆಟಗಾರರಾದ ನಿರೋಶ್ ಡಿಕ್​ವೆಲ್​, ಕುಶಾಲ್ ಮೆಂಡಿಸ್​ ಹಾಗೂ ದನುಸ್ಸ್ ಗುಣತಿಲಕ್​​ ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದಾರೆ. ಈಗಾಗಲೇ ಘೋಷಣೆಯಾಗಿರುವ ತಂಡದಲ್ಲಿ ಬದಲಾವಣೆ ಅಥವಾ ಹೆಚ್ಚುವರಿ ಸದಸ್ಯರಿಗೆ ಸೇರ್ಪಡೆ ಮಾಡಲು ಐಸಿಸಿ ಅಕ್ಟೋಬರ್​ 10ರವರೆಗೆ ಕಾಲಾವಕಾಶ ನೀಡಿದೆ.

ಟಿ-20 ವಿಶ್ವಕಪ್‌ಗೆ ಶ್ರೀಲಂಕಾದ ಆಟಗಾರರ ತಂಡ

ದಾಸುನ್ ಶನಕ (ನಾಯಕ), ಧನಂಜಯ ಡಿ ಸಿಲ್ವಾ, ಕುಸಾಲ್ ಪೆರೇರಾ, ದಿನೇಶ್ ಚಂಡಿಮಾಲ್, ಅವಿಷ್ಕಾ ಫೆರ್ನಾಂಡೊ, ಭಾನುಕಾ ರಾಜಪಕ್ಸೆ, ಚರಿತ್ ಅಸಲಂಕ, ಹಸರಂಗ, ಕಮಿಂಡು ಮೆಂಡಿಸ್, ಚಮಿಕ ಕರುಣರತ್ನೆ, ನುವಾನ್ ಪ್ರದೀಪ್, ದುಷ್ಮಂತ ಚಮೀರ, ಪ್ರವೀಣ್ ಜಯವಿಕ್ರಮ, ಲಹಿರು ಮಧುಶಂಕ.ಪಾತುಮ್ ನಿಶಾಂಕ್​, ಮಿನೋದ್ ಭಾನುಕ, ಅಶೆನ್ ಬಂಡಾರ, ಲಕ್ಷಣ ಸಂದಕನ್ ಮತ್ತು ರಮೇಶ್ ಮೆಂಡಿಸ್

ಮೀಸಲು ಆಟಗಾರರು : ಲಹಿರು ಕುಮಾರ, ಬಿನೂರ ಫೆರ್ನಾಂಡೊ, ಅಕಿಲ ಧನಂಜಯ, ಪುಲಿನ ತರಂಗ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.