ನವದೆಹಲಿ: ಬೃಹತ್ ಮೊತ್ತ ಪೇರಿಸಿದ ಹೊರತಾಗಿಯೂ ಭಾರತ ತಂಡ ಬೌಲರ್ಗಳ ಕಳಪೆ ಪ್ರದರ್ಶನದಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಸೋಲು ಕಂಡಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ಗಳಲ್ಲಿ ಅಗ್ರಪಂಕ್ತಿ ಬ್ಯಾಟರ್ಗಳ ಸಹಾಯದಿಂದ 211 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ 19.1 ಓವರ್ನಲ್ಲಿ 212 ಗಳಿಸಿ ವಿಜಯದ ನಗೆ ಬೀರಿತು.
ಕಿಲ್ಲರ್ ಮಿಲ್ಲರ್, ಡ್ಯಾಷಿಂಗ್ ಡಸೆನ್: ಎದುರುಗಡೆ 211 ರನ್ಗಳ ಬೃಹತ್ ಮೊತ್ತವಿದ್ದರೂ ಎದೆಗುಂದದೇ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಆಟಗಾರರು ಸಿಕ್ಸರ್ಗಳ ಸುರಿಮಳೆ ಸುರಿಸಿದರು. ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ 22 ರನ್ ಗಳಿಸಿದರೆ, ನಾಯಕ ತೆಂಬಾ ಬವುಮಾ 10 ರನ್ ಗಳಿಸಿ ಔಟಾದರು. ಆಲ್ರೌಂಡರ್ ಸ್ವೇನ್ ಪ್ರಿಟೋರಿಯಸ್ 4 ಸಿಕ್ಸರ್ ಸಮೇತ 29 ರನ್ಗಳಿಸಿದರು.
-
What a match!
— ICC (@ICC) June 9, 2022 " class="align-text-top noRightClick twitterSection" data="
South Africa record their highest successful run chase in men's T20Is 💥#INDvSA | https://t.co/EAEI2MRCT2 pic.twitter.com/aMkNnde0Yu
">What a match!
— ICC (@ICC) June 9, 2022
South Africa record their highest successful run chase in men's T20Is 💥#INDvSA | https://t.co/EAEI2MRCT2 pic.twitter.com/aMkNnde0YuWhat a match!
— ICC (@ICC) June 9, 2022
South Africa record their highest successful run chase in men's T20Is 💥#INDvSA | https://t.co/EAEI2MRCT2 pic.twitter.com/aMkNnde0Yu
ನಂತರ ಬಂದ ರಸ್ಸಿ ವ್ಯಾನ್ಡರ್ ಡಸ್ಸೆನ್ ಮತ್ತು ಐಪಿಎಲ್ನಲ್ಲಿ ಮಿಂಚಿದ್ದ ಡೇವಿಡ್ ಮಿಲ್ಲರ್ ಭಾರತೀಯ ಬೌಲರ್ಗಳನ್ನು ದಂಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಡಸ್ಸೆನ್ 46 ಎಸೆತಗಳಲ್ಲಿ 5 ಸಿಕ್ಸರ್, 7 ಬೌಂಡರಿ ಸಮೇತ 75 ರನ್ ಗಳಿಸಿದರೆ, ಮಿಲ್ಲರ್ 31 ಎಸೆತಗಳಲ್ಲ 64 ರನ್ ಚಚ್ಚಿ ಬೌಲರ್ಗಳ ಬೆವರಿಳಿಸಿದರು. ಇವರ ಇನ್ನಿಂಗ್ಸ್ನಲ್ಲಿ 4 ಬೌಂಡರಿ 5 ಭರ್ಜರಿ ಸಿಕ್ಸರ್ಗಳು ಇದ್ದವು.
ಇಶಾನ್ ಕಿಶನ್ ಸಾಹಸ: ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ ಅಗ್ರ 5 ಬ್ಯಾಟರ್ಗಳ ಸಹಾಯದಿಂದ 211 ರನ್ಗಳ ಬೃಹತ್ ಮೊತ್ತ ಪೇರಿಸಿತು. ಇದರಲ್ಲಿ ಆರಂಭಿಕ ಆಟಗಾರ ಇಶಾನ್ ಕಿಶನ್ 48 ಎಸೆತಗಳಲ್ಲಿ 3 ಸಿಕ್ಸರ್ 11 ಬೌಂಡರಿಗಳಿಂದ 76 ರನ್ ಗಳಿಸಿದರು. ಮೊದಲ ಬಾರಿಗೆ ಅವಕಾಶ ಪಡೆದ ಋತುರಾಜ್ ಗಾಯಕ್ವಾಡ್(23), ಶ್ರೇಯಸ್ ಅಯ್ಯರ್(36), ನಾಯಕ ರಿಷಬ್ ಪಂತ್(29), ಹಾರ್ದಿಕ್ ಪಾಂಡ್ಯಾ(31) ಗಳಿಸಿದರು.
ಬೌಲಿಂಗ್ ಪಡೆ ಫೇಲ್: ಐಪಿಎಲ್ನಲ್ಲಿ ಮಿಂಚಿದ್ದ ಭಾರತೀಯ ಬೌಲರ್ಗಳು ದಕ್ಷಿಣ ಆಫ್ರಿಕಾ ತಂಡದೆದುರು ಮಂಡಿಯೂರಿದರು. ವೇಗಿ ಅವೇಶ್ ಖಾನ್ ಹೊರತುಪಡಿಸಿದರೆ ಎಲ್ಲಾ ಬೌಲರ್ಗಳು ದಂಡನೆಗೆ ಒಳಗಾದರು. ಆವೇಶ್ ಖಾನ್ 3 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದರು. ಸ್ಪಿನ್ನರ್ ಯಜುವೇಂದ್ರ ಚಹಲ್, ಹಾರ್ದಿಕ್ ಪಾಂಡ್ಯಾ, ಹರ್ಷಲ್ ಪಟೇಲ್, ಅಕ್ಷರ್ ಪಟೇಲ್ ದುಬಾರಿಯಾಗುವ ಮೂಲಕ ಪಂದ್ಯ ಸೋಲುವಂತಾಯಿತು.
ಇದನ್ನೂ ಓದಿ: ಟೀಂ ಇಂಡಿಯಾ ನಾಯಕತ್ವಕ್ಕೆ ಹಾರ್ದಿಕ್ ಪಾಂಡ್ಯ ಪ್ರಬಲ ಸ್ಪರ್ಧಿ: ಹರ್ಭಜನ್ ಸಿಂಗ್