ETV Bharat / sports

ಸೆಮಿಫೈನಲ್​ ಕನಸು ನಿರ್ಣಯಿಸುವ ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್ ಆಯ್ದುಕೊಂಡ ದ.ಆಫ್ರಿಕಾ

author img

By

Published : Nov 2, 2021, 3:36 PM IST

ದಕ್ಷಿಣ ಆಫ್ರಿಕಾ ಕಳೆದ ಬಾರಿ ಶ್ರೀಲಂಕಾ ವಿರುದ್ಧ ಕಣಕ್ಕಿಳಿಸಿದ್ದ ತಂಡಕ್ಕೆ ಅವಕಾಶ ನೀಡಿದೆ. ಇಂಗ್ಲೆಂಡ್ ಮೊದಲ ಗುಂಪಿನಲ್ಲಿ ಸೆಮಿಫೈನಲ್​ ಸ್ಥಾನವನ್ನು ಈಗಾಗಲೇ ಖಚಿತಪಡಿಸಿಕೊಂಡಿದೆ. ಇನ್ನು ಎರಡನೇ ಸ್ಥಾನಕ್ಕೆ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಪೈಪೋಟಿ ನಡೆಸುತ್ತಿದ್ದು, ಇಂದಿನ ಪಂದ್ಯ ಹರಿಣಗಳಿಗೆ ಮಹತ್ವದ್ದಾಗಿದೆ.

South Africa vs Bangladesh
South Africa vs Bangladesh

ಅಬುಧಾಬಿ: ಟಿ20 ವಿಶ್ವಕಪ್‌ ಸೆಮಿಫೈನಲ್ ಪ್ರವೇಶ ನಿರ್ಧರಿಸುವ ಬಾಂಗ್ಲಾದೇಶ ವಿರುದ್ಧದ ಇಂದಿನ ಪಂದ್ಯದಲ್ಲಿ ಟಾಸ್​ ಗೆದ್ದ ದಕ್ಷಿಣ ಆಫ್ರಿಕಾ ನಾಯಕ ಟೆಂಬ ಬವೂಮ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ದ.ಆಫ್ರಿಕಾ ಕಳೆದ ಬಾರಿ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಕಣಕ್ಕಿಳಿಸಿದ್ದ ತಂಡವನ್ನೇ ನೆಚ್ಚಿಕೊಂಡಿದೆ. ಇಂಗ್ಲೆಂಡ್ ಮೊದಲ ಗುಂಪಿನಲ್ಲಿ ಸೆಮಿಫೈನಲ್​ ಸ್ಥಾನವನ್ನು ಈಗಾಗಲೇ ಭದ್ರಪಡಿಸಿಕೊಂಡಿದೆ. ಇನ್ನು ಎರಡನೇ ಸ್ಥಾನಕ್ಕೆ ದ. ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಪೈಪೋಟಿ ಇದ್ದು, ಇಂದಿನ ಪಂದ್ಯ ಹರಿಣಗಳಿಗೆ ಮಹತ್ವದ್ದಾಗಿದೆ.

ಆದರೆ ಬಾಂಗ್ಲಾದೇಶ ತಂಡದಲ್ಲಿ ಎರಡು ಬದಲಾವಣೆಗಳಾಗಿವೆ. ಗಾಯಗೊಂಡಿರುವ ಶಕಿಬ್ ಟೂರ್ನಿಯಿಂದಲೇ ಹೊರಬಿದ್ದರೆ, ಮುಸ್ತಪಿಜುರ್ ರೆಹಮಾನ್​ಗೆ ವಿಶ್ರಾಂತಿ ನೀಡಲಾಗಿದೆ.

ಇವರಿಬ್ಬರ ಬದಲು ಸೌಮ್ಯ ಸರ್ಕಾರ್ ಮತ್ತು ತಸ್ಕಿನ್ ಅಹ್ಮದ್​ ಕಣಕ್ಕಿಳಿದಿದ್ದಾರೆ. ಬಾಂಗ್ಲಾದೇಶ ಟೂರ್ನಿಯಿಂದ ಹೊರಬಿದ್ದಿದ್ದು, ಈ ಎರಡೂ ಪಂದ್ಯಗಳು ಕೇವಲ ಔಪಚಾರಿಕವಾಗಿವೆ.

ಬಾಂಗ್ಲಾದೇಶ (ಪ್ಲೇಯಿಂಗ್ XI): ಮೊಹಮ್ಮದ್ ನಯಿಮ್, ಲಿಟನ್ ದಾಸ್(ವಿಕೀ), ಮಹಮದುಲ್ಲಾ (ನಾಯಕ), ಅಫೀಫ್ ಹೊಸೈನ್, ಶಮೀಮ್ ಹೊಸೈನ್, ಮಹೆದಿ ಹಸನ್, ನಸುಮ್ ಅಹ್ಮದ್, ಶೋರಿಫುಲ್ ಇಸ್ಲಾಂ, ತಸ್ಕಿನ್ ಅಹ್ಮದ್

ದಕ್ಷಿಣ ಆಫ್ರಿಕಾ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್ (ವಿಕೀ), ರೀಜಾ ಹೆಂಡ್ರಿಕ್ಸ್, ಟೆಂಬಾ ಬವುಮಾ (ಸಿ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಡ್ವೇನ್ ಪ್ರಿಟೋರಿಯಸ್, ಕಗಿಸೊ ರಬಾಡಾ, ಕೇಶವ್ ಮಹಾರಾಜ್, ಅನ್ರಿಚ್ ನಾರ್ಕಿಯಾ, ತಬ್ರೈಜ್ ಶಮ್ಸಿ

ಇದನ್ನೂ ಓದಿ: ರೋಹಿತ್ ಅಲ್ಲ, ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಕನ್ನಡಿಗ ನಾಯಕನಾಗುವ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.