ETV Bharat / sports

South Africa vs India: ಕೋಚ್​ ರಾಹುಲ್ ದ್ರಾವಿಡ್ ದಾಖಲೆ ಮೇಲೆ ವಿರಾಟ್​ ಕೊಹ್ಲಿ ಕಣ್ಣು

author img

By

Published : Dec 21, 2021, 7:04 PM IST

ರಾಹುಲ್ ದ್ರಾವಿಡ್​ ದಕ್ಷಿಣ ಆಫ್ರಿಕಾದಲ್ಲಿ 11 ಪಂದ್ಯಗಳಲ್ಲಿ 22 ಇನ್ನಿಂಗ್ಸ್​ಗಳಿಂದ 624 ರನ್​ಗಳಿಸಿದ್ದಾರೆ. ಒಂದು ಶತಕ ಮತ್ತು 2 ಅರ್ಧಶತಕ ಬಾರಿಸಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಹೆಚ್ಚು ರನ್​ಗಳಿಸಿದ 2ನೇ ಬ್ಯಾಟರ್ ಆಗಿದ್ದಾರೆ.

Virat Kohli set to overtake coach Rahul Dravid's record in SA
ರಾಹುಲ್ ದ್ರಾವಿಡ್ ದಾಖಲೆ ಮುರಿಯಲಿರುವ​ ವಿರಾಟ್ ಕೊಹ್ಲಿ

ಸೆಂಚುರಿಯನ್: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮುಂಬರುವ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಕೇವಲ 66 ರನ್​ಗಳಿಸಿದರೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಹೆಚ್ಚು ರನ್​ಗಳಿಸಿದವರ ಪಟ್ಟಿಯಲ್ಲಿ ದ್ರಾವಿಡ್​ರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಲಿದ್ದಾರೆ.

ರಾಹುಲ್ ದ್ರಾವಿಡ್​ ದಕ್ಷಿಣ ಆಫ್ರಿಕಾದಲ್ಲಿ 11 ಪಂದ್ಯಗಳಲ್ಲಿ 22 ಇನ್ನಿಂಗ್ಸ್​ಗಳಿಂದ 624 ರನ್​ಗಳಿಸಿದ್ದಾರೆ. ಒಂದು ಶತಕ ಮತ್ತು 2 ಅರ್ಧಶತಕ ಬಾರಿಸಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಹೆಚ್ಚು ರನ್​ಗಳಿಸಿದ 2ನೇ ಬ್ಯಾಟರ್ ಆಗಿದ್ದಾರೆ.

ಸಚಿನ್​ ತೆಂಡೂಲ್ಕರ್​ 28 ಇನ್ನಿಂಗ್ಸ್​ಗಳಲ್ಲಿ 1161 ರನ್​​​​ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಅವರು 5 ಶತಕ ಮತ್ತು 3 ಅರ್ಧಶತಕ ದಾಖಲಿಸಿದ್ದಾರೆ. ಇಂಗ್ಲೆಂಡ್​ ವಾಲ್ಟರ್​ ಹಮ್ಮಂಡ್​(1447) ಹೊರತುಪಡಿಸಿದರೆ ಸಚಿನ್​​ ಹರಿಣಗಳ ನಾಡಿನಲ್ಲಿ 1000ಕ್ಕೂ ಹೆಚ್ಚು ರನ್​ಗಳಿಸಿದ ಏಕೈಕ ಪ್ರವಾಸಿ ಬ್ಯಾಟರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ವಿರಾಟ್​ ಕೊಹ್ಲಿ 5 ಟೆಸ್ಟ್​ಪಂದ್ಯಗಳಿಂದ 2 ಶತಕ ಮತ್ತು 2 ಅರ್ಧಶತಕಗಳ ಸಹಿತ 55ರ ಸರಾಸರಿಯಲ್ಲಿ 558 ರನ್​ಗಳಿಸಿದ್ದಾರೆ. ಈ ಸರಣಿಯಲ್ಲಿ ಅವರು ದ್ರಾವಿಡ್​(624) ಮತ್ತು ಲಕ್ಷ್ಮಣ್​(566) ದಾಖಲೆಯನ್ನು ಮುರಿಯಲಿದ್ದಾರೆ.

ಇದನ್ನೂ ಓದಿ:ಹರಿಣಗಳಿಗೆ ಆಘಾತ: ಭಾರತ ಟೆಸ್ಟ್​ ಸರಣಿಯಿಂದ ಎನ್ರಿಚ್​ ನಾರ್ಕಿಯಾ ಔಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.