ETV Bharat / sports

ಭಾರತಕ್ಕೆ 228ರನ್ ಗುರಿ  ನೀಡಿದ ಹರಿಣಗಳು: ರಿಲೀ ರೊಸೊವ್ ಆಕರ್ಷಕ ಶತಕ

author img

By

Published : Oct 4, 2022, 9:30 PM IST

ಭಾರತದ ಬೌಲರ್​ಗಳು ಮತ್ತೆ ದುಬಾರಿಯಾಗಿದ್ದು, 227 ರನ್​ ಬಿಟ್ಟುಕೊಟ್ಟಿದ್ದಾರೆ. ದಕ್ಷಿಣ ಆಫ್ರಿಕಾ ಇಂದೋರ್​ನಲ್ಲಿ ಉತ್ತಮ ಮೊತ್ತ ಕಲೆ ಹಾಕಿ ವಿಶ್ವಕಪ್​ ವಿಶ್ವಾಸ ಹೆಚ್ಚಿಸಿಕೊಂಡಿದೆ.

South Africa score 227-3 against India in 3rd T20I
ರಿಲೀ ರೊಸೊವ್ ಆಕರ್ಷಕ ಶತಕ

ಇಂದೂರ್​ : ಇಲ್ಲಿನ ಹೋಲ್ಕರ್​ಮೈದಾನದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವಣ ಮೂರನೇ ಟಿ 20ಯಲ್ಲಿ ಭರ್ಜರಿ ಬ್ಯಾಟಿಂಗ್​ ಮಾಡಿದ ಹರಿಣಗಳು 3 ವಿಕೆಟ್​​​ ಕಳೆದುಕೊಂಡು 227 ರನ್​ಗಳಿಸಿದೆ. ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ದಕ್ಷಿಣ ಆಫ್ರಿಕಾ ರಿಲೀ ರೊಸೊವ್ ಅವರ ಆಕರ್ಷಕ ಶತಕ ಮತ್ತು ಕ್ವಿಂಟನ್ ಡಿ ಕಾಕ್ ಅರ್ಧ ಶತಕದ ನೆರವಿನಿಂದ ಭಾರತಕ್ಕೆ 228 ರನ್​ ಗುರಿ ನೀಡಿದೆ.

ಆಫ್ರಿಕಾ ನಾಯಕ ಬವುಮಾ ವಿಕೇಟ್​ ಪಡೆದು ಉಮೇಶ್ ಯಾದವ್​ ​ಆರಂಭಿಕ ಆಘಾತ ನೀಡಿದರಾದರೂ, ನಂತರ ಬಂದ ರಿಲೀ ರೊಸೊವ್, ಡಿ ಕಾಕ್​ ರೊಂದಿಗೆ ಉತ್ತಮ ಇನ್ನಿಂಗ್ಸ್​ ಕಟ್ಟಿದರು. ಈ ಜೋಡಿ ಐವತ್ತುಕ್ಕೂ ಹೆಚ್ಚು ರನ್​ ಜೊತೆಯಾಟ ಮಾಡುವ ಮೂಲಕ ತಂಡದ ಬೃಹತ್​ ಮೊತ್ತಕ್ಕೆ ಸಹಕರಿಸಿದರು.

ಡಿ ಕಾಕ್​ ತಾಳ್ಮೆಯ ಆಟವಾಡಿ 43 ಎಸೆತದಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್​ನಿಂದ 68 ರನ್​ ಗಳಿಸಿದರು. ರಿಲೀ ರೊಸೊವ್ ಡಿ ಕಾಕ್​ ಔಟ್​ ಆದ ನಂತರ ಬಿರುಸಿನ ಆಟಕ್ಕೆ ಮುಂದಾದರು. ಟ್ರಿಸ್ಟಾನ್ ಸ್ಟಬ್ಸ್(23) ನಿಧಾನಗತಿಯಲ್ಲಿ ಆಡಿ ಕ್ರಿಸ್​ನ್ನು ರಿಲೀಗೆ ಬಿಟ್ಟುಕೊಡುತ್ತಿದ್ದರು.

ರಿಲೀ ರೊಸೊವ್ 208ರ ಸ್ಟ್ರೈಕ್​ ರೇಟ್​ನಲ್ಲಿ ಬ್ಯಾಟ್​ ಬೀಸಿ 7 ಬೌಂಡರಿ ಮತ್ತು 8 ಸಿಕ್ಸರ್​ಗಳ ಸಹಾಯದಿಂದ ಶತಕ ಗಳಿಸಿದರು. ಕೊನೆಯ ನಾಲ್ಕು ಬೆಂಡು ಬಾಕಿ ಇರುವಾಗ ಬಂದ ಮಿಲ್ಲರ್​ ಮೂರು ಬಾಲ್​ಗಳನ್ನು ಸಿಕ್ಸರ್​​ ಎತ್ತಿದರು. ಅಷ್ಟೇ ಅಲ್ಲ ಕೊನೆಯ ಬಾಲ್​ಗೆ​ ಒಂದು ರನ್ ಕದಿಯುವ ಮೂಲಕ 19 ರನ್​ ಗಳಿಸಿದರು.

ದುಬಾರಿ ಆದ ಬೌಲರ್​ಗಳು : ಮತ್ತೆ ಭಾರತೀಯ ಬೌಲರ್​ಗಳು ದುಬಾರಿಯಾದರು. ದೀಪಕ್​ ಚಹಾರ್​ 1 ವಿಕೆಟ್​ ಪಡೆದರೆ 4 ಓವರ್​ಗೆ 48 ರನ್​ ಬಿಟ್ಟುಕೊಟ್ಟರು. ಸಿರಾಜ್​ 44 ರನ್​ ಮತ್ತು ಹರ್ಷಲ್​ ಪಟೇಲ್​ 49 ರನ್​ ನೀಡಿದರು. ಉಮೇಶ್​ ಯಾದವ್​ ಒಂದು ವಿಕೆಟ್​ ಪಡೆದರೂ 3 ಓವರ್​ಗೆ 34 ರನ್​ ಇತ್ತರು. ಸ್ಪಿನ್ನರ್​ ವಿಭಾಗದಲ್ಲೂ ಅಕ್ಷರ್​ ಒಂದು ಓವರ್​ಗೆ 13 ರನ್​ ಮತ್ತು ಆರ್​ ಅಶ್ವನ್​ 4 ಓವರ್​ಗೆ 35 ರನ್​ ಬಿಟ್ಟುಕೊಟ್ಟರು.

ಇದನ್ನೂ ಓದಿ : ಔಪಚಾರಿಕ ಕದನದಲ್ಲಿ ಟಾಸ್​ಗೆದ್ದು ಕ್ಷೇತ್ರ ರಕ್ಷಣೆ ಆಯ್ದು ಕೊಂಡ ರೋಹಿತ್​ ಶರ್ಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.