ETV Bharat / sports

ವಿರಾಟ್‌ ಕೊಹ್ಲಿ​ ಭಾರತೀಯ ಕ್ರಿಕೆಟ್​​ನ ನಿಜವಾದ ಆಸ್ತಿ: ಗಂಗೂಲಿ ಗುಣಗಾನ

author img

By

Published : Sep 16, 2021, 9:01 PM IST

ದುಬೈನಲ್ಲಿ ಆಯೋಜನೆಗೊಂಡಿರುವ ಟಿ-20 ವಿಶ್ವಕಪ್​ ಬಳಿಕ ಟಿ-20 ಕ್ರಿಕೆಟ್​ನ ನಾಯಕತ್ವ ತ್ಯಜಿಸುವುದಾಗಿ ಘೋಷಣೆ ಮಾಡಿರುವ ವಿರಾಟ್​ ಕೊಹ್ಲಿಗೆ ಬಿಸಿಸಿಐ ಅಧ್ಯಕ್ಷ ಗಂಗೂಲಿ ಧನ್ಯವಾದ ತಿಳಿಸಿದ್ದಾರೆ.

Virat kohli
Virat kohli

ಹೈದರಾಬಾದ್​: ಐಸಿಸಿ ಟಿ-20 ವಿಶ್ವಕಪ್ ಟೂರ್ನಿ​​ ಬಳಿಕ ಚುಟುಕು ಕ್ರಿಕೆಟ್​ನ ನಾಯಕತ್ವ ಬಿಟ್ಟುಕೊಡುವುದಾಗಿ ಘೋಷಣೆ ಮಾಡಿರುವ ವಿರಾಟ್​​ ಕೊಹ್ಲಿ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಮೆಚ್ಚುಗೆ ಮಾತುಗಳನ್ನಾಡಿದ್ದು, ಧನ್ಯವಾದ ತಿಳಿಸಿದ್ದಾರೆ.

Sourav Ganguly thanks Virat Kohli
ವಿರಾಟ್​ ಕೊಹ್ಲಿಗೆ ಗಂಗೂಲಿ ಅಭಿನಂದನೆ

ಭವಿಷ್ಯದ ಮಾರ್ಗಸೂಚಿ ಗಮನದಲ್ಲಿಟ್ಟುಕೊಂಡು ವಿರಾಟ್​​ ಕೊಹ್ಲಿ ಈ ನಿರ್ಧಾರ ಕೈಗೊಂಡಿದ್ದು, ಎಲ್ಲ ಮಾದರಿ ಕ್ರಿಕೆಟ್​​ನಲ್ಲಿ ಅತ್ಯಂತ ಯಶಸ್ವಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಟಿ-20 ಕ್ರಿಕೆಟ್​ನ ನಾಯಕನಾಗಿ ಕೊಹ್ಲಿ ಅದ್ಭುತ ಪ್ರದರ್ಶನಕ್ಕಾಗಿ ಧನ್ಯವಾದ ತಿಳಿಸುತ್ತೇನೆ. ಮುಂಬರುವ ವಿಶ್ವಕಪ್​ ಹಾಗೂ ಅದರಾಚೆಗಿನ ಪಂದ್ಯಗಳಿಗಾಗಿ ಅವರಿಗೆ ಶುಭಾಶಯ ತಿಳಿಸುತ್ತೇನೆ. ಭಾರತಕ್ಕಾಗಿ ಸಾಕಷ್ಟು ರನ್​ಗಳಿಕೆ ಮುಂದುವರೆಯಲಿ ಎಂದು ಗಂಗೂಲಿ ಶುಭ ಹಾರೈಸಿದ್ದಾರೆ.

Virat kohli
ಪಂದ್ಯವೊಂದರಲ್ಲಿ ವಿರಾಟ್‌- ಹಾರ್ದಿಕ್

ಇದನ್ನೂ ಓದಿ: 'ತಂಡಕ್ಕಾಗಿ ನನ್ನ ಸರ್ವಸ್ವವನ್ನೂ ನೀಡಿದ್ದೇನೆ': ಟ್ವಿಟರ್​ ಪೋಸ್ಟ್​ನಲ್ಲಿ ವಿರಾಟ್​ ಏನೆಲ್ಲ ಬರೆದುಕೊಂಡಿದ್ದಾರೆ?

ವಿರಾಟ್​ ಕೊಹ್ಲಿ ಟಿ-20 ನಾಯಕತ್ವ ಬಿಟ್ಟುಕೊಡುವುದಾಗಿ ಘೋಷಣೆ ಮಾಡುತ್ತಿದ್ದಂತೆ ಅನೇಕರು ಟ್ವೀಟ್ ಮಾಡಿದ್ದು, ಮುಂದಿನ ಭವಿಷ್ಯಕ್ಕಾಗಿ ಶುಭ ಹಾರೈಸಿದ್ದಾರೆ.

ಪ್ರಮುಖವಾಗಿ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ, ರಾಜೀವ್ ಶುಕ್ಲಾ, ವೆಂಕಟೇಶ್ ಪ್ರಸಾದ್​, ಮುನಾಫ್ ಪಟೇಲ್​ ಸೇರಿದಂತೆ ಅನೇಕರು ಟ್ವೀಟ್ ಮಾಡಿದ್ದಾರೆ.

ವಿರಾಟ್​ ಕೊಹ್ಲಿ ಟಿ-20 ಕ್ರಿಕೆಟ್​ ನಾಯಕತ್ವ ಬಿಟ್ಟುಕೊಡುವುದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್​ ಶಾ ಅವರೊಂದಿಗೆ ಸಮಾಲೋಚನೆ ಸಹ ನಡೆಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.