ETV Bharat / sports

IPL DC vs CSK: ಬ್ರಾವೋ ಬೆನ್ನ ಮೇಲೇರಿ ಹೆಟ್ಮಾಯರ್ ಸಂಭ್ರಮ- ವಿಡಿಯೋ

author img

By

Published : Oct 5, 2021, 11:59 AM IST

ವೆಸ್ಟ್​ ಇಂಡೀಸ್ ಆಟಗಾರರಾಗಿರುವ ಇಬ್ಬರು ಐಪಿಎಲ್​​​ನಲ್ಲಿ ಎರಡು ಬಲಿಷ್ಠ ತಂಡಗಳ ಪರ ಆಡುತ್ತಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಡೆಲ್ಲಿ ಗೆಲುವು ಪಡೆಯುತ್ತಿದ್ದಂತೆ ಶಿಮ್ರಾನ್ ಚೆನ್ನೈ ತಂಡದ ಡ್ವೇನ್ ಬ್ರಾವೋ ಬೆನ್ನ ಮೇಲೆ ಹಾರಿ ಖುಷಿಪಟ್ಟರು.

shimron-hetmyer-jumps-on-dwayne-bravos-back
ಬ್ರಾವೋ ಬೆನ್ನ ಮೇಲೆ ಹಾರಿ ಹೆಟ್ಮಾಯರ್ ಸಂಭ್ರಮ

ದುಬೈ: ಐಪಿಎಲ್‌ನ 50ನೇ ಪಂದ್ಯದಲ್ಲಿ ಬಲಾಢ್ಯ ಚೆನ್ನೈ ವಿರುದ್ಧ ರೋಚಕ ಜಯ ಸಾಧಿಸಿರುವ ಡೆಲ್ಲಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು. ಅಲ್ಪಮೊತ್ತ ಬೆನ್ನಟ್ಟಿದ್ದ ಪಂತ್‌ ಬಳಗ ಆರಂಭದಲ್ಲೇ ಪ್ರಮುಖ ವಿಕೆಟ್​​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಅಂತಿಮವಾಗಿ ಕ್ರೀಸ್​​ನಲ್ಲಿದ್ದ ಶಿಮ್ರಾನ್​ ಹೆಟ್ಮಾಯರ್ ಹಾಗೂ ಕಗಿಸೋ ರಬಾಡ ಪಂದ್ಯ ಗೆಲ್ಲಿಸಿಕೊಟ್ಟರು. ಎರಡು ಎಸೆತದಲ್ಲಿ 3 ರನ್​ಗಳ ಅಗತ್ಯವಿದ್ದ ವೇಳೆ ರಬಾಡ ಬೌಂಡರಿ ಸಿಡಿಸಿ ತಂಡಕ್ಕೆ ಗೆಲುವು ತಂದಿಟ್ಟರು.

ಈ ವೇಳೆ ಗೆಲುವಿನ ಸಂಭ್ರಮಾಚರಣೆ ನಡೆಸಿದ ಹೆಟ್ಮಾಯರ್ ತನ್ನದೇ ದೇಶದ ಆಟಗಾರ ಹಾಗು ಚೆನ್ನೈ ತಂಡದ ಆಲ್​​​ರೌಂಡರ್​ ಡ್ವೇನ್ ಬ್ರಾವೋ ಬೆನ್ನ ಮೇಲೆ ಹಾರಿ ಸಂಭ್ರಮಿಸಿದರು. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವಿಂಡೀಸ್‌ ಪರ ಆಡುವ ಇವರಿಬ್ಬರು, ಐಪಿಎಲ್​ ಟೂರ್ನಿಯಲ್ಲಿ ಎರಡು ಪ್ರಬಲ ತಂಡದ ಪರ ಆಡುತ್ತಿದ್ದಾರೆ.

ನಿನ್ನೆ ಡೆಲ್ಲಿ ಗೆಲುವಿನ ರನ್ ಹೊಡೆಯುವಾಗ ಶಿಮ್ರಾನ್​ ನಾನ್​ಸ್ಟ್ರೈಕರ್​ನಲ್ಲಿದ್ದರು. ಚೆಂಡು​ ಬೌಂಡರಿ ಗೆರೆ ದಾಟುತ್ತಿದ್ದಂತೆ ಬೌಲಿಂಗ್ ಮಾಡುತ್ತಿದ್ದ ಬ್ರಾವೋ ಬೆನ್ನಿನ ಮೇಲೆ ಹಾರಿ ಖುಷಿಪಟ್ಟರು.

ಇದನ್ನೂ ಓದಿ: ಚೆನ್ನೈ ಸೂಪರ್ ಕಿಂಗ್ಸ್ ಕಟ್ಟಿಹಾಕಿದ ಡೆಲ್ಲಿ... ಪಟ್ಟಿಯಲ್ಲಿ ನಂ.1!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.