ETV Bharat / sports

ಶಿಖರ್​ ದಾಂಪತ್ಯದಲ್ಲಿ ಬಿರುಕು: ಧವನ್​​ಗೆ ವಿಚ್ಛೇದನ ನೀಡಿದ ಪತ್ನಿ ಆಯೇಷಾ!

author img

By

Published : Sep 7, 2021, 10:44 PM IST

Updated : Sep 8, 2021, 11:58 AM IST

ಕಳೆದ 9 ವರ್ಷಗಳ ಹಿಂದೆ ಮದುವೆ ಮಾಡಿಕೊಂಡಿದ್ದ ಶಿಖರ್ ಧವನ್​ ಹಾಗೂ ಪತ್ನಿ ಆಯೇಷಾ ಜೀವನದಲ್ಲಿ ಇದೀಗ ಬಿರುಕು ಉಂಟಾಗಿದೆ.

Shikhar Dhawan
Shikhar Dhawan

ನವದೆಹಲಿ: ಟೀಂ ಇಂಡಿಯಾ ಕ್ರಿಕೆಟ್​ನ ಆರಂಭಿಕ ಆಟಗಾರ ಆಯೇಷಾ ಮುಖರ್ಜಿ ತಮ್ಮ ಪತಿ ಶಿಖರ್​ ಧವನ್​ಗೆ ವಿಚ್ಛೇದನ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಯೇಷಾ ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ವಿಚ್ಛೇದನಕ್ಕೆ ಸಂಬಂಧಿಸಿದಂತೆ ಆಯೇಷಾ ಮುಖರ್ಜಿ ಇನ್​ಸ್ಟಾಗ್ರಾಂನಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಆದರೆ ಶಿಖರ್ ಧವನ್​ ಇಲ್ಲಿಯವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಕಳೆದ 9 ವರ್ಷಗಳಿಂದ ಶಿಖರ್​ ಧವನ್ ಹಾಗೂ ಆಯೇಷಾ ದಾಂಪತ್ಯ ಜೀವನ ನಡೆಸುತ್ತಿದ್ದು, ಇವರಿಗೆ ಒಂದು ಹೆಣ್ಣು ಮಗುವಿದೆ.

Shikhar Dhawan
ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್​

ಆಯೇಷಾ ಶಿಖರ್​ ಧವನ್​​ ಅವರಿಗಿಂತ 10 ವರ್ಷ ದೊಡ್ಡವರು. ಧವನ್​ಗೂ ಮುನ್ನ ಆಸ್ಟ್ರೇಲಿಯಾದ ಉದ್ಯಮಿಯೊಬ್ಬನನ್ನು ವಿವಾಹವಾಗಿದ್ದ ಆಯೇಷಾ ಅವರಿಂದಲೂ ವಿಚ್ಛೇದನ ಪಡೆದುಕೊಂಡಿದ್ದರು. ಟೀಂ ಇಂಡಿಯಾ ಏಕದಿನ ಕ್ರಿಕೆಟ್​ನ ಖಾಯಂ ಸದಸ್ಯರಾಗಿರುವ ಶಿಖರ್​ ಧವನ್​, ಸದ್ಯ ಮುಂಬರುವ ಐಪಿಎಲ್ ಹಾಗೂ ಟಿ - 20 ವಿಶ್ವಕಪ್​ನಲ್ಲಿ ಭಾಗಿಯಾಗಲು ತಯಾರಿ ನಡೆಸಿದ್ದು, ಇದರ ಮಧ್ಯೆ ಈ ಸುದ್ದಿ ಹೊರಬಿದ್ದಿದೆ.

Shikhar Dhawan Wife Ayesha Mukherjee
ಶಿಖರ್ ಧವನ್​-ಆಯೇಷಾ ಮುಖರ್ಜಿ

ವಿರೋಧದ ನಡುವೆ ಮದುವೆ:

ಶಿಖರ್-ಆಯೇಷಾ ಇಬ್ಬರು ಪರಸ್ಪರ ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ ವಿವಾಹವಾಗಿದ್ದರು. ಆಯೇಷಾಗೆ ಈ ಮೊದಲೇ ಇಬ್ಬರು ಹೆಣ್ಣು ಮಕ್ಕಳಿದ್ದರು. ಹಾಗೆ 10 ವರ್ಷ ಶಿಖರ್​ಗಿಂತ ದೊಡ್ಡವರಾಗಿದ್ದರಿಂದ ಧವನ್​ ಮನೆಯವರಿಗೆ ಈ ಇಬ್ಬರ ಮದುವೆ ಇಷ್ಟ ಇರಲಿಲ್ಲ. ಇಷ್ಟೆಲ್ಲ ಅಡೆ ತಡೆಗಳ ನಡುವೆಯೂ 2012ರಲ್ಲಿ ಶಿಖರ್ ಮದುವೆಯಾಗಿದ್ದರು.

Shikhar Dhawan Wife Ayesha Mukherjee
ಪತ್ನಿ ಆಯೇಷಾ ಜೊತೆ ಶಿಖರ್ ಧವನ್​

ಪತ್ನಿಯ ಇಬ್ಬರು ಹೆಣ್ಣುಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಶಿಖರ್​ಗೆ 2014ರಲ್ಲಿ ಗಂಡು ಮಗು ಹುಟ್ಟಿತ್ತು. ಆ ಮಗುವಿಗೆ ಝೋರೋವರ್ ಧವನ್ ಅಂತ ಹೆಸರಿಟ್ಟಿದ್ದರು. ಇವರಿಬ್ಬರ ಪ್ರೀತಿ ಫೇಸ್​ಬುಕ್​ನಿಂದ ಆರಂಭವಾಗಿತ್ತಂತೆ. ಅಂಗ್ಲೋ ಇಂಡಿಯನ್ ಆಗಿರುವ ಅಯೇಷಾ ಆಸ್ಟ್ರೇಲಿಯಾದಲ್ಲಿ ಕಿಕ್ ಬಾಕ್ಸಿಂಗ್ ಕ್ರೀಡಾಪಟುವಾಗಿದ್ದರು.

Last Updated : Sep 8, 2021, 11:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.