ETV Bharat / sports

ಪ್ರೇಯಸಿಯೊಂದಿಗೆ ಶಾರ್ದುಲ್ ಠಾಕೂರ್ ನಿಶ್ಚಿತಾರ್ಥ,ವಿಶ್ವಕಪ್​ ನಂತರ ವಿವಾಹ

author img

By

Published : Nov 29, 2021, 4:15 PM IST

ಕೋವಿಡ್​-19 ಭೀತಿ ಇರುವುದರಿಂದ ಶಾರ್ದೂಲ್-ಮಿಥಾಲಿಗೆ ಹತ್ತಿರದ ಸ್ನೇಹಿತರು ಮತ್ತು ಕುಟುಂಬಸ್ಥರು ಮಾತ್ರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಜೋಡಿ ಆಸ್ಟ್ರೇಲಿಯಾದಲ್ಲಿ 2022ಕ್ಕೆ ನಡೆಯಲಿರುವ ವಿಶ್ವಕಪ್​ ನಂತರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ತಿಳಿದು ಬಂದಿದೆ..

Shardul Thakur engaged with longtime girlfriend  Mittali Parulkar
ಶಾರ್ದುಲ್ ಠಾಕೂರ್ ನಿಶ್ಚಿತಾರ್ಥ

ಮುಂಬೈ : ಭಾರತ ತಂಡದ ಗೋಲ್ಡನ್​ ಆರ್ಮ್​ ಬೌಲರ್​​ ಶಾರ್ದೂಲ್ ಠಾಕೂರ್​ ತಮ್ಮ ದೀರ್ಘಕಾಲದ ಪ್ರೇಯಸಿ ಮಿಥಾಲಿ ಪಾರುಲ್ಕರ್​ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮುಂಬೈ ಕ್ರಿಕೆಟ್​ ಅಸೋಸಿಯೇಷನ್​ ಬಿಕೆಸಿ ಹಾಲ್​ನಲ್ಲಿ ಸೋಮವಾರ ನಿಶ್ಚಿತಾರ್ಥ ಕಾರ್ಯಕ್ರಮ ನಡಿದಿದೆ.

ಕೋವಿಡ್​-19 ಭೀತಿ ಇರುವುದರಿಂದ ಶಾರ್ದೂಲ್-ಮಿಥಾಲಿಗೆ ಹತ್ತಿರದ ಸ್ನೇಹಿತರು ಮತ್ತು ಕುಟುಂಬಸ್ಥರು ಮಾತ್ರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಜೋಡಿ ಆಸ್ಟ್ರೇಲಿಯಾದಲ್ಲಿ 2022ಕ್ಕೆ ನಡೆಯಲಿರುವ ವಿಶ್ವಕಪ್​ ನಂತರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ತಿಳಿದು ಬಂದಿದೆ.

ಶಾರ್ದೂಲ್ ಠಾಕೂರ್​ ಕೊನೆಯ ಬಾರಿ ಯುಎಇಯಲ್ಲಿ ನಡೆದಿದ್ದ 2021ರ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡದಲ್ಲಿ ಕಾಣಿಸಿದ್ದರು. 2 ಪಂದ್ಯಗಳಲ್ಲಿ ಅವಕಾಶ ಪಡೆದಿದ್ದ ಅವರು, ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ನಂತರ ನ್ಯೂಜಿಲ್ಯಾಂಡ್ ವಿರುದ್ಧ ನಡೆದಿದ್ದ ಟಿ20 ಸರಣಿ ಮತ್ತು ಟೆಸ್ಟ್​ ಸರಣಿಯಿಂದ ಬಿಸಿಸಿಐ ವಿಶ್ರಾಂತಿ ನೀಡಿತ್ತು.

ಶಾರ್ದೂಲ್ ಭಾರತದ ಪರ 4 ಟೆಸ್ಟ್​, 15 ಏಕದಿನ ಮತ್ತು 24 ಟಿ20 ಪಂದ್ಯಗಳನ್ನಾಡಿದ್ದು, 67 ವಿಕೆಟ್​ ಪಡೆದಿದ್ದಾರೆ.

ಇದನ್ನೂ ಓದಿ:ಹರ್ಭಜನ್​ ಸಿಂಗ್​ ಹಿಂದಿಕ್ಕಿದ ಅಶ್ವಿನ್ : ಭಾರತದ ಪರ ಹೆಚ್ಚು ವಿಕೆಟ್ ಪಡೆದ 3ನೇ ಬೌಲರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.