ETV Bharat / sports

Shakib Al Hasan: ಏಷ್ಯಾಕಪ್, ವಿಶ್ವಕಪ್​ನಲ್ಲಿ ಬಾಂಗ್ಲಾ ತಂಡಕ್ಕೆ ಶಕೀಬ್ ಕ್ಯಾಪ್ಟನ್‌​​

author img

By

Published : Aug 11, 2023, 10:00 PM IST

ಬೆನ್ನು ನೋವಿನ ಕಾರಣ ನಾಯಕತ್ವದಿಂದ ತಮೀಮ್​ ಇಕ್ಬಾಲ್​ ಹಿಂದೆ ಸರಿದ ನಂತರ ಅವರ ಸ್ಥಾನಕ್ಕೆ ಶಕೀಬ್​ ಅಲ್​ ಹಸನ್​ ಅವರನ್ನು ಬಿಸಿಬಿ ನೇಮಿಸಿದೆ.

Shakib Al Hasan
Shakib Al Hasan

ಢಾಕಾ (ಬಾಂಗ್ಲಾದೇಶ): ಆಲ್‌ರೌಂಡರ್, ಅನುಭವಿ ಆಟಗಾರ ಶಕೀಬ್ ಅಲ್ ಹಸನ್ ಮತ್ತೊಮ್ಮೆ ಬಾಂಗ್ಲಾದೇಶದ ಏಕದಿನ ಕ್ರಿಕೆಟ್‌ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಮುಂದೆ ನಡೆಯಲಿರುವ ಏಷ್ಯಾಕಪ್ ಮತ್ತು 2023ರ ವಿಶ್ವಕಪ್‌ನಲ್ಲಿ ರಾಷ್ಟ್ರೀಯ ತಂಡ ಮುನ್ನಡೆಸಲಿದ್ದಾರೆ.

ಬಾಂಗ್ಲಾ ಕ್ರಿಕೆಟ್​ ತಂಡದ ನಾಯಕ ತಮೀಮ್​ ಇಕ್ಬಾಲ್​ ಇತ್ತೀಚೆಗೆ ರಾಷ್ಟ್ರೀಯ ತಂಡಕ್ಕೆ ವಿಶ್ವಕಪ್​ಗೂ ಮುನ್ನ ನಿವೃತ್ತಿ ಘೋಷಿಸುವುದಾಗಿ ತಿಳಿಸಿದ್ದರು. ಹೀಗಾಗಿ ಅವರ ಬದಲಿ ನಾಯಕನಾಗಿ ಶಕೀಬ್​ ಅವರನ್ನು ಕ್ರಿಕೆಟ್​ ಮಂಡಳಿ ನೇಮಿಸಿದೆ. ಇಕ್ಬಾಲ್​ ಬೆನ್ನು ನೋವಿನ ಕಾರಣ ಏಷ್ಯಕಪ್​ನಿಂದ ಹೊರಗುಳಿಯುವುದಾಗಿ ಹೇಳಿದ್ದರು. ಹೀಗಾಗಿ ವಿಶ್ವಕಪ್​ ಮತ್ತು ಏಷ್ಯಾಕಪ್​ಗೆ ಶಕೀಬ್​ ನಾಯಕರಾಗಿರಲಿದ್ದಾರೆ. ಅಲ್ಲದೇ ವಿಶ್ವಕಪ್​ಗೂ ಮುನ್ನ ಬಾಂಗ್ಲಾದಲ್ಲಿ ನಡೆಯಲಿರುವ ನ್ಯೂಜಿಲೆಂಡ್​ ಸರಣಿಗೂ ಹಸನ್​​ ನಾಯಕತ್ವ ಇರಲಿದೆ.

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಅಧ್ಯಕ್ಷ ನಜ್ಮುಲ್ ಹಸನ್ ಪತ್ರಿಕಾಗೋಷ್ಠಿ ಕರೆದು ಮಾಹಿತಿ ನೀಡಿದ್ದಾರೆ. "ಶಕೀಬ್ ಅಲ್ ಹಸನ್ ಏಷ್ಯಾ ಕಪ್, ನ್ಯೂಜಿಲೆಂಡ್ ಸರಣಿ ಮತ್ತು ವಿಶ್ವಕಪ್‌ಗೆ ನಾಯಕರಾಗಿದ್ದಾರೆ. ಅವರು ಬಾಂಗ್ಲಾದೇಶಕ್ಕೆ (ಸದ್ಯ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿದ್ದಾರೆ ಶಕೀಬ್​) ಹಿಂದಿರುಗಿದಾಗ ಮಾತನಾಡುತ್ತೇವೆ. ಅವರ ದೀರ್ಘಾವಧಿ ನಾಯಕತ್ವವನ್ನು ನಂತರ ಪ್ರಕಟಿಸುತ್ತೇವೆ. ಈಗ ಅವರೊಂದಿಗೆ ಕರೆ ಮಾಡಿ ಮಾತನಾಡಿದ್ದೇವೆ. ದೀರ್ಫಾವದಿಗೆ ಅವರು ಯಾವ ಮಾದರಿಯ ನಾಯಕತ್ವವನ್ನು ವಹಿಸಿಕೊಳ್ಳುತ್ತಾರೆ ಎಂಬುದು ಅವರಿಗೆ ಬಿಟ್ಟ ವಿಚಾರ" ಎಂದು ಹೇಳಿದ್ದಾರೆ.

"ತಂಡವನ್ನು ಯಾರು ಮುನ್ನಡೆಸುತ್ತಾರೆ ಎಂಬುದಕ್ಕೆ ಹಸನ್​ ನಮ್ಮ ಮೊದಲ ಆದ್ಯತೆ. ಅವರು ಸ್ಪಷ್ಟ ಆಯ್ಕೆ. ವಿಶ್ವಕಪ್​ ಮತ್ತು ಏಷ್ಯಕಪ್​ ಒಂದೇ ತಂಡ ಇರಲಿದೆ. ನಾಯಕ ಇಕ್ಬಾಲ್​ ಸ್ಥಾನ ತೆರವಾಗಿದ್ದು ಅಲ್ಲಿಗೆ ಆಟಗಾರರನ ಹುಡುಕಾಟ ನಡೆಯುತ್ತಿದೆ. ಏಷ್ಯಾಕಪ್​ನಲ್ಲಿ ಕೆಲ ಪ್ರಯೋಗಗಳನ್ನು ತಂಡ ಮಾಡುತ್ತದೆ. ಅದರಂತೆ ವಿಶ್ವಕಪ್​ನ ಆಯ್ಕೆ ನಡೆಯಲಿದೆ. ನ್ಯೂಜಿಲೆಂಡ್​ ಸರಣಿ ಮತ್ತು ವಿಶ್ವಕಪ್​ ವೇಳೆಗೆ ಇಕ್ಬಾಲ್ ಚೇತರಿಸಿಕೊಂಡಲ್ಲಿ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ" ಎಂದು ಹಸನ್​ ಇದೇ ವೇಳೆ ತಿಳಿಸಿದರು.

ಶಕೀಬ್ ಪ್ರಸ್ತುತ ಎಲ್ಲಾ ಮೂರು ರೂಪಗಳಲ್ಲಿ ಬಾಂಗ್ಲಾದೇಶದ ನಾಯಕರಾಗಿದ್ದಾರೆ. ಕಳೆದ ವರ್ಷ ಟೆಸ್ಟ್ ಮತ್ತು ಟಿ20 ನಾಯಕರಾಗಿ ತಮ್ಮ ಮೂರನೇ ಅಧಿಕಾರಾವಧಿಯನ್ನು ಪ್ರಾರಂಭಿಸಿದರು. ಸ್ಟಾರ್ ಆಲ್ ರೌಂಡರ್ ಇದುವರೆಗೆ ಬಾಂಗ್ಲಾದೇಶವನ್ನು 19 ಟೆಸ್ಟ್ ಮತ್ತು 39 ಟಿ20 ಗಳಲ್ಲಿ ಮುನ್ನಡೆಸಿದ್ದಾರೆ. ಶಕೀಬ್ 2009 ಮತ್ತು 2011 ರ ನಡುವೆ 49 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬಾಂಗ್ಲಾದೇಶವನ್ನು ಮುನ್ನಡೆಸಿದ್ದು, 22ರಲ್ಲಿ ಗೆಲುವು ಕಂಡಿದ್ದಾರೆ.

ಇದನ್ನೂ ಓದಿ: Tamim Iqbal: ಏಷ್ಯಾಕಪ್​, ವಿಶ್ವಕಪ್​ಗೂ ಮುನ್ನ ಮಹತ್ವದ ನಿರ್ಧಾರ ಪ್ರಕಟಿಸಿದ ಬಾಂಗ್ಲಾ ಕ್ರಿಕೆಟ್‌ ನಾಯಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.