ETV Bharat / sports

ಕಾನ್ವೆ ಕ್ರೀಸಿನಲ್ಲಿದ್ದಾಗ ಭಾರತದ ಈ ಆಟಗಾರನಂತೆ ಭಾಸವಾಗುತ್ತದೆ : ವೆಲ್ಲಿಂಗ್ಟನ್ ಕೋಚ್​

author img

By

Published : Jun 22, 2021, 7:42 PM IST

ಎಂತಹದೇ ಗೊಂದಲಗಳಿದ್ದರೂ ಅವುಗಳನ್ನೆಲ್ಲಾ ತೊಡೆದು ಬ್ಯಾಟಿಂಗ್ ಮಾಡುವ ಕಲೆಯನ್ನು ಕಾನ್ವೆ ಕರಗತ ಮಾಡಿಕೊಂಡಿದ್ದಾರೆ. ಅವರು ವೆಲ್ಲಿಂಗ್ಟನ್​ನಲ್ಲಿ ವಿಕೆಟ್​ ಕೀಪರ್​ ಆಗಿ ವೃತ್ತಿ ಆರಂಭಿಸಿದರು. ಅವರಲ್ಲಿ ಜಡೇಜಾ ಅವರ ಒಂದು ನೋಟವನ್ನು ನಾನು ನೋಡಿದ್ದೇನೆ. ಆದರೆ, ಇದರ ಬಗ್ಗೆ ಇನ್ನೂ ಖಚಿತವಾಗಿಲ್ಲ ಎಂದು ಕಾನ್ವೆ ಕೂಡ ಜಡೇಜಾರಂತೆ ಬಹುಮುಖ ಪ್ರತಿಭೆ..

ಡಿವೋನ್ ಕಾನ್ವೆ
ಡಿವೋನ್ ಕಾನ್ವೆ

ನವದೆಹಲಿ : ನ್ಯೂಜಿಲೆಂಡ್‌ನ ಬ್ಯಾಟ್ಸ್‌ಮನ್ ಡೆವೊನ್ ಕಾನ್ವೆ ಕ್ರೀಸ್‌ನಲ್ಲಿದ್ದಾಗ ಅವರ ಕೌಶಲ್ಯಗಳ ಮೇಲೆ ಪರಿಣಾಮ ಬೀರಬಹುದಾದ ಎಲ್ಲ ಗೊಂದಲಗಳನ್ನು ಹೊರ ತೆಗೆಯುವ ಅದ್ಭುತ ಸಾಮರ್ಥ್ಯವಿದೆ ಎಂದಿರುವ ವೆಲ್ಲಿಂಗ್ಟನ್ ಕೋಚ್​ ಗ್ಲೇನ್​ ಪೊಕ್ನಾಲ್, ಕಾನ್ವೆ ಅವರಲ್ಲಿ ತಾವೂ ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ಕಾಣುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಜೋಹನ್‌ಬರ್ಗ್ಸ್​ನಲ್ಲಿ ಜನಿಸಿದ ಕಾನ್ವೆ ನ್ಯೂಜಿಲ್ಯಾಂಡ್​ ಪರವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಇಂಗ್ಲೆಂಡ್​ ವಿರುದ್ದ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಅವರು ಭರ್ಜರಿ ದ್ವಿಶತಕ ಸಿಡಿಸಿದ್ದರು. ಈ ಸಾಧನೆ ಮಾಡಿದ ವಿಶ್ವದ ಕೇವಲ 6ನೇ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದರು.

2017ರಲ್ಲಿ ನ್ಯೂಜಿಲ್ಯಾಂಡ್​ಗೆ ಆಗಮಿಸಿದ ಅವರು 2018ರಲ್ಲಿ ವೆಲ್ಲಿಂಗ್ಟನ್​ ತಂಡದಲ್ಲಿ ಒಪ್ಪಂದ ಪಡೆದರು. ಆ ಆವೃತ್ತಿಯ ಪ್ಲಂಕೇಟ್ ಶೀಲ್ಡ್​ ಟ್ರೋಫಿಯಲ್ಲಿ ಗರಿಷ್ಠ ರನ್​ ಬಾರಿಸಿದರು. ನಂತರ ಸೂಪರ್​ ಸ್ಮ್ಯಾಶ್ ಸೇರಿದಂತೆ ಸತತ ದೇಶಿ ಋತುವಿನಲ್ಲಿ ರನ್​ಗಳಿಸಿದ ನಂತರ ಕಿವೀಸ್ ಪರ ಮೂರು ಮಾದರಿಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿ ಮಿಂಚುತ್ತಿದ್ದಾರೆ.

"ಎಂತಹದೇ ಗೊಂದಲಗಳಿದ್ದರೂ ಅವುಗಳನ್ನೆಲ್ಲಾ ತೊಡೆದು ಬ್ಯಾಟಿಂಗ್ ಮಾಡುವ ಕಲೆಯನ್ನು ಕಾನ್ವೆ ಕರಗತ ಮಾಡಿಕೊಂಡಿದ್ದಾರೆ. ಅವರು ವೆಲ್ಲಿಂಗ್ಟನ್​ನಲ್ಲಿ ವಿಕೆಟ್​ ಕೀಪರ್​ ಆಗಿ ವೃತ್ತಿ ಆರಂಭಿಸಿದರು. ಅವರಲ್ಲಿ ಜಡೇಜಾ ಅವರ ಒಂದು ನೋಟವನ್ನು ನಾನು ನೋಡಿದ್ದೇನೆ. ಆದರೆ, ಇದರ ಬಗ್ಗೆ ಇನ್ನೂ ಖಚಿತವಾಗಿಲ್ಲ ಎಂದು ಕಾನ್ವೆ ಕೂಡ ಜಡೇಜಾರಂತೆ ಬಹುಮುಖ ಪ್ರತಿಭೆ ಎಂದು ಗ್ಲೇನ್ ತಿಳಿಸಿದ್ದಾರೆ.

ಅಲ್ಲದೆ ಕಾನ್ವೆ ಪರಿಸ್ಥಿತಿಗೆ ತಕ್ಕಂತೆ ಗೇರ್ ಬದಲಿಸುವುದಕ್ಕೆ ಸಮರ್ಥರು. ಈ ಬ್ಯಾಟ್ಸ್​ಮನ್ ಹೊಂದಿರಬೇಕಾದ ಅದ್ಭುತ ಕೌಶಲ್ಯಗಳು. ಮಾನಸಿಕ ಅನ್ವಯಿಕೆ ಮತ್ತು ಹೊಂದಿಕೊಳ್ಳುವ ಸಾಮರ್ಥ್ಯ ಅದ್ಭುತವಾಗಿದೆ ಎಂದು ತೋರಿಸುತ್ತದೆ ಎಂದು ಗ್ಲೇನ್​ ಪೊಕ್ನಾಲ್ ಹೇಳಿದ್ದಾರೆ.

ಇದನ್ನು ಓದಿ:ಕೋಪ ಕೆಲಸಕ್ಕೆ ಬರಲ್ಲ, ಅದನ್ನು ನಿಯಂತ್ರಿಸಿದ ಮೇಲೆ ನನಗೆ ಯಶಸ್ಸು ಸಿಕ್ಕಿತು: ಬುಮ್ರಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.