ETV Bharat / sports

ಓಣಂ ಖಾದ್ಯ ಸವಿದ ಸಾಕ್ಷಿ, ಜೀವಾ ಸಿಂಗ್​​ ಧೋನಿ : ಇನ್ಸ್​ಟಾದಲ್ಲಿ ಫೋಟೋ ಹಂಚಿಕೆ

author img

By

Published : Aug 22, 2021, 5:15 AM IST

Updated : Aug 22, 2021, 2:57 PM IST

ಓಣಂ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಣೆ ಮಾಡಿರುವ ಸಾಕ್ಷಿ ಧೋನಿ ಓಣಂ ಸಾದ್ಯವನ್ನು ತನ್ನ ಮಗಳು ಜೀವಾ ಸಿಂಗ್ ಧೋನಿಯೊಂದಿಗೆ ಸವಿದು ಹಬ್ಬವನ್ನು ಸಂಭ್ರಮಿಸಿದ್ದಾರೆ.

Sakshi Singh Dhoni Celebrate Onam With Traditional Thali
ಓಣಂ ಸಾದ್ಯ ಸವಿದ ಸಾಕ್ಷಿ, ಜೀವಾ ಸಿಂಗ್​​ ಧೋನಿ: ಇನ್ಸ್​ಟಾದಲ್ಲಿ ಫೋಟೋ ಹಂಚಿಕೆ

ಟೀಂ ಇಂಡಿಯಾದ ಮಾಜಿ ನಾಯಕ, ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಸಿಂಗ್ ಧೋನಿ ಓಣಂ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಣೆ ಮಾಡಿದ್ದು, ಓಣಂ ಸಾದ್ಯವನ್ನು ( 22 ವಿವಿಧ ಸಾಂಪ್ರದಾಯಿಕ ಭಕ್ಷ್ಯಗಳು) ಸವಿದು ಹಬ್ಬವನ್ನು ಸಂಭ್ರಮಿಸಿದ್ದಾರೆ.

ಕೇರಳದ ಚೋರ್ , ಅವಿಯಲ್, ಪರಿಪ್ಪು, ಸಾಂಬಾರ್, ಪಪ್ಪಡಮ್ , ಓಲನ್, ಉಪ್ಪೇರಿ (ಮಲೆಯಾಳಂ ಹೆಸರುಗಳು) ಮುಂತಾದ ಭಕ್ಷ್ಯಗಳಿರುವ ಬಾಳೆ ಎಲೆಯ ಫೋಟೋ ಅನ್ನು ಸಾಕ್ಷಿ ಸಿಂಗ್ ಧೋನಿ ಇನ್ಸ್​ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಓಣಂ ಅಸಮಸಕಲ್ ಎಂದು ಓಣಂ ಶುಭಾಶಯ ಕೋರಿದ್ದಾರೆ.

Sakshi Singh Dhoni Celebrate Onam With Traditional Thali
ಓಣಂ ಸಾದ್ಯ

ಸಾಕ್ಷಿ ಮಾತ್ರವಲ್ಲದೇ ಸಾಕ್ಷಿ ಪುತ್ರಿ ಜೀವಾ ಸಿಂಗ್ ಧೋನಿ ಕೂಡಾ ಅದೇ ತೆರನಾದ ಬಾಳೆ ಎಲೆಯಲ್ಲಿ ಊಟ ಮಾಡುವ ಫೋಟೋವನ್ನು ಇನ್ಸ್​ಟಾದಲ್ಲಿ ಹಂಚಿಕೊಳ್ಳಲಾಗಿದೆ. ಟೇಬಲ್ ಮೇಲೆ ಬಟ್ಟಲು ಹರಡಿಕೊಂಡಿರುವುದು ಫೋಟೋದಲ್ಲಿ ಗೊತ್ತಾಗುತ್ತದೆ.

ವಿವಿಧ ಭಕ್ಷ್ಯಗಳ ಬಗ್ಗೆ ಸಾಕ್ಷಿ ಇನ್ಸ್​ಟಾದಲ್ಲಿ ಪೋಸ್ಟ್ ಮಾಡುತ್ತಿರುವುದು ಇದೇ ಮೊದಲಲ್ಲ. ಕೆಲವು ದಿನಗಳ ಹಿಂದೆ ಬಾಲ್​ ಮಿಠಾಯಿಯ ಫೋಟೋ ಅನ್ನು ಹಂಚಿಕೊಂಡಿದ್ದು, ಈ ಮಿಠಾಯಿ ನನಗೆ ತುಂಬಾ ಇಷ್ಟ ಎಂದು ಬರೆದುಕೊಂಡಿದ್ದರು.

Last Updated :Aug 22, 2021, 2:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.