ETV Bharat / sports

ಸಚಿನ್ ತೆಂಡೂಲ್ಕರ್, ಸಿಎಂ ಸಿದ್ದರಾಮಯ್ಯ ಆಕಸ್ಮಿಕ ಭೇಟಿ: ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡ ನಾಯಕರು

author img

By ETV Bharat Karnataka Team

Published : Jan 4, 2024, 9:13 PM IST

ಸಚಿನ್ ತೆಂಡೂಲ್ಕರ್, ಸಿಎಂ ಸಿದ್ದರಾಮಯ್ಯ ಆಕಸ್ಮಿಕ ಭೇಟಿಯಾದರು. ದೆಹಲಿಯ ವಿಮಾನ ನಿಲ್ದಾಣದಲ್ಲಿ ಈ ಇಬ್ಬರು ಘಟಾನುಗಟಿಗಳು ಪರಿಸ್ಪರ ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ.

Sachin Tendulkar  CM Siddaramaiah  Sachin Siddaramaiah meet  ಸಚಿನ್ ಸಿದ್ದರಾಮಯ್ಯ ಭೇಟಿ  ಸಚಿನ್ ತೆಂಡೂಲ್ಕರ್  ಸಿಎಂ ಸಿದ್ದರಾಮಯ್ಯ
ಸಚಿನ್ ತೆಂಡೂಲ್ಕರ್, ಸಿಎಂ ಸಿದ್ದರಾಮಯ್ಯ ಆಕಸ್ಮಿಕ ಭೇಟಿ: ದೆಹಲಿಯಲ್ಲಿ ಕುಶಲೋಪರಿ ವಿಚಾರಿಸಿಕೊಂಡ ಘಟಾನುಗಟಿಗಳು

ನವದೆಹಲಿ/ಬೆಂಗಳೂರು: ಜಗತ್ತು ಕಂಡ ಅಪರೂಪದ ಕ್ರಿಕೆಟ್ ತಾರೆ, ಟೀಂ ಇಂಡಿಯಾ ಮಾಜಿ ಆಟಗಾರ ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕಸ್ಮಿಕವಾಗಿ ಭೇಟಿಯಾದರು.

Sachin Tendulkar, CM Siddaramaiah meet
ಸಚಿನ್ ತೆಂಡೂಲ್ಕರ್, ಸಿಎಂ ಸಿದ್ದರಾಮಯ್ಯ ಆಕಸ್ಮಿಕ ಭೇಟಿ

ಕೇಂದ್ರದ ಮಾಜಿ ಹಣಕಾಸು ಸಚಿವ ಚಿದಂಬರಂ ಅವರ ಅಧ್ಯಕ್ಷತೆಯಲ್ಲಿ ದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಣಾಳಿಕೆ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು. ರಾಜ್ಯಕ್ಕೆ ಮರಳುವ ವೇಳೆ ದೆಹಲಿಯ ವಿಮಾನ ನಿಲ್ದಾಣದಲ್ಲಿ ಇಂದು (ಶುಕ್ರವಾರ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿನ್ ತೆಂಡೂಲ್ಕರ್ ಅವರನ್ನು ಆಕಸ್ಮಿಕವಾಗಿ ಭೇಟಿಯಾಗಿ ಕುಶಲೋಪಹರಿ ವಿಚಾರಿಸಿ ಕೆಲ ಹೊತ್ತು ಮಾತುಕತೆಯಲ್ಲಿ ತೊಡಗಿದರು.

  • ಜಾಗತಿಕ ಕ್ರಿಕೆಟ್‌ನ ದಂತಕಥೆ, ಲಿಟ್ಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಇಂದು ದೆಹಲಿಯ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ ಎದುರಾದ ವೇಳೆ ಕುಶಲೋಪರಿ ವಿಚಾರಿಸಿ, ಪ್ರೀತಿಯಿಂದ ಬೀಳ್ಕೊಟ್ಟೆ.
    ಸಚಿನ್ ತೆಂಡೂಲ್ಕರ್ ನನ್ನ ಅಚ್ಚುಮೆಚ್ಚಿನ ಆಟಗಾರ, ದಶಕಗಳ ಕಾಲ ತೆಂಡೂಲ್ಕರ್ ಅವರ ಆಟವನ್ನು ಆಸ್ವಾದಿಸಿದ್ದೇನೆ.
    - ಮುಖ್ಯಮಂತ್ರಿ @siddaramaiahpic.twitter.com/49bjLJPFbz

    — CM of Karnataka (@CMofKarnataka) January 4, 2024 " class="align-text-top noRightClick twitterSection" data=" ">

ಕ್ರಿಕೆಟ್ ಜಗತ್ತಿನ ಅತಿದೊಡ್ಡ ತಾರೆಯಾಗಿ ಮೆರೆದಿದ್ದ ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲಕಾಲ ಆತ್ಮೀಯವಾಗಿ ಮಾತನಾಡಿದರು.

ಇದನ್ನೂ ಓದಿ: ಎರಡೇ ದಿನಕ್ಕೆ ಮುಗಿದ ಟೆಸ್ಟ್​: ಸರಣಿ ಸಮಬಲ, ಟೀಂ ಇಂಡಿಯಾಗೆ ಹೊಸ ವರ್ಷದ ಮೊದಲ ಗೆಲುವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.