ETV Bharat / sports

ಹರಿಣಗಳ ನಾಡಿನಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲ್ಲಲು ಅಭ್ಯಾಸ ಆರಂಭಿಸಿದ ಕೊಹ್ಲಿ ಪಡೆ

author img

By

Published : Jan 1, 2022, 11:00 PM IST

ಭಾರತ ತಂಡ ಸೆಂಚುರಿಯನ್​ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್​ ಪಂದ್ಯವನ್ನು 113 ರನ್​ಗಳಿಂದ ಗೆದ್ದು 3 ಪಂದ್ಯಗಳ ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿದೆ. 2021ಅನ್ನು ಅವಿಸ್ಮರಣೀಯ ಗೆಲುವಿನೊಂದಿಗೆ ಮುಗಿಸಿರುವ ಕೊಹ್ಲಿ ಪಡೆ 2022ರಲ್ಲಿ ಅಭೂತಪರ್ವ ಜಯಕ್ಕಾಗಿ ಹಾತೊರೆಯುತ್ತಿದೆ. ಒಂದು ವೇಳೆ ಜೋಹನ್ಸ್​ಬರ್ಗ್​ನಲ್ಲಿ ಭಾರತ ಗೆದ್ದರೆ ಹರಿಣಗಳ ನಾಡಿನಲ್ಲಿ ಭಾರತಕ್ಕೆ ಚೊಚ್ಚಲ ಸರಣಿ ಗೆದ್ದಂತಾಗುತ್ತದೆ.

Team India hits the ground running ahead of second Test
ಭಾರತ ತಂಡ ಅಭ್ಯಾಸ

ಜೋಹನ್ಸ್​ಬರ್ಗ್​: ಸೆಂಚುರಿಯನ್​ ಟೆಸ್ಟ್​ನಲ್ಲಿ ಐತಿಹಾಸಿಕ ಜಯ ಸಾಧಿಸಿರುವ ಭಾರತ ತಂಡ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಅವರದ್ದೇ ನೆಲದಲ್ಲಿ ಐತಿಹಾಸಿಕ ಟೆಸ್ಟ್​ ಸರಣಿ ಗೆಲ್ಲುವುದಕ್ಕಾಗಿ ಹೊಸ ವರ್ಷದ ದಿನವೇ ಮೈದಾನಕ್ಕಿಳಿದು ಅಭ್ಯಾಸ ಆರಂಭಿಸಿದೆ.

ಭಾರತ ತಂಡ ಸೆಂಚುರಿಯನ್​ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್​ ಪಂದ್ಯವನ್ನು 113 ರನ್​ಗಳಿಂದ ಗೆದ್ದು 3 ಪಂದ್ಯಗಳ ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿದೆ. 2021ಅನ್ನು ಅವಿಸ್ಮರಣೀಯ ಗೆಲುವಿನೊಂದಿಗೆ ಮುಗಿಸಿರುವ ಕೊಹ್ಲಿ ಪಡೆ 2022ರಲ್ಲಿ ಅಭೂತಪರ್ವ ಜಯಕ್ಕಾಗಿ ಹಾತೊರೆಯುತ್ತಿದೆ. ಒಂದು ವೇಳೆ ಜೋಹನ್ಸ್​ಬರ್ಗ್​ನಲ್ಲಿ ಭಾರತ ಗೆದ್ದರೆ ಹರಿಣಗಳ ನಾಡಿನಲ್ಲಿ ಭಾರತಕ್ಕೆ ಚೊಚ್ಚಲ ಸರಣಿ ಗೆದ್ದಂತಾಗುತ್ತದೆ.

ನಾವು 2ನೇ ಟೆಸ್ಟ್​ಗೆ ತಯಾರಿಗಾಗಿ ವಾಂಡರರ್ಸ್​ನಲ್ಲಿದ್ದೇವೆ.ಹೊಸ ದಿನ, ಹೊಸ ವರ್ಷ , ಹೊಸ ಆರಂಭ. ಅದೇ ಗಮನ, ಹೀಗೆ ಮುನ್ನುಗ್ಗು ಟೀಮ್ ಇಂಡಿಯಾ ಎಂದು ಬಿಸಿಸಿಐ 32 ಸೆಕೆಂಡ್​ಗಳ ವಿಡಿಯೋ ಜೊತೆಗೆ ಒಂದಷ್ಟು ಅಭ್ಯಾಸ ಫೋಟೋಗಳನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದೆ.

ಈ ವಿಡಿಯೋದಲ್ಲಿ ಆಟಗಾರರೆಲ್ಲಾ ಮೈದಾನದಲ್ಲಿ ಓಡುತ್ತಿರುವುದು ಸೀನಿಯರ್ ಬೌಲರ್​ ಇಶಾಂತ್ ಶರ್ಮಾ ಬೌಲಿಂಗ್ ಮಾಡುತ್ತಿರುವುದು, ನಾಯಕ ವಿರಾಟ್​ ಕೊಹ್ಲಿ ಬ್ಯಾಟಿಂಗ್ ಮತ್ತು ಮುಖ್ಯಕೋಚ್ ರಾಹುಲ್ ದ್ರಾವಿಡ್​ ಹಿರಿಯ ಬ್ಯಾಟರ್​ ಚೇತೇಶ್ವರ್ ಪೂಜಾರ ಅವರೊಂದಿಗೆ ಮಾತನಾಡುತ್ತಿರುವು ತುಣಕುಗಳು ಸೇರಿವೆ.

ಇದನ್ನೂ ಓದಿ:2022 ಭಾರತೀಯ ಕ್ರಿಕೆಟ್​ಗೆ ಅತ್ಯಂತ ಬಿಡುವಿಲ್ಲದ ವರ್ಷ : ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.