ETV Bharat / sports

ಪಂಜಾಬ್​ ಕಿಂಗ್ಸ್​ ವಿರುದ್ಧ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್​ಸಿಬಿ

author img

By

Published : Oct 3, 2021, 3:10 PM IST

Updated : Oct 3, 2021, 3:15 PM IST

ಆರ್​ಸಿಬಿ ಇಂದಿನ ಪಂದ್ಯವನ್ನು ಗೆದ್ದರೆ, ಅಧಿಕೃತವಾಗಿ ಪ್ಲೇ ಆಫ್​ ಪ್ರವೇಶಿಸಲಿದೆ. ಆರ್​ಸಿಬಿ 11 ಪಂದ್ಯಗಳಿಂದ 7 ಜಯ ಮತ್ತು 4 ಸೋಲಿನೊಂದಿಗೆ 14 ಅಂಕ ಪಡೆದಿದ್ದು, 3ನೇ ಸ್ಥಾನದಲ್ಲಿದೆ. ಈ ಪಂದ್ಯವಲ್ಲದೆ ಇನ್ನೂ 2 ಪಂದ್ಯಗಳಿದ್ದು, ಲೀಗ್​ನಲ್ಲಿ ಮೊದಲೆರಡು ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದೆ.

RCB vs PBKS
ಬೆಂಗಳೂರು vs ಪಂಜಾಬ್

ಶಾರ್ಜಾ: ಪ್ಲೇ ಆಫ್​ ಕನಸಿನಲ್ಲಿರುವ ಪಂಜಾಬ್​ ಕಿಂಗ್ಸ್ ವಿರುದ್ಧ ಟಾಸ್​ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್​ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಆರ್​ಸಿಬಿ ಈಗಾಗಲೆ 3ನೇ ಸ್ಥಾನದಲ್ಲಿದ್ದು ಪ್ಲೇ ಆಫ್ ಹೊಸ್ತಿಲಲ್ಲಿದೆ. ಇಂದಿನ ಪಂದ್ಯವನ್ನು ಗೆದ್ದರೆ, ಅಧಿಕೃತವಾಗಿ ಪ್ಲೇ ಆಫ್​ ಪ್ರವೇಶಿಸಲಿದೆ. ಆರ್​ಸಿಬಿ 11 ಪಂದ್ಯಗಳಿಂದ 7 ಜಯ ಮತ್ತು 4 ಸೋಲಿನೊಂದಿಗೆ 14 ಅಂಕ ಪಡೆದುಕೊಂಡಿದೆ. ಈ ಪಂದ್ಯವಲ್ಲದೆ ಇನ್ನೂ 2 ಪಂದ್ಯಗಳಿದ್ದು, ಲೀಗ್​ನಲ್ಲಿ ಮೊದಲೆರಡು ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದೆ.

ಇತ್ತ ಪಂಜಾಬ್​ ಕಿಂಗ್ಸ್ ತಂಡ ಆಡಿರುವ 12 ಪಂದ್ಯಗಳಲ್ಲಿ 5 ಗೆಲುವು ಮತ್ತು 7 ಸೋಲು ಕಂಡು 5ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಬೆಂಗಳೂರು ತಂಡವನ್ನು ಮಣಿಸಿದರೆ ಕೆಕೆಆರ್​ ತಂಡವನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೆ ಲಗ್ಗೆಯಿಡಲಿದೆ. ಒಂದು ವೇಳೆ ಸೋಲು ಕಂಡರೆ 2021ರ ಐಪಿಎಲ್​ನಲ್ಲಿ ತನ್ನ ಅಭಿಯಾನವನ್ನು ಅಂತ್ಯಗೊಳಿಸಲಿದೆ.

ಇಂದಿನ ಪಂದ್ಯದಲ್ಲಿ ಪಂಜಾಬ್​ ತಂಡ ಮೂರು ಬದಲಾವಣೆ ಮಾಡಿಕೊಂಡಿದೆ. ಗಾಯಗೊಂಡಿರುವ ಫ್ಯಾಬಿಯನ್ ಅಲೆನ್ ಬದಲಿಗೆ ಹರ್​ಪ್ರೀತ್​ ಬ್ರಾರ್​, ದೀಪಕ್ ಹೂಡ ಬದಲಿಗೆ ಸರ್ಫರಾಜ್​ ಖಾನ್​ ಮತ್ತು ನೇಥನ್​ ಎಲ್ಲಿಸ್ ಬದಲಿಗೆ ಮೊಯಿಸಸ್​ ಹೆನ್ರಿಕ್ಸ್​ಗೆ ಅವಕಾಶ ನೀಡಿದೆ.

ಮುಖಾಮುಖಿ:

ಎರಡೂ ತಂಡಗಳು 27 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಪಂಜಾಬ್ 15ರಲ್ಲಿ, ಆರ್​ಸಿಬಿ 12ರಲ್ಲಿ ಗೆಲುವು ಸಾಧಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶ್ರೀಕಾರ್ ಭರತ್ (ವಿಕೀ), ಗ್ಲೆನ್ ಮ್ಯಾಕ್ಸ್​ವೆಲ್, ಎಬಿ ಡಿ ವಿಲಿಯರ್ಸ್, ಡೇನಿಯಲ್ ಕ್ರಿಶ್ಚಿಯನ್, ಜಾರ್ಜ್ ಗಾರ್ಟನ್, ಶಹ್ಬಾಜ್ ಅಹ್ಮದ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಾಲ್

ಪಂಜಾಬ್ ಕಿಂಗ್ಸ್ : ಕೆಎಲ್ ರಾಹುಲ್ (ನಾಯಕ/ವಿಕೀ), ಮಯಾಂಕ್ ಅಗರ್​ವಾಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ಸರ್ಫರಾಜ್ ಖಾನ್, ಶಾರುಖ್ ಖಾನ್, ಮೊಯಿಸಸ್ ಹೆನ್ರಿಕ್ಸ್, ಹರ್​ ಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್

Last Updated : Oct 3, 2021, 3:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.