ETV Bharat / sports

ಭೂಮಿ ಮೇಲೆ 4 ಸಾವಿರ ಹುಲಿಗಳಿವೆ, ಭಾರತ ಕ್ರಿಕೆಟ್​ನಲ್ಲಿ ದ್ರಾವಿಡ್​ ಏಕೈಕ ಹುಲಿ ಎಂದ ರಾಸ್​​ ಟೇಲರ್​

author img

By

Published : Aug 14, 2022, 1:05 PM IST

ನ್ಯೂಜಿಲ್ಯಾಂಡ್​ ಮಾಜಿ ಆಟಗಾರ ರಾಸ್​ ಟೇಲರ್​ ಅವರ ಆತ್ಮಚರಿತ್ರೆಯಾದ ಬ್ಲ್ಯಾಕ್​ ಅಂಡ್​ ವೈಟ್​ ಪುಸ್ತಕದಲ್ಲಿ ರಾಹುಲ್​ ದ್ರಾವಿಡ್​ ಗುಣಗಾನವಿದೆ. ರಾಜಸ್ಥಾನದ ರಣಥಂಬೋರ್​ ಘಟನೆ ಪುಸ್ತಕದಲ್ಲಿ ಪ್ರಸ್ತಾಪವಾಗಿದೆ.

ross-taylor-described-rahul-dravid-as-a-tiger
ರಾಹುಲ್​ ದ್ರಾವಿಡ್​ ಏಕೈಕ ಹುಲಿ ಎಂದ ರಾಸ್​​ ಟೇಲರ್​

ನ್ಯೂಜಿಲ್ಯಾಂಡ್​ ಮಾಜಿ ಕ್ರಿಕೆಟರ್​ ರಾಸ್​ ಟೇಲರ್ ಅವರ ಆತ್ಮಚರಿತ್ರೆ 'ಬ್ಲ್ಯಾಕ್ ಅಂಡ್ ವೈಟ್' ಪುಸ್ತಕದಲ್ಲಿ ಭಾರತದ ಲೆಜೆಂಡರಿ ಕ್ರಿಕೆಟರ್​ ರಾಹುಲ್​ ದ್ರಾವಿಡ್​ ಅವರ ಬಗ್ಗೆ ಗುಣಗಾನ ಮಾಡಲಾಗಿದೆ. ಸೌಮ್ಯ ಸ್ವಭಾವದ ದ್ರಾವಿಡ್​ರನ್ನು ರಾಸ್​ ಹುಲಿಗೆ ಹೋಲಿಸಿ ಬಣ್ಣಿಸಿದ್ದಾರೆ. ಜೊತೆಗೆ ಇಂಡಿಯನ್​ ಪ್ರೀಮಿಯರ್​ ಲೀಗ್​(ಐಪಿಎಲ್​) ಪಂದ್ಯಾವಳಿ ಮತ್ತು ಭಾರತದ ಆಟಗಾರರ ಖ್ಯಾತಿಯ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

ಇದಕ್ಕಾಗಿ ರಾಸ್​​ ಟೇಲರ್​ ದ್ರಾವಿಡ್​ ಅವರ ಜೊತೆಗೂಡಿ ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದಾಗಿನ ಪ್ರಸಂಗವೊಂದನ್ನು ಪುಸ್ತಕದಲ್ಲಿ ವಿವರಿಸಿದ್ದಾರೆ. ರಾಹುಲ್​ ದ್ರಾವಿಡ್​ ಅವರ ಜೊತೆಗೂಡಿ ನಾನು ರಣಥಂಬೋರ್​ ಉದ್ಯಾನವನಕ್ಕೆ ಭೇಟಿ ನೀಡಿದ್ದೆ. ಆಗ ನಾನು ಹುಲಿಯನ್ನು ನೋಡಿದ್ದೀರಾ ಎಂದು ಪ್ರಶ್ನಿಸಿದೆ. ಆಗ ರಾಹುಲ್​ ಅವರು ಇಲ್ಲ. ನಾನಿಲ್ಲಿಗೆ 21 ಸಲ ಬಂದಿದ್ದೇನೆ. ಆದರೆ, ಒಮ್ಮೆಯೂ ಹುಲಿ ಕಂಡಿಲ್ಲ ಎಂದರು.

ಸ್ವಲ್ಪ ದೂರದ ಬಳಿಕ 100 ಮೀಟರ್​ ಅಂತರದಲ್ಲಿ ಹುಲಿಯೊಂದು ಬಂಡೆಯ ಮೇಲೆ ಮಲಗಿತ್ತು. ಇದನ್ನು ಕಂಡು ಪುಳಕಿತರಾದೆವು. ಅಚ್ಚರಿಯ ಘಟನೆ ಎಂದರೆ, ಹುಲಿ ನೋಡಲು ಬಂದಿದ್ದ ಪ್ರವಾಸಿಗರು ರಾಹುಲ್​ ದ್ರಾವಿಡ್​ರನ್ನು ಕಂಡಾಕ್ಷಣ ಎಲ್ಲರೂ ತಮ್ಮ ಕ್ಯಾಮೆರಾಗಳನ್ನು ಇವರತ್ತ ನೆಟ್ಟರು. ಕಾಡು ಹುಲಿಯನ್ನು ಮರೆತೇ ಬಿಟ್ಟರು.

ಜನರಿಗೆ ಕಾಡು ಹುಲಿಗಿಂತ ರಾಹುಲ್​ ದ್ರಾವಿಡ್​ ಅವರನ್ನೇ ನೋಡುವುದರಲ್ಲಿ ಹೆಚ್ಚು ಆಸ್ಥೆ ವಹಿಸಿದರು. ಪ್ರಪಂಚದಾದ್ಯಂತ ಸುಮಾರು 4,000 ಹುಲಿಗಳಿವೆ. ಆದರೆ, ರಾಹುಲ್​ ದ್ರಾವಿಡ್​ ಅವರು ಭಾರತೀಯ ಕ್ರಿಕೆಟ್​ನ ಏಕೈಕ ಹುಲಿ ಎಂದು ಅವರು ಬಣ್ಣಿಸಿ ಬರೆದಿದ್ದಾರೆ. ರಾಸ್​​ ಟೇಲರ್​ ಅವರು ಬ್ಲ್ಯಾಕ್​ ಅಂಡ್​ ವೈಟ್​ ಪುಸ್ತಕದಲ್ಲಿ ರಾಜಸ್ಥಾನ ತಂಡದ ಮಾಲೀಕರು ತಮ್ಮ ಕಪಾಳಕ್ಕೆ ಹೊಡೆದ ಬಗ್ಗೆ, ನ್ಯೂಜಿಲ್ಯಾಂಡ್ ತಂಡದಲ್ಲಿದ್ದಾಗ ತಮಗಾದ ಜನಾಂಗೀಯ ನಿಂದನೆ ಬಗ್ಗೆಯೂ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: IPL ತಂಡದ ಮಾಲೀಕರಿಂದ ಮೂರ್ನಾಲ್ಕು ಸಲ ಕಪಾಳಮೋಕ್ಷ.. ಸ್ಫೋಟಕ ಮಾಹಿತಿ ಬಿಚ್ಚಿಟ್ಟ ರಾಸ್ ಟೇಲರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.