ETV Bharat / sports

50ನೇ ಟೆಸ್ಟ್​ನಲ್ಲಿ ಮೊದಲ ಐಸಿಸಿ ಪ್ರಶಸ್ತಿ ಗೆಲ್ತಾರಾ ನಾಯಕ ರೋಹಿತ್​ ಶರ್ಮಾ?

author img

By

Published : Jun 7, 2023, 12:13 PM IST

ಟೆಸ್ಟ್​ ವೃತ್ತಿ ಜೀವನದ 50ನೇ ಪಂದ್ಯ ಆಡುತ್ತಿರುವ ಭಾರತ ತಂಡದ ನಾಯಕ ರೋಹಿತ್​ ಶರ್ಮಾ, ಪ್ರಶಸ್ತಿ ಗೆಲ್ಲುವ ಮೂಲಕ ಸ್ಮರಣೀಯವಾಗಿಸುವ ಬಯಕೆಯಲ್ಲಿದ್ದಾರೆ.

ನಾಯಕ ರೋಹಿತ್​ ಶರ್ಮಾ
ನಾಯಕ ರೋಹಿತ್​ ಶರ್ಮಾ

ಓವಲ್: ಇಂದಿನಿಂದ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಆಡುವ ಮೂಲಕ ಭಾರತ ಕ್ರಿಕೆಟ್​ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ವೃತ್ತಿಜೀವನದ 50 ನೇ ಟೆಸ್ಟ್ ಪಂದ್ಯವನ್ನಾಡಲಿದ್ದಾರೆ. ಆಸ್ಟ್ರೇಲಿಯಾ ಎದುರು ಗೆಲ್ಲುವ ಮೂಲಕ ಅವರು ತಮ್ಮ 50 ನೇ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸುವ ಹುಮ್ಮಸ್ಸಿನಲ್ಲಿದ್ದಾರೆ.

  • Rohit Sharma will be playing his 50th Test match today:

    •Matches - 49
    •Innings - 83
    •Runs - 3379
    •Average - 45.66
    •Hundreds - 9
    •Fifties - 14

    He has 52.76 average, 6 Hundreds, 4 fifties, 1 double hundred in 36 innings as a opener in Tests - The Hitman! pic.twitter.com/ZwBPnGhmcq

    — CricketMAN2 (@ImTanujSingh) June 7, 2023 " class="align-text-top noRightClick twitterSection" data=" ">

ರೋಹಿತ್ ಶರ್ಮಾ ಇಲ್ಲಿಯವರೆಗೆ ಒಟ್ಟು 49 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 83 ಇನ್ನಿಂಗ್ಸ್‌ಗಳಲ್ಲಿ 45.66 ರ ಬ್ಯಾಟಿಂಗ್ ಸರಾಸರಿಯೊಂದಿಗೆ 3,379 ರನ್ ಗಳಿಸಿದ್ದಾರೆ. ಇದರಲ್ಲಿ 9 ಶತಕ ಮತ್ತು 14 ಅರ್ಧ ಶತಕ, 1 ದ್ವಿಶತಕ ಗಳಿಸಿದ್ದಾರೆ.

ಭಾರತ ತಂಡದ ನಾಯಕ ಟೆಸ್ಟ್ ಪಂದ್ಯಗಳಲ್ಲಿ ಆರಂಭಿಕನಾಗಿ ಉತ್ತಮ ದಾಖಲೆ ಹೊಂದಿದ್ದಾರೆ. ಒಟ್ಟು 36 ಇನ್ನಿಂಗ್ಸ್‌ಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿದು 52.76 ಸರಾಸರಿಯಲ್ಲಿ ಬ್ಯಾಟ್​ ಮಾಡಿದ್ದಾರೆ. ಈ ವೇಳೆ, 6 ಶತಕಗಳು ಮತ್ತು 4 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಜೊತೆಗೆ ಒಂದು ದ್ವಿಶತಕ ಕೂಡ ಬಾರಿಸಿದ್ದಾರೆ.

ಅಭ್ಯಾಸದ ವೇಳೆ ಹೆಬ್ಬೆರಳಿಗೆ ಗಾಯ: ಡಬ್ಲ್ಯೂಟಿಸಿ ಫೈನಲ್​ಗಾಗಿ ನಿನ್ನೆ ಅಭ್ಯಾಸದ ವೇಳೆ ರೋಹಿತ್ ಶರ್ಮಾ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಬಳಿಕ ಅಭ್ಯಾಸದಿಂದ ದೂರವೇ ಉಳಿದಿದ್ದರು. ಗಾಯದ ತೀವ್ರತೆ ಕಡಿಮೆ ಇರುವ ಕಾರಣ ಅವರು ಇಂದಿನ ಪಂದ್ಯಕ್ಕೆ ಲಭ್ಯರಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

2 ಐಸಿಸಿ ಟ್ರೋಫಿ ಗೆಲ್ಲಲು ಬಯಸುವೆ: ಇದಕ್ಕೂ ಮೊದಲು ಚಾಂಪಿಯನ್​ಶಿಪ್​ ಗೆಲುವಿನ ಬಗ್ಗೆ ಮಾತನಾಡಿದ್ದ ರೋಹಿತ್​ ಶರ್ಮಾ, ನಾಯಕತ್ವ ತ್ಯಜಿಸುವ ಮೊದಲು ಕನಿಷ್ಠ 2 ಐಸಿಸಿ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದ್ದೇನೆ. ಕಳೆದ 10 ವರ್ಷಗಳಲ್ಲಿ ಭಾರತ ತಂಡ ಯಾವುದೇ ಐಸಿಸಿ ಟ್ರೋಫಿ ಈ ಬರವನ್ನು ನೀಗಿಸಬೇಕು ಎಂಬುದು ನನ್ನಾಸೆ. ಓವಲ್​ನಲ್ಲಿ ನಡೆಯುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಗೆಲುವಿನ ಮೂಲಕ ಮೊದಲ ಪ್ರಶಸ್ತಿಯನ್ನು ಎತ್ತಿ ಹಿಡಿಯುವ ಬಯಕೆ ಇದೆ ಎಂದು ಹೇಳಿದ್ದಾರೆ.

2022 ರಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಸರಣಿ ಸೋಲಿನ ಬಳಿಕ ಮಾಜಿ ನಾಯಕ ವಿರಾಟ್​ ಕೊಹ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ನಂತರ ರೋಹಿತ್​ ಶರ್ಮಾ ಎಲ್ಲ ಸ್ವರೂಪಗಳ ತಂಡಕ್ಕೆ ನಾಯಕರಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು. ಭಾರತ ತಂಡ ಕಳೆದ ಬಾರಿ ಡಬ್ಲ್ಯೂಟಿಸಿ ಫೈನಲ್​ಗೆ ಬಂದಿದ್ದರೂ ಸೋಲು ಅನುಭವಿಸಿ ಪ್ರಶಸ್ತಿಯಿಂದ ವಂಚಿತವಾಗಿತ್ತು. ಇದೀಗ ಮತ್ತೊಂದು ಅವಕಾಶ ಬಂದೊದಗಿದ್ದು, ಪ್ರಶಸ್ತಿ ಗೆಲ್ಲುವ ಭರವಸೆಯಲ್ಲಿದೆ.

ತಂಡದ ಮೇಲೆ ಪ್ರಶಸ್ತಿ ಗೆಲ್ಲುವ ಒತ್ತಡವಿಲ್ಲ. ಟ್ರೋಫಿ ಜಯಿಸಬೇಕು ಎಂಬುದು ಎಲ್ಲ ಆಟಗಾರರ ಕನಸಾಗಿರುತ್ತದೆ. ಇದಕ್ಕಾಗಿ ತಂಡ ಪರಿಶ್ರಮ ವಹಿಸಿದೆ. ಈ ಬಾರಿಯ ಅದನ್ನು ನನಸು ಮಾಡಿಕೊಳ್ಳುವ ಇರಾದೆಯಲ್ಲಿದೆ. ತಮ್ಮ ನಾಯಕತ್ವದಲ್ಲಿ ಪ್ರಶಸ್ತಿ ಗೆಲ್ಲಬೇಕು ಎಂಬುದು ಎಲ್ಲ ನಾಯಕರ ಕನಸಾಗಿರುತ್ತದೆ. ಈ ಬಾರಿ ಅದು ಸಾಕಾರವಾಗಲಿದೆ ಎಂದು ರೋಹಿತ್​ ಹೇಳಿದರು.

ಇದನ್ನೂ ಓದಿ: ತಾರಾ ಕುಸ್ತಿಪಟುಗಳ ಪ್ರತಿಭಟನೆ: ಮತ್ತೊಮ್ಮೆ ಚರ್ಚೆಗೆ ಆಹ್ವಾನಿಸಿದ ಕೇಂದ್ರ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.