ETV Bharat / sports

ಮೈದಾನದಲ್ಲಿದ್ದರೆ ಸೂರ್ಯ, ತಂಡಕ್ಕಿಲ್ಲ ಭಯ: ರೋಹಿತ್​ ಶರ್ಮಾ ಮೆಚ್ಚುಗೆ

author img

By

Published : Nov 6, 2022, 10:34 PM IST

Updated : Nov 6, 2022, 10:59 PM IST

ಟಿ20 ವಿಶ್ವಕಪ್​ನಲ್ಲಿ ಸೂರ್ಯನ ಪ್ರಖರ ಬ್ಯಾಟಿಂಗ್​ಗೆ ನಾಯಕ ರೋಹಿತ್​ ಶರ್ಮಾ ಫಿದಾ ಆಗಿದ್ದು, ಮೆಚ್ಚುಗೆಯ ಮಾತನ್ನಾಡಿದ್ದಾರೆ. ಯಾದವ್​ ಕ್ರೀಸಿನಲ್ಲಿ ಇರುವವರೆಗೂ ತಂಡಕ್ಕೆ ಭಯವೇ ಇಲ್ಲ ಎಂದು ಹೇಳಿದ್ದಾರೆ.

Rohit on Suryakumar
ರೋಹಿತ್​ ಶರ್ಮಾ

ಮೆಲ್ಬೋರ್ನ್(ಆಸ್ಟ್ರೇಲಿಯಾ): ಟಿ20 ವಿಶ್ವಕಪ್​ನಲ್ಲಿ ಮನಮೋಹಕ ಪ್ರದರ್ಶನ ನೀಡುತ್ತಿರುವ ಸೂರ್ಯಕುಮಾರ್​ ಯಾದವ್​ ಬ್ಯಾಟಿಂಗ್​ಗೆ ನಾಯಕ ರೋಹಿತ್​ ಶರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಸೂರ್ಯ ಮೈದಾನದಲ್ಲಿ ಬ್ಯಾಟಿಂಗ್​ ಮಾಡುತ್ತಿದ್ದರೆ, ತಂಡ ನಿರಾಳವಾಗಿರುತ್ತದೆ" ಎಂದು ಹೇಳಿದ್ದಾರೆ.

ಜಿಂಬಾಬ್ವೆ ವಿರುದ್ಧ 71 ರನ್​ಗಳ ಗೆಲುವು ಸಾಧಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್​ ಶರ್ಮಾ, ಸೂರ್ಯಕುಮಾರ್ ಯಾದವ್​ ನಂ.1 ಬ್ಯಾಟರ್​ ಖ್ಯಾತಿಯಂತೆ ಆಟವಾಡುತ್ತಿದ್ದಾರೆ. ಆತ ಮೈದಾನದಲ್ಲಿ ಬ್ಯಾಟ್​ ಬೀಸುವವರೆಗೂ ಪೆವಿಲಿಯನ್​ನಲ್ಲಿರುವ ತಂಡಕ್ಕೆ ತಲೆನೋವೇ ಇರುವುದಿಲ್ಲ. ರನ್​ಗಳು ಖಾತೆ ಸೇರುತ್ತಿರುತ್ತವೆ ಎಂದು ಹೇಳಿದರು.

ಸೂರ್ಯಕುಮಾರ್​ ಮೈದಾನಕ್ಕಿಳಿದ ತಕ್ಷಣವೇ ಆಕ್ರಮಣಕಾರಿ ಆಟವಾಡಲು ಶುರು ಮಾಡುತ್ತಾರೆ. ಇದರಿಂದ ಇನ್ನೊಬ್ಬ ಬ್ಯಾಟರ್​ಗೆ ಒತ್ತಡ ಕಡಿಮೆಯಾಗುತ್ತದೆ. ಇದು ತಂಡಕ್ಕೂ ಲಾಭವಾಗಲಿದೆ. ಒತ್ತಡವನ್ನು ನಿಭಾಯಿಸುವ ಶಕ್ತಿ ಸೂರ್ಯಕುಮಾರ್​ಗೆ ಇದೆ. ಆತನ ಸಾಮರ್ಥ್ಯ ತಂಡಕ್ಕೆ ಗೊತ್ತಿದೆ ಎಂದು ರೋಹಿತ್ ಹೇಳಿದರು.

ರವಿಚಂದ್ರನ್ ಅಶ್ವಿನ್ 3 ವಿಕೆಟ್​ ಪಡೆಯುವ ಮೂಲಕ ಜಿಂಬಾಬ್ವೆಗೆ ಮಾರಕವಾದರು. ಅಶ್ವಿನ್​ ಹಿರಿಯ ಆಲ್​ರೌಂಡರ್​ ಆಟಕ್ಕೆ ತಕ್ಕಂತೆ ಪ್ರದರ್ಶನ ನೀಡಿದರು. ಬೌಲರ್​ಗಳು ಕೂಡ ಕರಾರುವಾಕ್​ ದಾಳಿ ನಡೆಸಿದ್ದರಿಂದ ಜಿಂಬಾಬ್ವೆ ಆಲೌಟ್​ ಆಯಿತು. ಇದರಿಂದ ಸೆಮಿಫೈನಲ್​ ತಲುಪಲು ನೆರವಾಯಿತು ಎಂದು ಹೇಳಿದರು.

ಇಂಗ್ಲೆಂಡ್​ ಎದುರು ಕಠಿಣ ಸವಾಲು: ಅಡಿಲೇಡ್ ಓವಲ್‌ನಲ್ಲಿ ಇಂಗ್ಲೆಂಡ್​ ತಂಡ ಸೆಮಿಫೈನಲ್‌ನಲ್ಲಿ ಎದುರಾಗಲಿದೆ. ಬಲಿಷ್ಠ ತಂಡವನ್ನು ಕಟ್ಟಿಹಾಕುವಾಗ ಪರಿಸ್ಥಿತಿಗೆ ತಕ್ಕಂತೆ ಆಟವಾಡಬೇಕು. ತ್ವರಿತವಾಗಿ ಆಟಕ್ಕೆ ಹೊಂದಿಕೊಳ್ಳಬೇಕು. ಸೆಮೀಸ್​ ಗೆದ್ದರೆ ಫೈನಲ್​ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದ್ದೇವೆ. ತಂಡದ ಪ್ರದರ್ಶನದ ಬಗ್ಗೆ ಗರ್ವವಿದೆ. ಇದು ಮುಂದಿನ ಪಂದ್ಯಗಳಲ್ಲೂ ಮುಂದುವರೆಯಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು.

ಓದಿ: ವಿರಾಟ್​ ಕೊಹ್ಲಿಯೂ ಸಾಧಿಸದ ದಾಖಲೆ ಬರೆದ ಸೂರ್ಯಕುಮಾರ್​​​.. ಏನದು?

Last Updated : Nov 6, 2022, 10:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.