ETV Bharat / sports

ಮ್ಯಾಚೆಂಸ್ಟರ್​​ನಲ್ಲಿ ರಿಷಭ್ ಶತಕ.. ಇಂಗ್ಲೆಂಡ್ ನೆಲದಲ್ಲಿ ಈ ದಾಖಲೆ ಬರೆದ ಏಷ್ಯಾದ ಏಕೈಕ ವಿಕೆಟ್ ಕೀಪರ್!

author img

By

Published : Jul 18, 2022, 3:16 PM IST

ಮ್ಯಾಂಚೆಸ್ಟರ್ ಮೈದಾನದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಅಬ್ಬರಿಸಿದ ರಿಷಭ್ ಪಂತ್​ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ. ಇದರ ಜೊತೆಗೆ ಅನೇಕ ದಾಖಲೆ ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.

Rishabh Pant record
Rishabh Pant record

ಮ್ಯಾಚೆಂಸ್ಟರ್​​(ಇಂಗ್ಲೆಂಡ್​): ಇಂಗ್ಲೆಂಡ್ ವಿರುದ್ಧ ಮ್ಯಾಚೆಂಸ್ಟರ್ ಮೈದಾನದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಪಂತ್​​ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಅನೇಕ ದಾಖಲೆ ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ. ಪ್ರಮುಖವಾಗಿ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್​​ನಲ್ಲಿ ಶತಕ ಸಿಡಿಸಿರುವ ಏಷ್ಯಾದ ಏಕೈಕ ವಿಕೆಟ್ ಕೀಪರ್ ಎಂಬ ಸಾಧನೆಗೂ ಅವರು ಪಾತ್ರರಾಗಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಪಾಲಿಗೆ ಆಪತ್ಭಾಂದವನ ಆಟವಾಡಿದ ಪಂತ್ ತಾವು ಎದುರಿಸಿದ 113 ಎಸೆತಗಳಲ್ಲಿ ಅಜೇಯ 125 ರನ್​​ಗಳಿಕೆ ಮಾಡಿ, ತಂಡವನ್ನ ಗೆಲುವಿನ ದಡ ಸೇರಿಸಿದರು. ಈ ಮೂಲಕ ಭಾರತದ ಪರ ರಾಹುಲ್​ ದ್ರಾವಿಡ್​, ಕೆಎಲ್ ರಾಹುಲ್ ಬಳಿಕ ವಿದೇಶಿ ನೆಲದಲ್ಲಿ ಶತಕ ಸಿಡಿಸಿರುವ ಮೂರನೇ ವಿಕೆಟ್ ಕೀಪರ್ ಬ್ಯಾಟರ್​ ಆಗಿ ಹೊರಹೊಮ್ಮಿದ್ದಾರೆ.

ಟೆಸ್ಟ್​, ODIನಲ್ಲಿ ಶತಕ ಸಿಡಿಸಿದ ಏಕೈಕ ಏಷ್ಯಾ ವಿಕೆಟ್​ ಕೀಪರ್: ಕಳೆದ ಕೆಲ ದಿನಗಳ ಹಿಂದೆ ಭಾರತ - ಇಂಗ್ಲೆಂಡ್ ತಂಡಗಳ ನಡುವೆ ನಡೆದ ಫೈನಲ್ ಟೆಸ್ಟ್​ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ಪಂತ್, ಇದೀಗ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದರು. ಈ ಮೂಲಕ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಮತ್ತು ಏಕದಿನ ಎರಡರಲ್ಲೂ ಶತಕ ದಾಖಲಿಸಿದ ಏಷ್ಯಾದ ಮೊದಲ ವಿಕೆಟ್​ ಕೀಪರ್ ಬ್ಯಾಟರ್ ಆಗಿದ್ದಾರೆ. ಇದರ ಜೊತೆಗೆ ಏಕದಿನ ಕ್ರಿಕೆಟ್​ನಲ್ಲಿ ರಿಷಭ್ ಪಂತ್ ಬ್ಯಾಟ್​ನಿಂದ ಸಿಡಿದ ಮೊದಲ ಶತಕ ಇದಾಗಿದೆ.

ಇದನ್ನೂ ಓದಿರಿ: ರಿಷಬ್​ ಪಂತ್​ ಹೆಸರು ನೆನಪಿಡಿ! ನಿರ್ಭಯ ಆಟಗಾರನ ಬ್ಯಾಟಿಂಗ್‌ ಮೋಡಿಗೆ ಕ್ರಿಕೆಟ್‌ ಲೋಕ ನಿಬ್ಬೆರಗು

ಏಷ್ಯಾದಿಂದ ಹೊರಗಡೆ ಶತಕ ಸಿಡಿಸಿದ ಮೂರನೇ ವಿಕೆಟ್ ಕೀಪರ್​: ರಾಹುಲ್​ ದ್ರಾವಿಡ್​, ಕೆ.ಎಲ್​ ರಾಹುಲ್ ನಂತರ ಏಷ್ಯಾದಿಂದ ಹೊರಗಡೆ ವಿದೇಶಿ ನೆಲದಲ್ಲಿ ಶತಕ ಸಿಡಿಸಿದ ಮೂರನೇ ಭಾರತೀಯ ವಿಕೆಟ್ ಕೀಪರ್​ ಆಗಿ ಪಂತ್ ಹೊರಹೊಮ್ಮಿದ್ದಾರೆ. ಈ ಹಿಂದೆ ದ್ರಾವಿಡ್​ 1999ರಲ್ಲಿ ಶ್ರೀಲಂಕಾ ವಿರುದ್ಧ ಇಂಗ್ಲೆಂಡ್​ನಲ್ಲಿ ಹಾಗೂ 2020ರಲ್ಲಿ ಕೆ.ಎಲ್ ರಾಹುಲ್​ ನ್ಯೂಜಿಲ್ಯಾಂಡ್​ ವಿರುದ್ಧ ಶತಕ ಸಿಡಿಸಿ ಮಿಂಚಿದ್ದರು. ಇದೀಗ ಪಂತ್ ಕೂಡ ಆ ದಾಖಲೆ ಪಟ್ಟಿಗೆ ಸೇರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.